ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಸಂತೋಷದಿಂದ ಅನುಭವಿಸುವುದನ್ನು ತಿಳಿದುಕೊ, ನಿನ್ನ ಕರ್ಮಗಳನ್ನು ತೃಪ್ತಿಯಿಂದ ಧರ್ಮಕ್ಕೆ ಅನುಸಾರವಾಗಿ ಮಾಡು. ರಾತ್ರಿಯನ್ನು ಅನುಸರಿಸಿ ಹಗಲು ಬರುವಂತೆ, ವಿಪತ್ತನ್ನು ಅನುಸರಿಸಿ ಸಂಪತ್ತು ಬಂದೇ ಬರುವುದು, 'ಇದು ಎಂದಿಗೂ ತಪ್ಪುವುದಿಲ್ಲ.” ಈ ರೀತಿಯಲ್ಲಿ ಟರ್ಮಾಸಿಲಿಸ್ಸನು ಹೇಳಿದ ಕೂಡಲೆ, ಅಂಧಕಾರ ರೂಪ ವಾದ ನನ್ನ ವಿಧ್ಯವು ತೊಲಗಿತು, ಜಗದೀಶ್ವರನೇ ಇವನ ರೂಪದಿಂದ ನನ್ನ ಸಂತಾಪವನ್ನು ಹೋಗಲಾಡಿಸುವುದಕ್ಕೆ ಬಂದಿರಬೇಕೆಂದು ಗೊತ್ತಾಯಿತು. ಅಜ್ಞಾನದ ಮಹಿಮೆಯಿಂದ ನಾನು ಮಾಡಿದ ಆತ್ಮಹತ್ಯೋದ್ಯೋಗವು ತಪ್ಪೆಂದು ಗೊತ್ತಾಯಿತು, ಆಗ ಸಿಲಿಸ್ಸನನ್ನು ನೋಡಿ, ಎಲೆ ತಂದೆಯೇ ಮೋಹಪರವಶ ನಾಗಿ ಮಾಡಿದ ಅಪರಾಧಗಳನ್ನು ಕ್ಷಮಿಸು, ಮೆಂಟರನ ಸಹವಾಸದಲ್ಲಿ ಇರುವ ವರೆಗೂ ನಾನು ಮಾಡಿದ ತಪ್ಪುಗಳನ್ನು ಅವನು ಆಗಾಗ್ಗೆ ತಿದ್ದುತ್ತಿದ್ದನು. ದುರಾ ತ್ಮನಾದ ಮೆಟೋಫಿಸ್ಸನು ಅವನಿಗೂ, ನನಗೂ ವಿಯೋಗವಾಗುವಂತ ಮರಿ ದನು. ಮಹಾತ್ಮರ ಸಾನ್ನಿಧ್ಯಸುಖವು, ಆ ಸಾನ್ನಿಧ್ಯವಿರುವವರೆಗೂ ತಿಳಿಯುವ ದಿಲ್ಲ, ಅದು ತಪ್ಪಿದ ಕೂಡಲೆ ವ್ಯಕ್ತವಾಗುವುದು. ಮೆಂಟರನ ಸಾನ್ನಿಧ್ಯ ಬಲ ದಿಂದ ಕ್ಯಾಂಡಿಯಾ ದ್ವೀಪದಲ್ಲಿ ಸಕ್ಕೋತೃ ಷ್ಟನೆಂದು ನಾನು ಭಾವಿಸಲ್ಪಟ್ಟನು. ಆ ದ್ವೀಪದ ಪ್ರಭುತ್ವಕ್ಕೆ ನಾನು ಬರಬೇಕೆಂದು ಸರ್ವರೂ ಏಕಕಂಠದಿಂದ ಪ್ರಾರ್ಥಿ ಸುವಂತಹ ಸ್ಥಿತಿಗೆ ಬಂದೆನು, ಮೆಂಟರನ ಆಶ್ರಯವು ತಪ್ಪಿದ ಮೇಲೆ, ಕುರುಬರ ಅಧನುರಿಗಿಂತಲೂ ಕಡಮೆಯಾದ ಹೇಡಿತನವು ನನ್ನಲ್ಲಿ ಕಾಣಬಂದಿತು, ಇರು ಸ್ವಭಾವ, ಮಹಾತ್ಮರ ಸಹವಾಸದ ಮಹಿಮೆಯು ಇದರಿಂದ ಸ್ಪಷ್ಟವಾಗುತ್ತದೆ. ಜನಗಳ ಸಹವಾಸದಿಂದ ಅವರ ಯೋಗ್ಯತೆಯು ಗೊತ್ತಾಗುವುದು, ಅಜ್ಞಾನಿಗ ಳಾಗಿಯೂ, ಅಜಿತೇಂದ್ರಿಯರಾಗಿಯ, ಅರಿಷಡ್ವರ್ಗಗಳಿಗೆ ಅಧೀನರಾಗಿಯೂ, ಹೊನ್ನು, ಹೆಣ್ಣು, ಮಣ್ಣುಗಳಿಗೆ ಅಧೀನರಾಗಿಯೂ, ರುಜಮಾರ್ಗಪ್ರವರ್ತ ನಕ್ಕೆ ಪರಾಣ್ಮುಖರಾಗಿಯೂ ಇರತಕ್ಕೆ ಜನಗಳ ಸಹವಾಸದಲ್ಲಿ ಯಾರಾದರೂ. ಇದ್ದರೆ, ಇವರೂ ಅವರಂತೆಯೇ ಇರಬಹುದೆಂದು ಹೇಳಿದರೆ, ಅದು ಎಂದಿಗೂ ಅಸಂಭವವಾಗಲಾರದು. ನನ್ನ ಅವಸ್ಥೆ ಯು ಹೀಗೆ ಆಗುವುದಕ್ಕೆ ಸಹವಾಸ ಮà ಮೆಯೇ ಮುಖ್ಯ ಕಾರಣ, ವ್ಯಟಿಸ್ಸನು ಇತರ ಕುರುಬರಿಗಿಂತಲೂ ನನ್ನನ್ನು ಕಡೆಯಾಗಿ ಕಂಡು, ದುಸ್ಸಹವಾದ ಕಷ್ಟಕ್ಕೆ ಗುರಿಮಾಡಿದನು, ಅದನ್ನು ಸಹಿಸಿಕೊಳ್ಳುವ ಶಕ್ತಿಯು ಇಲ್ಲದೆ, ಕೇವಲ ಪಾಮರನಂತೆ ನಾನು ನಡೆದು ಕೊಂಡೆನು. ಬಂದ ಕಷ್ಟಗಳನ್ನು ಅನುಭವಿಸುತ್ತಾ, ಅವುಗಳ ನಿವಾರ ಯವನ್ನು ಮಾಡುತ್ತಾ ಇರುವುದು ಕರ್ತವ್ಯವೆಂದು ನೀನು ಮಾಡಿದ ಹಿತೋಪದೇ