ಅಲಿಪ್ತ ವಾದ ಪ್ರೇಮಸಂಯೋಗ ವಾದ ವ್ಯಾಸಂಗಗಳನ್ನು ನಡಿಸುತ್ತೆ ಆನಂದದಲ್ಲಿದ್ದರು ಆದರೆ ಇನ್ನು ಮುಂದೆ ಪ್ರದ್ಯುಮ್ಮ ನ ಆಯುಷ್ಯ ಕ್ರಮದಲ್ಲಿ ವಿಲಕ್ಷಣವಾದ ಕ್ರಾಂತಿಯಾಗತಕ್ಕದ್ದಿತ್ತು, ತ್ರಿಗರ್ತ ಸಂಸ್ಥಾನಾಧಿಪತಿಗಳಾದ ಮಹಾರಾಜಾ ನಹುಷಸಿಂಹ ಬಹಾ ಧ್ವನವರು ಕಲಕತ್ತೆಗೆ ಬಂದಿದ್ದು ಹಿಂದುಸ್ಥಾನದಲ್ಲಿಯ ಇತಿಹಾಸ ಪ್ರಸಿದ್ಧ ಸ್ಥಳಗಳನ್ನೂ, ಪರಮ ರಮಣೀಯವಾಗಿರುವ ಬೇರೆ ಅನೇಕ ಸ್ಥಾನ ಗಳನ್ನೂ ನೋಡುವದಕ್ಕಾಗಿ ಅವರು ಸಕುಟುಂಬವಾಗಿ ಹೊರಡಬೇಕಾದ್ದರಿಂದ ಒಬ್ಬ ಚತುರನೂ, ವಿನೀತನೂ, ಕಾರ್ಯದಕ್ಷಮ್ಮ, ಒಳ್ಳೆ ವಿಶ್ವಾಸದವನ ಆಗಿರುವ ವ್ಯವಸ್ಥಾಪಕನ ಅವಶ್ಯಕತೆ ಅವರಿಗಿತ್ತು. ಕಲಕತ್ತಾ ಕಾಲೇಜಗ ಪ್ರಿನ್ಸಿಪಾಲರ ಬಳಿಗೆ ಹೋಗಿ ಮಹಾರಾಜರು ತಮಗೊಬ್ಬ ವ್ಯವಸ್ಥಾಪಕ ನನ್ನು ಗೊತ್ತು ಮಾಡಿಕೊಡಿರೆಂದು ಕೇಳಲಾಗಿ, ಅವರು ಪ್ರದ್ಯುಮ್ಮನ ಗುಣಾನುವಾದವನ್ನು ಬಹುಪರಿಯಾಗಿ ಮಾಡಿ ಅವನನ್ನು ಹೊರತುಪಡಿಸಿ ಇನ್ನೊಬ್ಬ ಯೋಗ್ಯನಾದ ವ್ಯವಸ್ಥಾಪಕನು ತಮಗೆ ಸಿಕ್ಕನೆಂದು ಪ್ರಿನ್ಸಿಪಾಲರು ಮಹಾರಾಜರಿಗೆ ಹೇಳಿದರು ಅನಾಯಾಸವಾಗಿ ದೇಶಸಂಚಾರ ಮಾಡುವ ಸುಖಕರವಾದ ಸಾಧನವು ತನಗೆ ಪ್ರಾಪ್ತವಾಗಿರಲು ಪ್ರದ್ಯುಮ್ಮನು ಸಂಡಲೆ ಒಪ್ಪಿಕೊಂಡು, ತ್ರಿಗರ್ತದ ಮುಖ್ಯ ಪಟ್ಟಣವಾದ ಶೃಂಗಾರಪುರಿಗೆ ಅವನು ಮಹಾರಾಜರೊಡನೆ ನಡೆದನು ಮಹಾರಾಜ ನಹುಷಸಿಂಹರ ಕುಟುಂಬದಲ್ಲಿ ಅವರ ರಾಣಿ ಯವರಾದ ಪ್ರಮಾದ ಹೃದಯಾದೇವಿಯಾ, ನವತರುಣಳಾದ ರಾಜಕುಮಾರಿ ಪ್ರೇಮ ಸುಂದರಿಯ, ಹನ್ನೆರಡು ವರುಷದ ಚಿಕ್ಕ ಯುವರಾಜನಾದ ರಘುವೀರ ಸಿಂಹನೂ ಹೀಗೆ ನಾಲ್ಕೆ ಜನರಿದ್ದರು. ಮಹಾರಾಜರಿಗೆ ಮಾತುಕಥೆಯಾಡುವಷ್ಟು ಮಾತ್ರಕ್ಕೆ ಇಂಗ್ಲಿಷ ಬರು ಇದ್ದರೂ ಅವರು ಬಹುಶ್ರು, ಒಳ್ಳೇ ವ್ಯವಹಾರಜ್ಞಾನಿಗಳೂ, ಉದಾರ ವಾದ ಮನಸ್ಸಿನವರು, ವಿದ್ಯಾಭಿಮಾನಿಗಳ ಆಗಿದ್ದರು. ರಾಣಿಯವರ ವಿಚಾರಗಳುಳ್ಳವರೂ, ಆದರಶೀಲರೂ ಹಿಂದೀ ಭಾಷೆಯಲ್ಲಿ ಓದು ಬರೆಯಲು ಬಲ್ಲವರೂ ಆಗಿದ್ದರು. ಕುಮಾರಿ ಪ್ರೇಮಸುಂದರಿಗೆ ಅವಳ ತೀಕ್ಷ್ಮವಾದ ಬುದ್ಧಿಗೆ ಉಚಿತ ದರೂ ಸುಸಂಸ್ಕೃತ
ಪುಟ:ತೊಳೆದ ಮುತ್ತು.pdf/೪೩
ಗೋಚರ