ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲಿಪ್ತ ವಾದ ಪ್ರೇಮಸಂಯೋಗ ಕೇಳಿಕೊಳ್ಳುತ್ತಿದ್ದರು. ಗಾನಗಳ ಸ್ವರಸಂಯೋಗದಲ್ಲಿ ಆ ಗುರುಶಿಷ್ಯರಲ್ಲಿ ಮತಭೇದ ಬಂದಾಗ ಪ್ರದ್ಯುಮ್ಮನೇ ನಿರ್ಣಯವನ್ನು ಕೊಡುವನು. ಹೀಗಾಗಿ ಯಾವ ಮಾತಿನಲ್ಲಿಯಾಗಲಿ, ಯಾವ ವಿಷಯದಲ್ಲಿಯಾಗಲಿ ಆ ಅರಮನೆ ಯಲ್ಲಿ ಪ್ರದ್ಯುಮ್ನ ಅಭಿಪ್ರಾಯ ವೇ ಪ್ರಮಾಣವಾಗಿತ್ತು, ಪ್ರದ್ಯುಮ್ಮ ನ ವಿದ್ಯಾಚಾತುರ್ಯಗಳನ್ನು ಕಂಡು, ಪ್ರೇಮ ಸುಂದರಿಗೆ ಕೌತುಕವಾಗಿತ್ತು ಆವನ ವಿನ ಯಶಾಲೀನತೆ ಸೌಜನ್ಯಗಳನ್ನು ಕಂಡು ಆದರವೂ ಅವನ ಚತುರೋಕ್ತಿಗಳನ್ನು ಕೇಳಿ ವಿನೋದವೂ, ಅವನ ಅಪ್ರತಿಮ ವಾದ ಸೌಂದರ್ಯವನ್ನು ಕಂಡು ಹರ್ಷವೂ ಆ ನವತರುಣಿಗೆ ಆಗುತ್ತಿರು ವದು ಸಹಜವೇ, ಆದರೆ ಬರಬರುತ್ತೆ ಪ್ರದ್ಯುಮ್ಮ ನನ್ನು ತಾನು ಬಹಳೊ ತಿನ ವರೆಗೆ ಕಾಣದಿದ್ದರೆ ಅವಳ ಜೀವಕ್ಕೆ ಸಮಾಧಾನವಾಗದಂತಾಯಿತು. ಕೊಳ್ಳತಕ್ಕ ದುಕೂಲಗಳ ಜರತಾರಿಯನ್ನು ಪರೀಕ್ಷಿಸುವದಕ್ಕಾಗಲಿ, ತಾನು ತೆಗೆದಿದ್ದ ಚಿತ್ರ ಪಟದಲ್ಲಿಯ ದೋಷಗಳನ್ನು ತೋರಿಸಿಕೊಡುವದಕ್ಕಾಗಲಿ, ಇನ್ನೊಂದು ನವಕ್ಕಾಗಲಿ, ಪ್ರೇಮ ಸುಂದರಿಯು ಪ್ರದ್ಯುಮ್ಮನನ್ನು ತನ ಬಳಿಗೆ ಕರೆಸಿಕೊಂಡು ಅವನೊಡನೆ ನಾಲ್ಕು ಮಾತಾಡಿ ಕಳಿಸಿಕೊಡುತ್ತಿದ್ದಳು, ಇವೆಲ್ಲ ಪ್ರೇಮಸಮುದ್ಗತಿಯ ಚಿನ್ಮಗಳೇನು ? ಇನ್ನು ಹೇಳಲಾಗದು. ಕಾಲ್ಪನಿಕವಾದ ಸಮಾಜಸ್ಥಿತಿಯ ಅತಿ ಶ್ರೇಷ್ಠವಾದ ಇರುವಿಕೆಯಲ್ಲಿ ವಿಹಾರ ಮಾಡುತ್ತಿರುವವನಾದ ಪ್ರದ್ಯುಮ್ಮ ನ ಮನಸ್ಸಿನಲ್ಲಿ ಅನಂಗನ ಸಂಚಾರವು ಸಹಸಾ ಆಗುವಂತಿಲ್ಲವೆಂದಿಷ್ಟು ಮಾತ್ರ ಹೇಳಲು ನಾವು ಸಮರ್ಥರಿರುತ್ತೇವೆ. ಈ ಪ್ರಕಾರವಾಗಿ ಕೆಲವು ದಿವಸಗಳು ಕಳೆದವು. ಬರಬರುತ್ತೆ ಪ್ರದ್ಯುಮ್ಮನನ್ನು ಕಂಡರೆ ಪ್ರೇಮ ಸುಂದರಿಯ ಮನಸ್ಸಿನಲ್ಲಿ ಲಜ್ಜೆಯು, ಮಃಖವಲ್ಲಿ ಈಷತ್ ಮಂದಹಾಸವೂ, ಅವನನ್ನು ಮಾತಾಡಿಸಲು ಹೃದಯ ದಲ್ಲಿ ಆಧೈರ್ಯವೂ ಕೊರಭಾರಂಭಿಸಿದವು ಆದರೆ ಈ ಹೆಚ್ಚು ಕಡಿಮೆಗೆ ೪ಾಗಿರುವದನ್ನಾಗಲಿ, ಅನೇಕ ಉಂಟಾದವೆಂಬದರ ಕಾರಣಗಳ ವಿಚಾರವತಿ ಗಳಿ ಕಲ್ಪ ಮಾತೃಷ್ಟಿಯಲ್ಲಿ ನಡೆದಾಡುವ ಪ್ರದಮ್ಮ ನ ಅವಲೋಕನದಲ್ಲಿ ಬರಲಿಲ್ಲ ಪ್ರದ್ಯುಮ್ಮನ ಗೌರವರ್ಣದ ಕಾಂತಿಯ, ಸೌಷ್ಟವವುಳ್ಳ ಅವನ ದೇಹದ ಜಾರ್ಥ್ಯವೂ, ನಯನ ಮನೋಹರವಾಗಿರುವ ಅವನ ಸುಂದರವಾದ