೨ನೆಯ ಪ್ರಕರಣ-ಇಂದಿರೆಯ ಆತ್ಮ ವೇದನ !
ದೊಳಗಿನ ಕೋಮಲವಿಕಾರವು ಕಠೋರವೂ ಶರೀರದೊಳಗಿನ ಮೃದುತ್ವವು ನಾಶವೂ ಆಗುವದಲ್ಲದೆ ಇನ್ನೂ ಸೃಷ್ಟಿಯ ಕೆಲಕೆಲವು ಶಾಸನಗಳಿಗೆ ಗುರಿಯಾಗಬೇಕಾಗುವದು. ನನಗೆ ಈ ಬಗ್ಗೆ ಒಳ್ಳೆ ಭೀತಿಯಾದದ್ದರಿಂದ ನಾನು ಈ ಸ್ಥಿತಿಯಿಂದ ಲಗು ಮುಕ್ತ ಳಾದೆನು. ನಾನು ಪೂರ್ವದ ಪುರಾಣದೊಳಗಿನ ಸ್ತ್ರೀಯರ ಚರಿತ್ರವನ್ನು ಓದಲಿಕ್ಕೆ ಪ್ರಾರಂಭಿಸಿದೆನು. ಭಾರತ-ರಾಮಾಯಣಗಳಲ್ಲಿ ಒಳ್ಳೆ ವಿಶ್ವಾಸವನ್ನಿಟ್ಟೆನು. ಅವು ಗಳೊಳಗಿನ ಸಾಧೀ ಸ್ತ್ರೀಯರಂತೆ ನಾನೂ ಒಬ್ಬಳು ಆಗಬೇಕೆಂದು ನೆನಿಸಿ, ತದ್ವತ್ ನಡೆದು ಸ್ತ್ರೀಯರ ಪ್ರಾಕೃತಿಕ ಧರ್ಮವನ್ನು ಜೋಕಿಸಿದೆನು; ಆದರೂ ಚಿಕ್ಕಂದಿನಲ್ಲಿ ವಾಣಿ-ಲಜ್ಜೆಗಳ ಮೇಲೆ ಆದ ಕುಪರಿಣಾಮವು ಇನ್ನೂ ಸಮೂಲವಾಗಿ ನಾಶವಾಗಿಲ್ಲ. ಮನೆಯಲ್ಲಿ ನಾಲೈದು ಮಂದಿ ಹೆಂಗಸರಾದರೂ ಇದ್ದರೆ ಈ ದೋಷವೂ ನನ್ನಲಿ ಉಳಿಯುತ್ತಿರಲಿಲ್ಲ. ನನ್ನ ಮಾತಿನಲ್ಲಿ ಹಾಗೇನಾದರೂ ತಪ್ಪು ಸಂಭವಿಸುತ್ತಿದ್ದರೆ, ಸಂಭವಿಸುವ ಕಾರಣವೂ ತಮಗೆ ತಿಳಿಯಲೆಂದು ನಾನು ಇಷ್ಟುದ್ದ ತಮಗೆ ಹೇಳುವ ಪ್ರಸಂಗವು ಪ್ರಾಪ್ತವಾಯಿತು. ಏನಾದರೂ ಭಯಂಕರ ಕೃತ್ಯವನ್ನು ಮಾಡಿ ಒಮ್ಮೆಲೇ ಅನಂತ ದ್ರವ್ಯವನ್ನು ಗಳಿಸುವದು ನನ್ನ ತಂದೆಯ ಸ್ವಭಾವವಾಗಿದೆ. ಇಂದಿನವರೆಗೆ ಇಂಥ ಅನೇಕ ಕೃತ್ಯಗಳನ್ನು ಮಾಡಿರುವನು. ಅವುಗಳಲ್ಲಿ ಒಂದೂ ಫಲಪ್ರದವಾ ದದ್ದು ಹೊರಡಲಿಲ್ಲ. ತಿರುಗಿ ಒಮ್ಮೊಮ್ಮೆ ಅವುಗಳ ಪ್ರತಿಫಲವನ್ನು ಮಾತ್ರ ಅನುಭೋ ಗಿಸಬೇಕಾಗುತ್ತದೆ. ನೀವು ಈಗ ಕೈದಿನಲ್ಲಿ ಇರುವ ಕಾರಣವಾದರೂ ಇದೇ ಆಗಿದೆ. « ಇದೇ ಪಟ್ಟಣದಲ್ಲಿ ನೀಲಕಂಠರಾಯನೆಂಬ ಹೆಸರಿನ ಒಬ್ಬ ಸಧನಗೃಹಸ್ಥನು ಇರುತ್ತಿದ್ದನು. ಅವನಿಗೂ ನಮಗೂ ಸ್ವಲ್ಪ ಆಪ್ತ ಸಂಬಂಧವದೆ. ಅವನ ಸಂಪತ್ತನ್ನು ದೊರಕಿಸುವದಕ್ಕಾಗಿ ತಂದೆಯು ಭಯಂಕರ ಉದ್ಯೋಗವನ್ನು ಪ್ರಾರಂಭಿಸಿರುವನು. ನೀಲಕಂಠರಾಯನಿಗೆ ಮೊದಲು ಲಗ್ನ ಮಾಡಿಕೊಳ್ಳುವ ಅಪೇಕ್ಷೆಯಿದ್ದಿಲ್ಲ. ತಂದೆಯ ಮಧ್ಯಸ್ತಿಕೆಯಿಂದ ಅವನು ಲಗ್ನ ಮಾಡಿಕೊಳ್ಳಲು ಸಿದ್ಧನಾದನು. ಈ ಲಗ್ನವು ನನ್ನ ಸಂಗಡ ಆಗಬೇಕೆಂದು ನಿಶ್ಚಯವಾಯಿತು. ನೀಲಕಂಠರಾಯನು ಒಮ್ಮೆ ನನ್ನನ್ನು ನೋಡುವದಕ್ಕಾಗಿ ನಮ್ಮ ಮನೆಗೆ ಬಂದನು, ಅಲ್ಲಿಯವರೆಗೆ ನನಗೆ ಈ ಲಗ್ನದ ಗೊಂದಲವು ಗೊತ್ತಿರಲಿಲ್ಲ. ನೀಲಕಂಠರಾಯನು ನಮ್ಮ ಮನೆಯಿಂದ ಹೋದಮೇಲೆ ನನಗೆ ತಂದೆಯು ಲಗ್ನ ವಾರ್ತೆಯನ್ನು ಹೇಳಿದನು. ನಾನು ಇಂಥ ವೃದ್ಧನ ಸಂಗಡ ಲಗ್ನ ವಾಗಲಿಕ್ಕೆ ಒಪ್ಪುವದಿಲ್ಲವೆಂದು ಹೇಳಿದೆನು. ವಿನಾಯಕರಾಯ, ಜನ್ಮದಾತಪಿತ ನನ್ನು ನಿಂದಿಸಲಿಕ್ಕೆ ಮನಸ್ಸಿಗೆ ಕೆಡಕೆನಿಸುತ್ತದೆ; ಆದರೆ ಮಾಡುವದೇನು? ಹಾಗೆ ಮಾಡಿದ ಹೊರ್ತು ಗತಿಯಿಲ್ಲ. ಆ ಕಾಲಕ್ಕೆ ನನಗೆ ಹೇಳಿದ ತಂದೆಯ ಉಪದೇಶ ವಚನಗಳ ಸ್ಮರಣೆಯಾಯಿತೆಂದರೆ ಮೈಮೇಲಿನ ಕೂದಲುಗಳು ನೆಟ್ಟಗಾಗುತ್ತವೆ. ತಂದೆಯು ಹೇಳಿದ್ದು:- ಇದೇನೂ ನಿಜವಾದ ಲಗ್ನವಲ್ಲ. ನೀನು ಅವನ ಹತ್ತರ ಒಂದು ಗಳಿಗೆ ಹೊತ್ತು ಉಪಾಧ್ಯಾಯರ ಮಂತ್ರಮುಗಿಯುವ ತನಕ ಕೂಡ್ರು, ಅವನು