ಪುಟ:ನಡೆದದ್ದೇ ದಾರಿ.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನೆಯ ದಾರಿ } ಮುಕ್ತಿ ೧೨೧ ಹೆಂಡತಿಯೂ ಬಹಳ ಪ್ರೀತಿಯಿಂದ ನೋಡಿಕೊಂಡೆವು - ಸ್ವಂತದ ಮಗಳ ಹಾಗೆ. ಅವಳಿಗೆ ಮ್ಯಾಟ್ರಿಕ್ ಪರ್ಯಂತ ಶಿಕ್ಷಣ, ಟೈಪಿಂಗ್ ಕ್ಲಾಸಿನ ಫೀಜು, ನಂತರ ಅಸಿ. ಮ್ಯಾನೇಜರ್‌ಗೆ ಹೇಳಿ ತಮ್ಮ ಆಫೀಸಿನಲ್ಲೇ ಟೈಪಿಸ್ಟ್ ಕೆಲಸ- ಈ ಎಲ್ಲ ಮಾಡಿದ್ದು ತಾನೇ ಅಲ್ಲವೇ ? “ಹಿಂಗ್ಯಾಕ ನೋಡ್ತೀರಿ ಮಾವಾ ? ಎಂದೂ ನೋಡಿಲ್ಲೇನು ನನ್ನ " -ನಕ್ಕು ಕೇಳಿದ್ದಳು ಕಲಾ. ಈ ಹುಡುಗಿ ಆಫೀಸು ಸೇರಿದಾಗಿನಿಂದ ಆಫೀಸಿನವರೆಲ್ಲಾ ತನ್ನ ಹೆಸರಿಗೆ "ಮಾಮಾ" ಸೇರಿಸಿಯೇ ಕೂಗತೊಡಗಿದ್ದಾರೆ. ತನಗೇನೋ 'ಶಂಕರರಾವ್" ಎಂದು ಕರೆಸಿಕೊಳ್ಳಲು ಹೆಚ್ಚು ಇಷ್ಟ. 'ಶಂಕರ ಮಾವಾ' ತನ್ನ ನಿವೃತ್ತಿಯನ್ನು ನೆನಪಿಸುತ್ತದೆ. ಆದರೆ ಹೇಳುವುದು ಯಾರಿಗೆ ? “ಭಾಳ ಸ್ಮಾರ್ಟ್ ಕಾಣಿಸೀ ಕಲಾ ಇವತ್ತ." ಕಲಾನ ಕೆನ್ನೆಗಳು ಕೆಂಪೇರಲಿಲ್ಲ. "ದಿನಾ ಹೇಳತೀರಿ ಈ ಮಾತು ಇಪ್ಪತ್ತು ವರ್ಷದಿಂದ, ಇದರಾಗ ಹೊಸದೇನು ಬಂತು ?" ಹೊಸದೇನೂ ಇಲ್ಲ ನಿಜ. ಆದರೆ ಆ ಚಂದ್ರಲಾಲ ದಿನಾ ಇವಳಿಗೆ ಹೇಳುವುದರಲ್ಲಾದರೂ ಏನು ಹೊಸದಿರುತ್ತದೆ ? ಅವನು ಬರೇ ಇವಳ ಕಡೆ ನೋಡಿದರೆ ಸಾಕು, ನಾಚಿ ಕೆಂಪಗೆ ಗುಲಾಬಿಯಾಗುತ್ತಾಳೆ. ಇರಲಿ, ನೋಡೋಣ. “ಅಂದ್ಧಾಂಗ ನಿನಗೆ ಗೊತ್ತದ ಏನು ಕಲಾ ? ನಮ್ಮ ಆಸಿ ಮ್ಯಾನೇಜರ್‌ದು ಎಂಗೇಜ್‌ಮೆಂಟ್ ಆತಲ್ಲ ?" - ಕಣ್ಣ ಕೊನೆಯಿಂದ ದೃಷ್ಟಿಸಿದ್ದ ಆತ ಪರಿಣಾಮವನ್ನು, ತನಗೆ ಏನೂ ಆಗಿಲ್ಲ ವೆಂದು ತೋರಿಸಿಕೊಳ್ಳಲು ಅವಳು ಮಾಡಿದ ಶತಪ್ರಯತ್ನ ಮೀರಿ ನಡುಗಿತ್ತು ಅವಳ ಧ್ವನಿ ; ಕಣ್ಣ ಬೆಳಕು ಒಮ್ಮೆಲೇ ಜೀವ ಕಳೆದುಕೊಂಡಿತ್ತು : “ಹಿಂಗೇನು ? ಛಲೋ ಆತು.* -ನಂತರ ಹೆಚ್ಚು ಮಾತನಾಡದೇ ಸರನೆ ಹೊರಳಿ ತನ್ನ ರೂಮು ಸೇರಿದ್ದಳು ಕಲಾ, ಅವಳ ಕಣ್ಣಂಚಿನಲ್ಲಿ ಒಂದು ಕ್ಷಣ ಮಿಂಚಿದ್ದು ನೀರೇ ಅಲ್ಲದೆ ಇನ್ನೇನು ? -ಅಲ್ಲಿಗೆ ಪೂರ್ಣವಾಗಿ ತನ್ನ ಗೆಲುವು ? "ವಾಹ್, ಎಷ್ಟ ಛಂದ ಪ್ಲಾನ್ ಮಾಡೀರಿ ಈ ಹೊಸಾ ಬಟ್ಟೆಟ್ಟಿನದು ! ಬಾಸ್‌ ಏಕ್‌ದಂ ಖುಶ್ ಆಗೋದರಾಗ ಸಂಶಯ ಇಲ್ಲ ಶಂಕರ ಮಾವಾ. ನಿಮ್ಮದು ಅದ್ಭುತ ಬ್ರೇನ್ರೆಪಾ." - ಸಹೋದ್ಯೋಗಿಗಳೆಲ್ಲ ಸೇರಿ ತನ್ನ ಕೆಲಸದ ಸ್ತುತಿ ಮಾಡಿದ್ದರು