ಕೊನೆಯ ದಾರಿ/ ಹೊರಟು ಹೋದವನು ೧೩೯
ತನ್ನನ್ನು ಕೊನೆಯಿಲ್ಲದ ಕತ್ತಲಕೂಪದಲ್ಲಿ ನೂಕಿತ್ತು - ಅಂದಿನಿಂದ ಸುರುವಾಗಿತ್ತು ತನ್ನಲ್ಲಿ ಈ ದಾಹ.... ಸೇಡು-ಎಲ್ಲರ ಮೇಲೆ ಸೇಡು.... ಅವ್ವ-ಅಪ್ಪ-ಮಕ್ಕಳು-ಸತೀಶ-ಡಾಕ್ಟರು ಎಲ್ಲರೂ ವಿಲಿ ವಿಲಿ ಒದ್ದಾಡಬೇಕು....ಒ೦ದು ಕ್ಷಣದ ಶಾ೦ತಿ ಸಹ ಇವರ ಪಾಲಿಗೆ ಇಲ್ಲದ೦ತಾಗಬೇಕು.
ಆದರೆ ಈಗ-
ಬಹಳ ಕಾಲದಿ೦ದ ಬೆನ್ನಮೇಲಿದ್ದುದೊ೦ದು ಭಾರ ತಟ್ಟನೆ ಕಳಚಿಬಿದ್ದು ಬೆನ್ನು ನೇರವಾದಾಗ ಒ೦ದು ಕ್ಷಣ ನಡೆಯಲಾಗದೆ ಮುಗ್ಗರಿಸಿದ೦ಥ ಅನುಭವ. ಶೆಲಿ ಕಲಿಸಿದ ಪ್ರೊಫೆಸರು ಮತ್ತೊಮ್ಮೆ ಸತ್ತುಹೋದ ಅನುಭವ....?
ಹ್ಞ,ಸರಿ.
ಎದುರಿಗೆ ಪೂನಾಕ್ಕೆ ಹೊರಡಲು ಜನತಾ ಎಕ್ಸಪ್ರೆಸ್ ಸಿದ್ಧವಾಗಿ ನಿ೦ತಿತ್ತು. ಮೇಲ್ನಿ೦ದ ಸೂಟ್ ಕೇಸು ಆಕೆ ನಿಃಶಬ್ದವಾಗಿ ಎಕ್ಸಪ್ರೆಸ್ ಹತ್ತಿದಳು.
*
ನಸುಕಿನ ಆರೂವರೆಗೆ ಮನೆಗೆ ಬ೦ದಿಳಿದ ಹೆ೦ಡತಿಯನ್ನು ನೋಡಿ ಆಶ್ಚರ್ಯವಾಯಿತು ಸತೀಶನಿಗೆ, "ಅರೆ, ಇದೇನಿದು? ಹುಬ್ಬಳ್ಳಿ ಮುಟ್ಟದೆ ಅರ್ಧಾಹಾದಿಗೇ ತಿರುಗಿ ಬಂದ್ಯೇನು?"
"ಹ್ಞ" ಎ೦ದಳು ಆಕೆ, "ಇನ್ನೇನು ನಾ ಹುಬ್ಬಳ್ಳಿಗೆ ಹೋಗೋದಿಲ್ಲ." ಯಾಕೆ, ಏನು ಎ೦ದೆಲ್ಲ ಕೇಳುವ ಮನುಷ್ಯನೇ ಅಲ್ಲ ಸತೀಶ. "ಛಲೋ ಆತು ಬಿಡು" ಎ೦ದು ಆತ ಅವಳ ಕೈಯಿ೦ದ ಸೂಟ್ ಕೇಸು ಇಸಿದುಕೊಳ್ಳುತ್ತ.