ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಲು/ಕವಲು ೧೪೭


ವಿಚಾರ ಮಾಡ್ತಿದ್ದೆ. ಮಿನಿ, ಕಡೀಕೆ ಆದದ್ದಾಗ್ಲಿ ಅಂತ ಗಟ್ಟಿ ಧ್ಯರ್ಯ ಮಾಡಿ ರಜಾ ಹಾಕಿದೆ. ಆಫೀಸಿನ ಕೆಲಸದ ಸಲುವಾಗಿ ಮುಂಬೈ ಗೆ ಹೊಗ್ಬೀಕಾಗೇದ ಅಂತ ಶಾಂತಾಗ ಹೇಳಿಬೆಟ್ಟೆ. ಈಗ ಈ ಜಲಪಾತದ ಕೆಳಗೆ ನಿನ್ನ ಜೋಡೀ ನಿಂತು ಕಿವಿ ಹದಚಿಕ್ಕೋ ಸಪ್ಪಳಾ ಕೀಳಕೋತ ಮೈಯೆಲ್ಲಾ ತೋಯಿಸಿಕೊಳೋವಾಗ ಅನಸ್ತದ - ಅಷ್ಟ ತ್ರಾಸತಗೊಡಿದ್ದೂ ಸಾರ್ಥಕ ಆತು ಅಂತ,' - ಜೋಗದದಿಯಲ್ಲಿ ಕಿಸೆಯಿಂದ ಸಣ್ಣದೊಂದು ಕಾಗದದ ಚೂರು ತೆಗೆದು ಅದರ ಮೇಲೆ ಪೆನ್ಸಿಲಿನಿಂದ ಆತ ಬರೆದು ಕೊಟ್ಟ ಈ ಸಾಲುಗಳು ಇನ್ನು ಆಕೆಯ ಗೋದ್ರೀಜ್ ಕಪಾಟಿನಲ್ಲಿ ರೇಶ್ಮೆ ಸೀರೆಯೊಂದರ ನಡುವೆ ಭದ್ರವಾಗಿವೆ. - ಓ , ಯಾಕ ಮಿನಿ, ಅಂಜಿದೇನು ? ರಾತ್ರಿ ಹನ್ನೆರಡಾಗೇದಲ್ಲ ಈಗ? ಎಲ್ಲಾರೂ ಮಲಗಿ ನಿದ್ದಿ ಮಾಡೋ ಹೊತ್ತು . ಥಟ್ಟನ ನಿನ್ನ ನೆನಪಾತು. ಈ ಥಂಡಿಯೊಳಗ ಬ್ಬೆಚಗ ನಿನ್ನ ಅಪಿಗೊಂಡು ಮಲಗಬೇಕು ಅನಿಸ್ತು . ಎದ್ದು ಸೀದಾ ಬಂದಬಿಟ್ಟೆ....ನನಗ ಗೊತ್ತಿತ್ತು - ಹಿಂಗೆ ಮಳೇ , ಕತ್ತಲು , ಥಂಡಿ ಎದ್ದಾಗ ನೀ ನನ್ನ ನೆನಸತಿರೀತ್ತ್ ಅಂತ . ನೋಡು , ನಾ ಹೆಚ್ಚು ಆಗಿಬಿಟ್ತೀನಿ ನಿನ್ನ ಸಲುವಾಗಿ .....' - ಆತ ಒಳಗೆ ಬರುವವರೆಗೂ ವ್ಯವಧಾನವಿಲ್ಲದೆ ಬಾಗಿಲಲ್ಲೇ ಆತನನ್ನು ಬಿಗಿದಪ್ಪಿದ ಆಕೆಗೆ ಆತನ ಹುಚ್ಚಿನ ಬಗ್ಗೆ ಸಂಷೆಯವಿರಲೇ ಇಲ್ಲ . -'ನಿದ್ದಿ ಹತ್ತಿತೇನು ಮೀನಿ ? ಎಲ್ಲೆ , ನನ್ನ ಕಡೆ ತಿರುಗು ಹಿಂಗ....ಮಿನಿ, ನನಗ ಒಂದು ವಿಷಯದ ಸಲುವಾಗಿ ಯಾವಾಗ್ಲೂ ಆಶ್ಚರ್ಯ ಆಗತದೆ . ಅದೇನು ಅಂದರ ನಿನ್ನ ಸಹವಾಸದಾಗ ನನಗೇನ ಒಂದು ವಿಚಿತ್ರ ರೀತೀ ಸುಖಾ ಸಿಗತದ - ಪರಮಾನಂದ , ಸಚ್ಚಿದಾನಂದ, ಬ್ರಹ್ಮಾನಂದ ಅಂತಾರಲ್ಲ , ಇದೇ ಇರಬೇಕು - ಅದು ನನ್ನ ಹೆಂಡತೀ ಸಹವಾಸದಾಗ ಎಂದೂ ಸಿಕ್ಕಿಲ್ಲ . ನನಗಸ್ತದ - ನಾ ಅಕಿನ್ನ ಅಂದೂ ಖರೇ ಅರ್ಥದಾಗ ಪ್ರಿತೀನೇ ಮಾಡಿಲ್ಲ . ಆಕೀ ಸಲುವಾಗಿ ನನಗಿರೋದು ಬರೇ sense of duty. ಅಕಿ ಎಂದರೆ ನಿನ್ನ ಬಗ್ಗೆ ಕೇಳಿದರ ಹಿಂಗ ಸ್ಪಷ್ಟ ಹೇಳಿ ಬಿಡ್ತೀನಿ ...., - ಆತನ ಸ್ಪಷ್ಟತೆ ಆಕೆಗೇ ಯಾವಾಗಲೂ ಆಟನಿಗಿಂತಲೂ ಹೆಚ್ಚು ಸ್ಪಷ್ಟವಿರುತ್ತಿತ್ತು. - ಶಾಂತಾ ಅಂದರ ನನ್ನ ಪಾಲಿಗೆ you are an end! ನನ್ನ ಜೀವನದ ಅಂತಿಮ ಲಕ್ಷ್ಯ .....' - ' ನೋಡು ಮಿನಿ , ನಿನಗ ದೂರದ ಊರಿಗೆ ಟ್ರಾನ್ಸ್ ಫಾರ್ ಅದಾಗ ಇನ್ನ ಹಗಲೆಲ್ಲಾ ಕೂಡೋದು ಅಹಲಿಕ್ಕಿಲ್ಲಾ ಅಂತ ಸುಳ್ಳು s ಚಿಂತಿ ಮಾದತಿದ್ದಿ . ನೀ ಜಗತ್ತಿನ ಆ ತುದೀಗೆ ಹೋದ್ರೂ ನಾ ನಿನ್ನ ಕಡೆ ಬರೋಹಾಂಗ ಬಂದs ಬರೀತ್ ನಿ ಅಂತ ಈಗರೆ