ಪುಟ:ನಡೆದದ್ದೇ ದಾರಿ.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೫

ಹನುಮಾಪುರದಲ್ಲಿ ಹನುಮಜಯಂತಿ

ಹನುಮಜಯಂತಿಯ ದಿನ ಮುಂಜಾನೆ ಹನುಮಾಪುರದ ಚಾವಡಿಯಲ್ಲಿ
ಸಾಧಾರಣ ದೊಡ್ಡದೇ ಅನ್ನಬಹುದಾದ ಜನರ ಗುಂಪೊಂದು ಸೇರಿತ್ತು. ಕೆಲವರ
ಮುಖಗಳಲ್ಲಿ ಹೇಳತೀರದ ರೋಷ; ಇನ್ನು ಕೆಲವರಲ್ಲಿ ಅಷ್ಟೇ ತೀವ್ರವಾದ ಹಟ;
ಉಳಿದ ಬಹಳ ಜನರಲ್ಲಿ ಕುತೂಹಲ. ಸೇರಿದ ಜನರಲ್ಲಿ ರಾಮಗೌಡರು,
ಗೋಪಾಲಾಚಾರ್ಯರು, ಸರಪಂಚ ಶಂಕರಶೆಟ್ಟರು ಮುಂತಾದ ಒಬ್ಬಿಬ್ಬರನ್ನು ಬಿಟ್ಟರೆ
ಉಳಿದವರೆಲ್ಲ ಬಿಸಿರಕ್ತದವರೇ. ಗಂಟೆ ಇನ್ನೂ ಎಂಟೇ ಆಗಿದ್ದರೂ ಬೇಸಿಗೆಯ
ಉರಿಬಿಸಿಲು ಮೈ-ನೆತ್ತಿ ಸುಡುತ್ತಿತ್ತು. ಬರಿಯ ಪಂಚೆ ಅಥವಾ ಧೋತ್ರ, ಮಾತ್ರ
ಉಟ್ಟಿದ್ದ ಆ ಜನಗಳ ಕರಿಯ ಬಣ್ಣ ಬಿಸಿಲಿಗೆ ಮಿಂಚುತ್ತಿತ್ತು. ಆದರೆ ಯಾರಿಗೂ
ಬಿಸಿಲಿನ ಪರಿವೆ ಇದ್ದಂತಿರಲಿಲ್ಲ. ಕಾರಣ -ಮೊದಲನೆಯದಾಗಿ, ಅವರೆಲ್ಲ
ಹನುಮಾಪುರದಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ಕರಿಮಣ್ಣಿಗೆ ಉರಿಬಿಸಿಲಿಗೆ
ಹೊಂದಿಕೊಂಡು ಜೀವನ ನಡೆಸುತ್ತಿದ್ದವರು. ಎರಡನೆಯದಾಗಿ, ಇಂದು ಮುಂಜಾನೆ
ಅವರು ಯಾರೂ ಬಿಸಿಲಿನ ಪರಿವೆ ಮಾಡುವ ಮನಸ್ಥಿತಿಯಲ್ಲಿರಲಿಲ್ಲ. ಅವರೆಲ್ಲ ಇಲ್ಲಿ
ಸೇರಿದ್ದು ಕಳೆದ ವರ್ಷವಿಡೀ ಊರಲ್ಲಿ, ಊರ ಜನರ ಮನದಲ್ಲಿ
ಹೊಗೆಯಾಡುತ್ತಲಿದ್ದು ಇಂದು ಒಮ್ಮೆಲೇ ಭುಗಿಲ್ಲೆಂದ ಸಮಸ್ಯೆಯೊಂದರ
ಸೋಕ್ಷಮೋಕ್ಷವನ್ನು ಇತ್ಯರ್ಥ ಮಾಡಲೆಂದು. ಹನ್ನೆರಡು ಗಂಟೆಗೆಲ್ಲ ಊರಿನ
ಹನುಮಂತ ದೇವರ ತೇರು ಹೊರಡಬೇಕು. ಅಷ್ಟರೊಳಗಾಗಿ ಸಮಸ್ಯೆ
ಬಗೆಹರಿಯಬೇಕು. ಅಂತೆಯೇ ಜನರೆಲ್ಲ ಪಂಚರ ಸಮೇತವಾಗಿ ಚಾವಡಿಯಲ್ಲಿ
ಸೇರಿದ್ದರು.
ಜಗಳಕ್ಕೆ ಕಾರಣ ಗುಡಿಯಲ್ಲಿ ಕಲ್ಲಾಗಿ ನಿಂತ ಹನುಮಂತದೇವರು.
ಹನುಮಾಪುರದ ಹನುಮಂತ ಸುತ್ತಲೆಲ್ಲ ಬಹಳ ಪ್ರಸಿದ್ದಿ ಪಡೆದ, ಜಾಗೃತವೆನ್ನಿಸಿದ
ದೇವರು. ಸಾಕ್ಷಾತ್ ಶ್ರೀರಾಮದೇವರು ಅವತಾರ ಸಮಾಪ್ತಿ ಮಾಡುವ ಮುನ್ನ
ತಮ್ಮ ಭಕ್ತಾಗ್ರೇಸರನಾದ ಹನುಮಂತನನ್ನು ಕರೆದು ಆತ ಕಲಿಯುಗದಲ್ಲಿ ಪಾಪೀ
ಜನರ ಕಲ್ಯಾಣರ್ಥವಾಗಿ ಹನುಮಾಪುರದಲ್ಲಿ ನೆಲೆಸಬೇಕೆಂದು ಅಪ್ಪಣೆ