ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೮

ಒಟ್ಟ ನಮ್ಮ ಇಡೀ ಸಮಾಜದ ಗಂಡಸ್ರು - ಅವ್ರು ಹೆಣ್ಮಕ್ಕಳ ಮ್ಯಾಲೆ ಮಾಡೋ ಅನ್ಯಾಯ, ಅತ್ಯಾಚಾರ. ಪಾಪಾ ಮಾಡಿದವ್ರು ಹಿಂದುಸ್ತಾನದಾಗ ಹೆಂಗಸರಾಗಿ ಹುಟ್ತಾರೇನೋ ಅನಸ್ತದ ನನಗ ಒಮ್ಮೊಮ್ಮೆ. ಎಷ್ಟ ರೀತಿಯಿಂದ ಹೆಂಗಸರ ಮ್ಯಾಲ ದಬ್ಬಾಳಿಕೆ ನಡೀತದ ನಮ್ಮ ಸಮಾಜದಾಗ! ಹೆಂಗ್ಸರ ಮಾನಾ, ಮರ್ಯಾದಿ ಗೌರವಾ ಕಾಯೋದು ನಮ್ಮ ಕರ್ತವ್ಯ. ಹೆಂಗಸರು- -ಕೇಸಕರನನ್ನು ತಡೆದ ಮಾತಾಡಿದ ಅಯ್ಯಂಗಾರ್, 'ಹಾಗಿದ್ರೆ ಈವೊತ್ತಿನ ಪ್ರೋಗ್ರ್ಯಾಂ ಫಿಕ್ಸ್ ಆಯ್ತು. ವೊದ್ಲಿಗೆ ನಾನು ಇಂಟ್ರೊಡಕ್ಟರಿ ಸ್ಪೀಚ್ ಕೊಡ್ತೀನಿ. ಈಗಿನ ಸರ್ಕಾರದ ಅಪ್ರಾಮಾಣಿಕ ವ್ಯವಹಾರಾನ ಸಿನ್ಸಿಯರ್ ಆಗಿ ವಿವರಿಸ್ತೀನಿ. ಇದನ್ನ ಎದುರಿಸೋದ್ರಲ್ಲಿ "ಕಿಡಿ"ಯ ಪಾತ್ರ ಎಂಥಾದ್ದು ಅಂತ ಬೆಳಕಿಗೆ ತರ್ತೀನಿ. ಜಾತ್ಯಾತೀತ ಪತ್ರಿಕೆಯಾದ ನಮ್ಮ "ಕಿಡೀ" ಹೇಗೆ ವಂಚನೆ, ಭ್ರಷ್ಟಾಚಾರ, ಬೆಲೆ ಏರಿಕೆ ಇತ್ಯಾದೀನ ವಿರೋಧಿಸ್ತಾ ಇದೆ, ಹೇಗೆ ಈ ಪ್ರಾಮಾಣಿಕ ಪ್ರಯತ್ನಕ್ಕೆ ಜನಗಳ ಸಹಾಯ ಬೇಕು ಅನ್ನೋದನ್ನು ಹೇಳ್ತೀನಿ. ಆಮೇಲೆ ಶೆಟ್ತರ್ ಜಾತೀಯತೆ ನಿರ್ಮೂಲನ ಬಗ್ಗೆ ಮಾತಾಡ್ಲಿ. ಆಮೇಲೆ ಕೇಸಕರ್ ಭ್ರಷ್ತಾಚಾರ ನಿರ್ಮೂಲನ ಬಗ್ಗೆ ಮಾತಾಡ್ಲಿ. ಆಮೇಲೆ ಯುವಕ ಸ್ಂಘದ ಬೇರೆ ಯಾರಾದ್ರು ಮಾತಾಡೋರಿದ್ರೆ ಐದೈದು ನಿಮಿಷ ಅವಕಾಶ ಕೊಡೋಣ. ಕೊನೆಗೆ ಶಂಕರಪ್ಪ ಸಮ್ ಅಪ್ ಮಾಡ್ಲಿ - ನ್ಂ ಜನಾ ಹೇಗೆ ಬರೀ ಕೆಲಸಕ್ಕೆ ಬಾರದ ಹೊಲಸು ಮಾತಲ್ಲೆ ಕಾಲ ಕಳೀತಾರೆ, ಅವ್ರಿಗೆ ಧೈರ್ಯ ಬೇಕು ಅನ್ನೋದನ್ನು ಶಂಕ್ರಪ್ಪ ಚೆನ್ನಾಗಿ ಹೇಳ್ತಾರೆ. ಈ ಸಭೆ ಮುಗಿಸಿ ಅಲ್ಲಿಂದ್ಲೇ ಕಪ್ಪು ಬಾವುಟ ತಗೊಂಡು ಮಿನಿಸ್ಟರ್ ಬರೋ ದಾರೀಲಿ ಹೋಗಿ ನಿಲೋಣ. ಪೋಲೀಸ್ರು ಬರ್ಲಿ. ನಮ್ಮನ್ನ ಅರೆಸ್ಟ್ ಮಾಡ್ಲಿ. ಲಾಕಪ್ನಲ್ಲಿ ಹಾಕ್ಲಿ. ಗಲಾಟೆ ಆಗತ್ತೆ. ಜನಗಳ ಕಣ್ಣು ತೆರೆಯುತ್ತೆ....' ಬೇಸರದಿಂದ ಜೋಸಫ್ ನಿನ್ನೆ ಅರ್ಧಕ್ಕೆ ಬಿಟ್ಟಿದ್ದ ಕಾದಂಬರಿಯೊಂದನ್ನು ತೆರೆದು ಓದಲಾರಂಭಿಸಿದ.

ರಾತ್ರಿ ಹತ್ತು ಗಂಟೆ. ಅಯ್ಯಂಗಾರನ ಪಾರ್ಟಿ ಭರ್ಜರಿಯಾಗಿ ನಡೆದಿತ್ತು. ಮೂರನೇ ರೌಂಡ್ಗೆ ಸರ್ವ್ಹ್ ಮಾಡಿದ ಬ್ಲ್ಯಾಕ್ ನೈಟ್ adulterated ಅಂತ ಶಂಕರಪ್ಪ ಕೂಗಾಡಲು ಸುರು ಮಾಡಿದಾಗ ಜೋಸಫ್ ಎದ್ದು ಹೊರಗಡೆ ಲಾನ್ ಮೇಲೆ ಅವರುಗಳು ಕುಳಿತಿದ್ದಲ್ಲಿಗೆ ಹೋಗಬೇಕಾಯಿತು. ಈ ಕಾಲೇಜು ಪ್ರೊಫೆಸರುಗಳ ಹಣೆಬರಹವೆ ಹೀಗೆ. ಹೆಚ್ಚು ದಕ್ಕಿಸಿಕೊಳ್ಳಲು ತಾಕತ್ತಿಲ್ಲ. ಬಿಟ್ಟಿ ಸಿಕ್ಕಾಗ ಸ್ವಲ್ಪದರಲ್ಲಿ ತ್ರುಪ್ತಿಯಿಲ್ಲ. ಈ ಶಂಕರಪ್ಪನಿಗೆ ಯಾವಾಗಲೂ ಎರಡನೆಯ ಪೆಗ್ಗೆ