ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೧೪ ನಡೆದದ್ದೇ ದಾರಿ
ಆದರೆ ಎನೇ ಕಷ್ಟಪಟ್ಟರೂ ಅರೆಹೊಟ್ಟೆ ಉಂಡರೂ ಮಾಡಿದರೂ ದಿನಾ ದಿನಾ ಬೆಳೆಯುತ್ತಲೇ ಹೊರಟ ಮಗಳ ಬೇಡಿಕೆಗಳನ್ನು ಪೂರೈಸುವುದು ಕರಿಯನಿಗೆ ತುಂಬ ಕಷ್ಟವಾಗುತ್ತಿತ್ತು. ಹೈಸ್ಕೂಲಿಗೆ ಹೋಗಲಾರಂಭಿಸಿದ ಮಗಳು ಬ್ಯಾಡ್ಮಿಂಟನ್ ರಾಕೆಟ್ ಕೇಳಿದಾಗ ಗೌಡರನ್ನು ಕಾಡಿ ಬೇಡಿ ಸಂಬಳದ ಹಣ ಭಾರತದ ಪ್ರವಾಸಕ್ಕೆ ಹೋಗಲೇಬೇಕೆಂದು ಲಕ್ಷ್ಮಿ ಹಟ ಹಿಡಿದಾಗ, ತನ್ನ ಏಕಮಾತ್ರ ಆಸ್ತಿಯಾಗಿದ್ದ, ಗೌಡರು ತಮ್ಮ ಎರಡನೇ ಲಗ್ನದಲ್ಲಿ ಆತನಿಗೆ ಪ್ರೀತಿಯಿಂದ ಬೀಕ್ಷಿಸಾಗಿ ಕೊಟ್ಟಿದ ಕಿವಿಯಲ್ಲಿನ ಮುರುವುಗಳನ್ನು ಒಲ್ಲದ ಮನಸ್ಸಿನಿಂದ ಮಾರಿ ಮಗಳ ಆಸೆ ಪೂರೈಸಿದ್ದ ಕರಿಯ. ಮನೆಯಲ್ಲಿರುತ್ತಿದ್ದ ಅಲ್ಪಸ್ವಲ್ಪ ಹೊತ್ತು ಲಕ್ಷ್ಮಿ 'ಛೀ, ಹೊಲಸು', 'ಥೂ, ಅಸಹ್ಯ' ಅಂತ ಪ್ರತಿಯೊಂದಕ್ಕೂ ಮುಖ ಸಿಂಡರಿಸಿ ಓಡಾಡುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ನಡೆದಾಗ ಮಾತ್ರ ಕರಿಯ ನಿಜವಾಗಿ ಕಳವಳಗೊಂಡ, ಅನೇಕ ಸಲ ಲಕ್ಷ್ಮಿಯ ಕಣ್ಣುಗಳನ್ನೆದುರಿಸಿದಾಗ ಒಂದು ತರದ ದೂರತ್ವದ, ಅಪರಿಚಿತತೆಯ ಭಾವ ಕಂಡಂತಾಗಿ ಆತ ಸಂಕಟಪಡುತ್ತಿದ್ದ. ಒಂದೊಂದು ಸಲ, ಬಹುಶಃ ಆಕೆಗೆ ತಾನು ಆಕೆಯ ತಂದೆಯಾಗಿರಿಲಿಕ್ಕಿಲ್ಲ ಎಂಬ ಭಾವನೆ-ಸಂಶಯ ಉಂಟಾಗಿದಿಯೇನೋ ಅನಿಸಿ, ಆತ ತೀವ್ರ ಅಸ್ವಸ್ಥತೆ ಅನುಭವಿಸುತ್ತಿದ್ದ. ತನ್ನ ಜನ್ಮಾಂತರ ಪುಣ್ಯವಿಶೇಷದಿಂದ ದೇವರು ತನಗೆ ಕರುಣಿಸಿರುವನೆಂದು ತಾನು ಭಾವಿಸಿರುವ ಈ ಅನರ್ಘ್ಯರತ್ನ ತನ್ನ ಕೈಜಾರಿ ಹೋಗುತ್ತಿದೆಯೇನೋ ಅನಿಸಿ ಆತ ವಿಚಿಲಿತನಾಗುತ್ತಿದ್ದ. ಲಕ್ಷ್ಮಿ ಮಾನಸಿಕವಾಗಿ ಆತನಿಂದ ದೂರವದಷ್ಟೂ ಆತ ಹೆಚ್ಚೆಚ್ಚು ಅಸಹಾಯಕನಾಗಿ ವಿಷಣ್ಣನಾಗಿ ಎದೆಯೊಡೆದವನಾಗಿ ಅವಳತ್ತ ಸೆಳೆಯಲ್ಪಡತೊಡಗಿದ. -ಲಕ್ಷ್ಮಿ ಬೆಳೆದಂತೆ ಕರಿಯ ದುಃಖಿಯಾಗತೊಡಗಿದ. ***** ಲಕ್ಷ್ಮಿ ಕಾಲೇಜು ಸೇರಿ ರ್ಯಾಂಕು ಪಡೆದು ಪಾಸಾಗಿ ಅವಳಿಚ್ಚೆಯಂತೆ ಅವಳಿಗೆ ಮುಂಬಯಿಯ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಾಗ ಕರಿಯನ ಹಲವಾರು ವಷಗಳ ನನಸಾದೆಂತೆನಿಸಿ ಆತ ಸಾರ್ಥಕಭಾವ ಅನುಭವಿಸಿದರೂ ಆತನ ಮನಸ್ಸಿನಾಳದಲ್ಲಿ ಅವ್ಯಕ್ತವಾದ ಹೊಸ ನೋವೊಂದು ಶುರುವಾಯಿತು. ಲಕ್ಷ್ಮಿಗಿಂತ ಎರಡು ವರ್ಷ ದೊಡ್ಡವಳಾಗಿದ್ದು ಲಕ್ಷ್ಮಿಯ ಕ್ಲಾಸಿನಲ್ಲೇ ಇದ್ದ ಗೌಡರ ಮಗಳು ಸುಜಾತಾಗೆ ಲಕ್ಷ್ಮಿಯ ಗುಣಗಲು ಸಿಕ್ಕಿರಲಿಲ್ಲವಾದರೂ ಗೌಡರು ಅಪಾರ ಹಣವನ್ನು ಡೋನೇಶನ್ನಾಗಿ ಸುರಿದು ಅವಳಿಗೆ ಮೆಡಿಕಲ್ ಸೀಟು ದೊರಕಿಸಿದ್ದರು.