ಹಸೆವು / ತಿರುಗಿ ಹೊದಳು
ಮಾಡಿದಳು. ಆದರೆ ಈ ಎರಡೇ ವರ್ಷದಲ್ಲಿ ತೀರ ಪ್ರಬುದ್ಧಳಾದಂತೆ ತೋರುತ್ತಿದ್ದ ಹಮೀದಾ ಅಜ್ಜಿಯನ್ನು ಸಂತೈಸಿದಳು , 'ಸುಮ್ಮನಿರು ಅಮ್ಮೀಜಾನ್ ,ನನ್ನ ನಸೀಬದಾಗೆ ಆಲ್ಲಾ ಇನ್ನೇನು ಮಾಡೋದು?' - ಇನ್ನೇನು ಮಾಡುವುದೂ ಆ ಆಸಹಾಯ ಆಜ್ಜಿ-ಮೊಮ್ಮಗಳಿಗೆ ಸಾದ್ಯವಿರಲಿಲ್ಲ.
ಅಲ್ಲಿಂದೀಛೆ ಆ ಮನೆಯ ಜೆವನ ಒಂದೇ ತೆರನಾಗಿ ಸಾಗಿಬಂದದ್ದು ಲಕ್ಷ್ಮಿ ಕಂಡಿದ್ದಾಖಳೆ. ಪ್ರತಿವರ್ಷ ಲಕ್ಷ್ಮಿಯ ಕಾಲೇಜಿಗೆ ಬೇಸಿಗೆಯ ರಜವಿದ್ದಾಗ ಹಮೀದಾಬಾನುವಿನ ಗಂಡ ಊರಿಗೆ ಬರುತ್ತಾನೆ . ಆಗ ಅವಳಿಗೆ ಮೂರು ತಿಂಗಳು ಮಗುವಿರುತ್ತದೆ. ಆತೆ ಇಲ್ಲಿರುವ ೧೫-೨೦ ದಿನಗಳಲ್ಲಿ ಮುದುಕಿ-ಮೋಮ್ಮಗಳು ಇಬ್ಬರೂ ಅವರಿವರಿಂದ ಕಡ ತಂದಾದರೂ ಆತನಿಗೆ ಅಡಿಗೆ ಮಾಡಿಹಾಕಿ ತಾವು ಊಪವಾಸವಿರುತ್ತಾರೆ. ಆತ ಆರಾಮಾಗಿ ಉಂಡು ಬೀಡಿ ಸೇದಿ, ತಂಬಾಕು ತಿಂದು ಚರ್ ಚರ್ ಅಂತ ಕಾಲ್ಮರಿಯ ಸದ್ದು ಮಾಡುತ್ತ ಊರೆಲ್ಲ ಸುತ್ತುತ್ತಾನೆ. ಹಿಂದಿ ಪಿಕ್ಚರು ನೋಡುತ್ತಾನೆ. ಕಂಟ್ರಿ ಸರಾಯಿ ಕುಡಿಯುತ್ತಾನೆ. ಲಕ್ಷ್ಮಿಯ ಮನೆಗೂ ಬಂದು ಆಕೆಯ ಅಪ್ಪ-ಅಮ್ಮನಿಗೆ ಸಲಾಮ್ ಹೇಳಿ ತಿರುಗಿ ಊರಿಗೆ ಹೋಗುತ್ತಾನೆ. ಅಷ್ಟರಲ್ಲಿ ಹಮೀದಾಬಾನು ಮತ್ತೇ ಬಸಿರಾಗಿರುತ್ತಾಳೆ.
ಇತ್ತೀಚೆ ಮಕ್ಕಳು ಹೆಚ್ಚಾದಂತೆ ಹಮೀದಾಬಾನುವೂ ತಮ್ಮ ಜನದ ಸಾಹೇಬರುಗಳ ಮನೆಗೆ ಅಡಿಗೆ ಕೆಲಸಕ್ಕಾಗಿ ಹೋಗುತ್ತಿದ್ದಾಳೆ. ಆರು ವರ್ಷದ ಹಿರಿಯ ಮಗಳನ್ನು ತಮ್ಮ ಜನವೇ ಆದ ಡಾಕ್ಟರೋಬ್ಬರ ಮನೆಯಲ್ಲಿ ಮೇಲ್ಗೆಲಸಕ್ಕಾಗಿ ಇಟ್ಟಿದ್ದಾಳೆ. ಆಕೆಯ ಗಂಡ ಈಗೀಗ ವರ್ಷಕ್ಕುಮ್ಮೆ ಬರುವಾಗ ಬರಿಜೈಯಲಲ್ಲೇ ಬರುತ್ತಾನೆ. ಹೋಗುವಾಗ ಹಣವನ್ನೂ ಕೊಡುವುದಿಲ್ಲ. ಆದರೆ ಪ್ರತಿವರ್ಷ ಬಂದು ಕೆಲದಿನ ಇದ್ದು ತನ್ನ ಗಂಡಸುತನ ಸಾಬೀತು ಮಾಡಿ ಹೋಗುವುದರಲ್ಲಿ ಆತಿ ಎಂದೂ ಹಿಂದೆ ಬಿದ್ದಿಲ್ಲ.
ಲಕ್ಷ್ಮಿಗೆ ಈಗ ಇದೆಲ್ಲಾ ಅರ್ಥವಾಗುವ ವಯಸ್ಸು. ಕಾಲೇಜಿನ ಚಾರ್ಚಾಕೂಟಗಳಲ್ಲಿ ಸಿತ್ತ್ರಿಸಮಾನತೆ - ಸ್ವಾತಂತ್ರ್ಯದ ಬಗ್ಗೆ ಭಾಷಣ ಮಾಡಿ ಬಹುಮಾನ ಪಡೆಯುವ ಆಕೆಗೆ ಈ ಇಮಾಮ್ ಬೇಯ ಮೊಮ್ಮಗಳ ಬಾಳು ನೋಡಿ ಪಿತ್ತ ಕೆರಳುತ್ತದೆ : ' ನೀನ್ಯಾಕೆ ಆತನನ್ನು ಸೇರಿಸಿಕೊಳ್ಳುತ್ತೀ ಹಮೀದಾ? ಹೆಂಡತಿ ಮಕ್ಕಳ ಬಗ್ಗೆ ತನ್ನ ಕಾರ್ತವ್ಯ ತಿಳಿಯದ ಗಂಡನನ್ನು ಬೆಂಕಿಹಕಿ ಸುಡಬಾರದೆ ? ಆತೆ ಬಂದಾಗ ಒದ್ದು ಕಳಿಸಬಾರದೇ ? ಅವನಿಂದ ನಿನಗೇನೂ ಸಹಾಯವಿಲ್ಲ , ಲಾಭವಿಲ್ಲ . ಮತ್ತೇಕೆ ಅವನ ಬಂದಾಗ ಇಷ್ಟು ಸಡಗರ ಪಡುವುದು? ಮುಖಕ್ಕೆ ಉಗಿದು ಆಚೆ ನೂಕಬಾರದೆ ಅವನನ್ನ?