ಪುಟ:ನಡೆದದ್ದೇ ದಾರಿ.pdf/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಿಡುಗಡೆ / ಬಿಡುಗಡೆ ೨೪೩ ಮಾತಾಡುತ್ತಿದ್ದಾರೆ. ಯಾರು-ಯಾರೋ ಬಂದಿದ್ದಾರೆ. ದೊಡ್ಡ ಮಗ ರಾಜ, ಅವನ ಹೆಂಡತಿ, ಕಿರಿಯವನು, ಮಗಳು ಮತ್ತು ಅಳಿಯ, ನೆರೆಮನೆಯವರು, ಬ್ಯಾಂಕಿನ ಸಹೋದ್ಯೋಗಿಗಳು, ಆತನ ಆಫೀಸಿನಲ್ಲಿ ಕೆಲಸ ಮಾಡುವವರು ಇನ್ನೂ ಯಾರುಯಾರೋ.... ನೂರಾರು ಜನ ಸೇರಿದ್ದಾರೆ. ಆದರೂ ಗದ್ದಲ ಮಾಡದೆ ಪಿಸುಮಾತಿನಲ್ಲೇ ಎಲ್ಲ ವ್ಯವಹಾರ ನಡೆಸಿದ್ದಾರೆ. “ರಾಜೂ, ನೀ ದೊಡ್ಡಾಂವಪಾ, ಇನ್ನ ಎಲ್ಲಾ ಜವಾಬ್ದಾರಿ ನಿಂದೇ. ನಿಮ್ಮ ತಾಯಿನ್ನ ಕಾಳಜಿಯಿಂದ ನೋಡಿಕೋಬೇಕಪಾ. ಅದ್ರಿಗೆ ಈ ಶಾಕ್ ತಡಿಯೋದು ಆಗ್ಲಿಕ್ಕಿಲ್ಲ." ಯಾರೋ ಹಿರಿಯ ಮನುಷ್ಯರ ಕಳಕಳಿ. “ಹೌದ್ರೀ ಕಾಕಾ, ಅದಕ್ಕಡಾಕ್ಟರು ಮಮೀಗೆ ನಿದ್ದೀ ಇಂಜೆಕ್ಕನ್ ಕೊಟ್ಟಾರ. ಆಕಿ ಇನ್ನೂ ಮಂಪರಿನ್ಯಾಗೇ ಇದ್ದಾಳ" ಕೆಳದನಿಯಲ್ಲಿ ರಾಜೂನ ವಿವರಣೆ. “ಎಂಥಾ ದೊಡ್ಡ ಮನಿಶ್ಯಾ ಏನ ಕಥಿ ! ಎಷ್ಟು ಮಂದಿಗೆ ಎಷ್ಟ ಉಪಕಾರ ಮಾಡಿದ್ರು ! ಯಾರು ಏನು ಕೇಳಿದ್ರೂಇಲ್ಲ ಅಂದವರಲ್ಲ, ಎಷ್ಟ ಶಾಂತಸಮಾಧಾನದ ಸ್ವಭಾವ ! ಎಂದೂ ಸಿಟ್ಟಾದವರಲ್ಲ, ಕೆಟ್ಟ ಮಾತು ಆಡಿದವರಲ್ಲ, ಒಬ್ಬರಿಗೆ ಅನ್ಯಾಯ ಮಾಡಿದವರಲ್ಲ. ಸತ್ಯ ಹರಿಶ್ಚಂದ್ರನಂಥಾ ಮನಿಶ್ಯಾ ನೋಡ್ರಿ." ಇನ್ನೊಬ್ಬರಿಂದ ಆತನ ಗುಣಗಾನ. ಸರೋಜಾಗೆ ಈಗ, ಪೂರಾ ಎಚ್ಚರಾಯಿತು. ಹೊರಗೆ ಜನ ಸೇರಿದ್ದಾರೆ. ಆತನನ್ನು ಹೊಗಳುತ್ತಿದ್ದಾರೆ. ಅನುಕಂಪ ಸೂಚಿಸುತ್ತಿದ್ದಾರೆ. ಹೌದು. ಆತ ಈಗಿಲ್ಲ. ನಿನ್ನೆ ರಾತ್ರಿ ಹತ್ತು ಗಂಟೆಗೆ ಆತ ಹೃದಯಾಘಾತವಾಗಿ ಸತ್ತು ಹೋದ. ಈಗ ಬೆಳಗಿನ ಒಂಬತ್ತು ದಾಟಿದೆ. ಈ ಕಳೆದ ಸುಮಾರು ಹನ್ನೆರಡು ಗಂಟೆಯ ಕಾಲ ತಾನೇನು ಮಾಡುತ್ತಿದ್ದೆ ? ಸರೋಜಾ ನೆನಪಿಸಿಕೊಳ್ಳಲು ಪ್ರಯತ್ನಿಸಿದಳು. ಸರಿಯಾಗಿ ಹತ್ತಕ್ಕೆ ಎರಡು ನಿಮಿಷಗಳಿದ್ದಾಗ ಆತನ ಜೀವ ಹೋಯಿತು. ಡಾಕ್ಟರು ಬಳಿಯಲ್ಲೇ ಇದ್ದರು. "T am sorry madam", ಅಂದರು, ಮಗ ರಾಜುವನ್ನು ಕರೆದರು. ಮಗಳೂ ಓಡಿ ಬಂದಳು. ಅವರೆಲ್ಲ ಅಪ್ಪನಿಗೆ ಸೀರಿಯಸ್ ಅಂತ ತಿಳಿದು ಕಳೆದ ವಾರವೇ ಬಂದಿದ್ದರು. ಹಗಲು-ರಾತ್ರಿ, ಅಪ್ಪನ ಸೇವೆ ಮಾಡಿದರು. ಅಪ್ಪ ಇನ್ನಿಲ್ಲ ಅಂತ ತಿಳಿದೊಡನೆ ಕರುಣಾಜನಕವಾಗಿ ಅತ್ತರು. ಇಷ್ಟೆಲ್ಲ ಆಗುವಾಗ ಮಧ್ಯರಾತ್ರಿ ಸಮೀಪಿಸಿತ್ತು. ತಾನೇನು ಮಾಡುತ್ತಿದ್ದೆ ? “ಮಮೀಗೆ ಶಾಕ್ ಆಗೇದ, ಆದಕ್ಕ ಆಕಿ ಆಳತಾ ಇಲ್ಲ, ಮಾತಾಡತಾ ಇಲ್ಲ", ಟಿ