ಪುಟ:ನಡೆದದ್ದೇ ದಾರಿ.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿಡುಗಡೆ/ಅನಾಥೆ

ಬಂದು ರೂಮು ಸೇರಿ ಹಾಸಿದ್ದ ಕಂಬಳಿಯ ಮೇಲೆ ಕುಸಿದು ಕೂತಳು.ಕೈಕಾಲಲ್ಲಿನ ಶಕ್ತಿ ಉಡುಗಿ ಹೋಗಿತ್ತು. ಹೊರಗಿನ ಗದ್ದಲ,ಸಂಭ್ರಮ,ತುತ್ತೂರಿ ಎಲ್ಲದಕ್ಕೂ ಕಿವುಡಾಗಿದ್ದಳು ಆಕೆ.ತಿರುತಿರುಗಿ ಅಂಬುಜಮ್ಮನ ಗಡಸು ಧ್ವನಿ ಅವಳಿಗೆ ವಿಕಾರವಾಗಿ ಕೇಳಿಸುತ್ತಿತ್ತು. "ಗೆಸ್ಟ್ ರೂಮಿನ ಡ್ಯೂಟಿ.... ಇವತ್ತು ರಾತ್ರಿ"....ಈ 'ಗೆಸ್ಟ್ ರೂಮಿನ ಡ್ಯೂಟಿ' ಬಹಳ ಹುಡುಗಿಯರಿಗೆ ಅರ್ಥವಾಗಿರದ ರಹಸ್ಯ. ವಿಶೇಷ ಪ್ರಸಂಗಗಳಲ್ಲಿ ಸಮಾಜಕ್ಕೆ ಆಮಂತ್ರಿತರಾಗಿ ದಯಮಾಡಿಸುವ ಗಣ್ಯ ಅತಿಥಿಗಳು ಸಮಾಜದ ಅತಿಥಿಗೃಹದಲ್ಲಿ ರಾತ್ರಿ ತಂಗಿದಾಗ ಅವರ ಸೇವೆಗಾಗಿ ಒಬ್ಬಹುಡುಗಿ ಅಲ್ಲೇ ಹೋಗಿ ರಾತ್ರಿಯೆಲ್ಲಾ ಇದ್ದು ಮುಂಜಾನೆ ತಿರುಗಿ ಬರುವುದು.ಅಲ್ಲಿ ಏನೇನಾಗುತ್ತದೆಂದು ಹಾಗೆ ಹೋಗಿ ಬಂದ ಯಾವಳು ಎಂದೂ ಯಾರಿಗೂ ಹೇಳುವದಿಲ್ಲ. ಗೆಸ್ಟ್ ರೂಮಿನ ಡ್ಯೂಟಿ ಅಂದರೆ ಅವರಿಗೆಲ್ಲ ಏನೋ ಅತಂಕ.

     ಕೋಮಲೆಗೆ ಮಾತ್ರ ವಿಪರೀತ ಹೆದರಿಕೆಯಾಗಿದೆ.ಗೆಸ್ಟ್ ರೂಮಿನ ಡ್ಯೂಟಿ

ಮಾಡಿದ್ದ ಮಂಗಳಾಗೆ ಹೊಸ ಸೀರೆ-ಗಿಲೀಟಿನ ಒಡವೆ ಸಿಕ್ಕಿದ್ದು ಆಕೆ ನೋಡಿದ್ದಾಳೆ. ಇನ್ನೊಂದು ಸಂದರ್ಭದಲ್ಲಿ ಅ ಡ್ಯೂಟಿ ಮಾಡಿದ ಶಾಂತಾ ಅಂತೂ ಮುಂದೆ ಎರಡು ತಿಂಗಳಲ್ಲಿ ಯಾರಿಗೂ ಹೇಳಿದೆ ಸಮಾಜದಿಂದ ಪರಾರಿಯಾಗಿದ್ದಳು. ಮುಂದೆ ಅವಳ ಲಗ್ನದ ಅಮಂತ್ರಣ ಪತ್ರಿಕೆ ಬಂದಿತು ಸಮಾಜಕ್ಕೆ. ಒಮ್ಮೆ ಸಮಾಜದ ಹುಡುಗಿಯರನ್ನೆಲ್ಲ ಕರೆದುಕೊಂಡು ಕಮಲಮ್ಮ ಯಾವುದೋ ಟಾಕೀಜಿನಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ಚ್ಯಾರಿಟಿ ಶೋಗೆ ಹೋದಾಗ,ಅಲ್ಲೇ ಬಾಲ್ಕನಿಯಲ್ಲಿ ಕೂತಿದ್ದ ಶಾಂತಾನನ್ನು ಕೋಮಲಾ ನೋಡಿದ್ದಳು. ಹಸಿರು ಬಳೆ, ಮಂಗಳಸೂತ್ರ, ಜರೀ ಸೀರೆಯಿಂದಲಂಕೃತಳಾಗಿ ಹೆಮ್ಮೆಯಿಂದ ಗಂಡನೊಂದಿಗೆ ಕೂತಿದ್ದ ಶಾಂತಾನನ್ನು ನೋಡಿದಾಗ ಸಹಜವಾಗಿಯೆ ಕೆಲವು ಹುಡುಗಿಯರಿಗೆ ಗೆಸ್ಟ್ ರೂಮ್ ದ್ಯೂಟಿಯ ಬಗ್ಗೆ ಆಸಕ್ತಿ ಹುಟ್ಟಿತ್ತು. ಆದರೂ ಕೋಮಲಾ ಹೆದರಲು ಕಾರಣ- ಆಕೆಗೆ ತಿರುತಿರುಗಿ ನೆನಪಿಗೆ ಬರುತ್ತಿದ್ದ, ಬಹಳ ವರ್ಷಗಳ ಹಿಂದೆ ನಡೆದಿದ್ದ ಒಂದು ಮೈನವಿರೇಳಿಸುವ ಘಟನೆ. ಕೋಮಲಾಗೆ ಆಗ ಆರೇಳು ವರ್ಷವಿರಬಹುದು. ದಕ್ಷಿಣದ ಒಂದು ಅನಾಥಾಶ್ರಮದಿಂದ ಈ ಸೇವಾ ಸಮಾಜಕ್ಕೆ ಆಕೆ ಹೊಸದಾಗಿ ರಿಕ್ರೂಟ್ ಆಗಿ ಬಂದಿದ್ದಳು. ಅವಳ ಮೃದುವಾದ ಮುದ್ದು ಮುಖ ನೋಡಿ ಅಂಬುಜಮ್ಮನೇ ಅವಳಿಗೆ 'ಕೋಮಲಾ' ಅಂತ ಹೊಸ ಹೆಸರು ಕೊಟ್ಟದ್ದು. ಆಗಿನ್ನು ಈ ಬೆಡಗಿನ ಅತಿಥಿಗೃಹ ಇರಲಿಲ್ಲ. ಆಫ಼ೀಸು ಕೋಣೆಯ ಪಕ್ಕದ ಹಾಲಿನಲ್ಲೇ ಅತಿಥಿಗಳ ವಸತಿಯ ವ್ಯವಸ್ಥೆ ಇತ್ತು. 'ಗೆಸ್ಟ್ ರೂಮ್ ಡ್ಯೂಟಿ' ಅಂತ ಅಮ್ಬುಜಮ್ಮ ಆಗಷ್ಟೇ ಹೊಸದಾಗಿ ಪ್ರಾರಂಭಿಸಿದ್ದಳು ಈ ಪದ್ಧತಿಯನ್ನು. ಅವಳ ಮುಂಧೋರಣೆಯಿಂದ ಪ್ರಾರಂಭಿಸಿದ