ಪುಟ:ನಡೆದದ್ದೇ ದಾರಿ.pdf/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ತಾರಾ ಮ್ಯಾಡಮ್ ಮತ್ತು ತತ್ವಗಳು

"ಮೇ ಆಯ್ ಕಮಿನ್ ಸರ್?"-ತೂಗುಬಾಗಿಲಿನಾಚೆಯಿಂದ ಸ್ಟ್ಯೆಲಿಶ್
ಇಂಗ್ಲಿಶ್ ಉಚ್ಚಾರಣೆಯ ಮಧುರ ಸ್ವರ ತೇಲಿ ಬಂದಿತು.
"ಯೆಸ್, ಕಮಿನ್".-ಅಂದರು,ಓದುತ್ತಿದ್ದ ಫೈಲಿನಿಂದ ತಲೆಯೆತ್ತದೆಯೇ,
ಹಿಂದಿನ ದಿನವೇ ಆ ಕಚೇರಿಗೆ ಹಾಜರಾಗಿ ಚಾರ್ಜು ವಹಿಸಿಕೊಂಡಿದ್ದ ಇಲಾಖೆಯ
ನಿರ್ದೇಶಕರು. ಹೆಣ್ಣು ದನಿ ಕೇಳಿ ಬಳೆಗಳ ಕಿಣಿಕಿಣಿ ನಾದ ನಿರೀಕ್ಷಿಸಿದ್ದ ನಿರ್ದೇಶಕರು
ಅದು ಕೇಳದಿದ್ದಾಗ ತಲೆಯೆತ್ತಿ ಒಳಬಂದಾಕೆಯನ್ನು ಒಮ್ಮೆ ನೋಡಿದರು.
ಸ್ಲೀಲೆಸ್ ಬ್ಲೌಜು, ಬಾಯ್ ಕಟ್ ಕೂದಲು,ಹೊಕ್ಕುಳ ಕೆಳಗೆ ಸೀರೆ,ಅಪ್ಪಟ
ಮಾಡರ್ನ್ ವನತೆ.ಆ ಕಿವಿಯಿಂದು ಈ ಕಿವಿಯವರೆಗೂ ತುಟಿಯರಳಿಸಿ ಆಕೆ
ಮಾತಾಡಿದಳು. "ಸರ್,ನಾನು ಡಾ.ತಾರಾ ಪೋಕಳೆ.ಈ ಆಫೀಸಿನ ಸಹಾಯಕ
ನಿರ್ದೇಶಕಿ.ನಿನ್ನೆ ನೀವು ಚಾರ್ಜು ತಗೊಂಡಾಗ ನಾನು ಲೀವ್ ಮ್ಯಾಲಿದ್ದೆ.ಇವತ್ತ
ಬಂದ ಕೂಡಲೇ ನಿಮ್ಮನ್ನ ಭೆಟ್ಟಿ ಆಗ್ಲಿಕ್ಕೆ ಓಡಿ ಬಂದೀನಿ."ಅಷ್ಟಂದು ಅವರು ಹೇಳುವ
ಮೊದಲೇ ಆವರೆದುರು ಕೂತು ಕಣ್ಣುಗಳಲ್ಲಿ ಪ್ರಶಂಸೆಯ ಮಿಂಚು ತುಳುಕಿಸುತ್ತ
ಮುಂದುವರಿಸಿದಳು, "ನಿಮ್ಮ ಬಗ್ಗೆ ನಾ ಭಾಳ ಕೇಳೀನಿ ಸರ್.ನೀವು ಬಹಳ
ಎಫಿಶಿಯಂಟ್,ಮತ್ತ ಅಷ್ಟೇಸ್ತ್ರಿಕ್ಟ್,ಅಗದೀ ಕೇಪೆಬಲ್,ಅಂತ.ನನಗೆ ಭಾಳ ಖುಷಿ
ಆಗೇದ ಸರ್,ಹಾಳಾಗಿ ಹೋಗತಾ ಇರೋ ಈ ಆಫೀಸನ್ನ ಸುಧಾರಸ್ಲಿ ಕ್ಕೆ ನಿಮ್ಮಂಥಾ
ಕೆಲವೇ ಕೆಲವು ಸಿನ್ಸಿಯರ್ ಮತ್ತ ಆನೆಸ್ಟ್ ವರ್ಕರ್ಸ್ಗೆ ಭಾಳ ಸಂತೋಷ ಆಗೇದ."
ಹೊಗಳಿಕೆ ಯಾರಿಗೆ ಪ್ರಿಯವಲ್ಲ? ಸಾಹೇಬರ ಹುಬ್ಬು ಸಡಿಲಗೊಂಡವು.
ತುಟಿಗಳ ಮೇಲೆ ಕಂಡೂ ಕಾಣದ ಹಾಗೆ ಮುಗುಳ್ನಗು ಮೂಡಿತು.
ಈ ಪ್ರತಿಕ್ರಿಯೆಯಿಂದ ಪ್ರಚೋದನೆ ಸಿಕ್ಕಂತೆನಿಸಿ ತಾರಾ ಪೋಕಳೆ ತನ್ನ ನಿವೇದನೆ ಸುರು
ಮಾಡಿಯೇ ಬಿಟ್ಟಳು: "ಸರ್, ಈ ಆಫೀಸಿನ್ಯಾಗ ನಾನು ಹದಿನೈದು ವರ್ಷದಿಂದ
ಕೆಲಸಾ ಮಾಡ್ಲಿಕತ್ತೀನಿ,ನಾಲ್ಕು ಸರೆ ಟ್ರಾನ್ಸಫರ್ ಆದದ್ದನ್ನ ಕ್ಯಾನ್ಸಲ್
ಮಾಡಿಸಿಗೊಂಡೀನಿ; ನಾನು ಈ ಆಫೀಸಿನ ಆಧಾರಸ್ತಂಭಧಾಂಗ ಪ್ರಾಮಾಣಿಕವಾಗಿ,