ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೧೪ ನಡೆದದ್ದೇ ದಾರಿ
ಸಲ ಎಲ್ಲೋ ಎರಡೇ ಮಿನಿಟು ಭೆಟ್ಟಿಯಾದವರಲ್ಲೂ ಏನೇನೆಲ್ಲ ಆಗಿ ದೊಡ್ಡ ದೊಡ್ಡ adventures ನ ಕತೆಗಳೇ ಹುಟ್ಟುವುದಿಲ್ಲವೇ? ನೋಡೋಣ. ತಾನಂತೂ ಬಯಲಿಗೆ ಇಳಿದಿದ್ದಾಗಿದೆ.ಆಭೂತಪುರ್ವ ಅನುಭವವೊಂದು ತನಗಾಗಿ ಕಾದಿದ್ದರೆ ಬೇಡವೇಕೆ? -ಎಲ್ಲೋ ಬಸ್ಸು ನಿಂತಾಗ ಆತ ಮೃದುವಾಗಿ ಕೇಳಿದ: "ಚಹಾ ತಗೋತೀರೇನು?" "ಓ ಯೆಸ್." ಆತ ಎರಡು ಚಹಾ ತರಲು ಹೇಳಿದ. ಆದು ಬಂದಾಗ ತಾನೇ ಕೈಯಿಂದ ಅವಳಿಗೆ ಕೊಟ್ಟ. "ಇಂಥಾ ಥಂಡಿ ಇದ್ದಾಗ ಚಹಾ ಕುಡೀಲಿಕ್ಕೆ ನನಗೆ ಭಾಳ ಸೇರತದ." "ನನಗೂ," ಅಂದಳು ಆಕೆ. ಆಕೆ ಬಿಲ್ ಕೊಡಲು ಪರ್ಸ್ ತೆರೆದಾಗ ಬಹಳ ಆರ್ಜವತೆಯಿಂದ ಆವಳ ಕೈ ಮುಟ್ಟಿ ತಡೆದು, " No please,ನನಗೆ ಚಾನ್ಸ್ ಕೊಡ್ರಿ. ಇಂಥಾ ಆವಕಾಶ ನನಗೆಲ್ಲಿ ಮತ್ತೊಮ್ಮೆ ಸಿಗಬೇಕು?" ಎಂದು. -ಈತನೂ ತನ್ನಂತೆಯೇ ಆವಕಾಶ ಹುಡುಕಿಕೊಂಡು ಹೊರಟವನಿರಬೇಕು.... ಆಕೆ ಸುಮ್ಮನೆ ಕೈಯಲ್ಲಿದ್ದ ಪುಸ್ತಕದ ಮೇಲೆ ಕಣ್ಣಾಡಿಸಿದಳು. "ಏನದು ನಿಮ್ಮ ಕೈಯೊಳಗಿನ ಪುಸ್ತಕ?" "Waiting for Godot" "ಓ, ಹಂಗಾರ ನಮ್ಮಿಬ್ಬರ likings ಒಂದೇ ಆಂಧಂಗಾತು. ನಿಮಗೇನನಸ್ತದ ಆಂದರ ಬೆಕೆಟ್ ಬಗ್ಗೆ-" ಆತ ಮಾತಾಡುತ್ತಿದ್ದ: ಸಾಹಿತ್ಯ,ವಿಮರ್ಶೆ,ಹೀಗೇ ಹಲವಾರು ವಿಷಯ. ಆತನ ಬಿಝಿನಿಸ್ ,ಆದರಿಂದ ಆತನಿಗಾಗುವ ಬೇಸರ- ಅಕಸ್ಮಾತ್ ಬಸ್ಸಿನಲ್ಲಿ ಆಕೆಯ ಭೆಟ್ಟಿಯಾಗಿದ್ದರಿಂದ ಆತನಿಗಾದ ಸಂತೋಷ,ಇತ್ಯಾದಿ. ಆಕೆ ಆತನ ಧ್ವನಿಯ ಏರಿಳಿವುಗಳಿಗೆ ಕಿವಿಗೊಟ್ಟು ನಡುನಡುವೆ ಹ್ಞೂ , ಅನ್ನುತ್ತ ಆತನ ಮೂಗು- ತುಟಿಗಳ ಚಲನೆ ನೋಡುತ್ತ ಕುತಿದ್ದಳು.ಯಾಕೋ ಜೀವನವೆಲ್ಲ ಹಗುರಹಗುರವಾದಂತೆ ಅನ್ನಿಸತೊಡಗಿತ್ತು. ಅವಳಿಗೆ ಯಾವಾಗ ನಿದ್ದೆ ಬಂತೋಗೊತ್ತಿಲ್ಲ... "ಮಿನಿ,ಮಿನಿ"-ಮೆತ್ತಗಿನ ಧ್ವನಿ ಕಿವಿಯ ತೀರ ಸಮೀಪವೇ ಕೇಳಿ ಎಚ್ಚರಾದರೂ ಕಣ್ಣು ತೆರೆಯಲಿಲ್ಲ ಆಕೆ. ಏನೋ ಒಂದು ಥರದ ಗಂಡು ವಾಸನೆ ಹತ್ತಿರದಿಂದಲೇ ಬಂದಂತಾಗಿ ಏನಿರಬಹುದು ಅಂತ ಒಂದು ಕ್ಷಣ ವಿಚಾರಿಸಿದಳು. ಮರುಕ್ಷಣ ಕಾರಣ ಹೊಳೆಯಿತು- ತಾನು ಆ ಆಪರಿಚಿತನ ಭುಜದ ಮೇಲೆ