ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿರುಕಾದಂಬರಿಗಳು/ಗಂಡಸರು
ಮಾಡ್ಲಿಕ್ಕೆ ಹಚ್ಚಿದ್ದೇ ಈ ಕಾದಂಬರಿಗಳು...." "ಹೌದೇನು? ಹಂಗಾರ ನಾ ಬರದದ್ದು ಸಾರ್ಥಕ ಆಧಾಂಗಾತು.I am a strong supporter of the women's lib. ಆದರ ಈ ಹೆಂಗಸರ ಉದ್ಧಾ ಸಲುವಾಗಿ ನನಗ ಇರೋ ಕಳಕಳಿಯಿಂದ ಏನೂ ಹೆಚ್ಚಿನ ಉಪಯೋಗ ಆಗವಲ್ದಲಾ, ನನ್ನ ಪುಸ್ತಕ -ಆರ್ಟಿಕಲ್ಸು-ಭಾಷಣ ಯಾವುದರಿಂದನೂ ವಿಶೇಷ ಜಾಗೃತಿ ಹೆಂಗಸರೊಳಗ ಆಗವಲ್ದಲಾ ಅಂತ ನನಗ ಕೆಟ್ಟನಸ್ತಿತ್ತು. ನಿಮ್ಮಂಥಾ ಉತ್ಸಾಹೀ ಆದರ್ಶವಾದೀ ಹುಡುಗಿಗೆ ನನ್ನ ತತ್ತ್ವದ ಬಿಸಿ ತಟ್ಟೇದ ಅಂದರ ಖರೇನ ನನಗ Satisfaction ಅನಸ್ತದ." ಆತನ ಹೊಗಳಿಕೆಯಿಂದ ಆಕೆಗೆ ನಾಚಿಕೆ ಅನಿಸಿತು. ತಗ್ಗಿಸಿದ ಆಕೆಯ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದಂತೆ ಒಂದು ಕ್ಷಣ ಆತನಿಗೆ ತಾನು ಏನು ಮಾತಾಡುತ್ತಿದ್ದೆ ಅನ್ನುವುದು ಮರೆತಂತಾಯಿತು. ಕೂಡಲೆ ಹೊಸ ವಿಷಯ ಹುಡುಕಿ ಆತ ಕೇಳಿದ."ನೀವು ಬಂದದು-" "ನಾನು ಬಂದದ್ದು "-ತಲೆಯೆತ್ತಿ ಆತನನ್ನು ನೋಡುತ್ತಾ ಶಾಂತಿ ಹೇಳಿದಳು, "ನನಗ ನಾಳೆ ಶನಿವಾರದ ಕ್ಲಾಸ್ -ಸೆಮಿನಾರ್ ನೊಳಗ ಒಂದ ಪೇಪರ್ ಓದಬೇಕಾಗೇದ ರೋಮ್ಯಾಂಟಿಕ್ ಪೀರಿಯಡ್ ನ ಕವಿಗಳ ಬಗ್ಗೆ. ನಮ್ಮ ಇಂಗ್ಲಿಶ್ ಪ್ರೊಫೆಸರ್ ಕಡೆ ಹೋಗಿದ್ದೆ ಕೆಲವು ಡಿಫಿಕಲ್ಟೀಜ್ ಕೇಳ್ಲಿಕ್ಕೆ. ಅವ್ರು explain ಮಾಡಿದ್ರು.ಆ ಮ್ಯಾಲೆ ಇನ್ನೂ ಡೀಟೇಲ್ಸ್ ಬೇಕಾಗಿದ್ರೆ ನಿಮ್ಮ ಕಡೆ ಹೋಗಿ ಕೇಳು, ಅಂದ್ರು. ಇಂಗ್ಲಿಶ್ ಲಿಟರೇಚರ್ ನಿಮ್ಮ ಸಬ್ಜಕ್ಟ್ ಅಲ್ಲದಿದ್ರೂ ನೀವು ಭಾಳ ಓದಿಕೊಂಡೀರಿ, ನನಗ ಬೇಕಾದ ಹೆಲ್ಪ್ ಮಾಡೇ ಮಾಡ್ತೀರಿ,ಅಂದ್ರು. ನಿಮಗ ತ್ರಾಸಾಗತದೇನೋ-" "ನೋ,ನೋ.It is a pleasure,ಎಲ್ಲಿ ನೋಡೋಣ, ಏನದು ಡಿಫಿಕಲ್ಟಿ" "ಕೀಟ್ಸ್ ನ ಫಿಲೊಸಫಿ-" "ಓಹೋ,ಕೀಟ್ಸ್ ನನ್ನ ಪ್ರಿತಿಯ ಕವಿ." "ಹೌದs ಸರ್? ನನಗೂ...." * * * "ಸರ್, ಇವತ್ತಿನ ಫಂಕ್ಶನ್ ದ ಅಧ್ಯಕ್ಷ ರಾಗಿದ್ದರಲಾ, ಅವ್ರು ನಿಮ್ಮ ಕಾದಂಬರಿಗಳ ಬಗ್ಗೆ ಮಾತಾಡೋವಾಗ ನಿಮಗೆ ಹಿಂದೂ ಹೆಣ್ಣುಮಕ್ಕಳ ಉದ್ಧಾ ರದ ಸಲುವಾಗಿ ಇರೋ ಅನುಕಂಪ ಅಪ್ರೀಸಿಯೇಟ್ ಮಾಡಿ, ಕಡೀಕೆ ಮಾತ್ರ ಇದು ತೀರಾ Ideailistic attitude, ಇವ್ರು ಹೇಳೂವಂಥಾ ಸ್ವಾತಂತ್ರ್ಯ ಅಂದರ ಆದು ಸ್ವೇಚ್ಛಾ ಸ್ವೈರಾಚಾರ ಆದೀತು-ಅಂತ ಅಂದ್ರು.ನನಗ ಭಾಳ ಸಿಟು ಬಂದ್ಬಿಡ್ತು"