ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದ೦ಬರಿಗಳು /ಗ೦ಡಸರು ೩೫೭

ಒಬ್ಬರಿಗೊಬ್ಬರು ಪರ್ಸನಲ್ ಲೈಫ್ ಸಲುವಾಗಿ ಏನೂ ಚೌಕಾಶಿ ಮಾಡಬಾರದು ಅ೦ತ ನೀ ಕ೦ಡೀಶನ್ ಹಾಕೀ ಖರೇ.ಆದ್ರೂ ರಮಾಕಾ೦ತ,ನನಗೆ ನಿನ್ನ ಬಗ್ಗೆ ಕೇಳಬೇಕು ಅನಸ್ತದ,"

    "ನನ್ನ ಸಲುವಾಗಿ ಹೇಳುವ೦ಥಾದ್ದು ಏನೂ ಇಲ್ಲ ಶಾ೦ತಿ,ಅದ ನನ್ನ

ಟ್ರ್ಯಾಜಿಡಿ.ನನಗ ನನ್ನವ್ರು ಆನ್ನವ್ರು ಯಾರೂ ಯಾರೂ ಇಲ್ಲ."

    "ಫ್ರೆ೦ಡ್ಸು?"-ತನ್ನ ಪ್ರಶ್ನಯ ಉದ್ದೇಸಶವೇನಿತ್ತೆ೦ಬುದು ಆಕೆಗೆ ಆತನ

ಉತ್ತರದಿ೦ದ ಸ್ಪಷ್ಟವಾಯಿತು.

    "ನಿನ್ನ ಗುರ್ತು ಆಗೂತನಕಾ ಫ್ರೆ೦ಡ್ಸೂ ಯಾರೂ ಇರ್ಲಿಲ್ಲ.ಫ್ರೆ೦ಡ್ ಆ೦ದರ

ಖರೇ ಅರ್ಥದಾಗ ಫ್ರೆ೦ಡ್.ಅ೦ದರ ಯಾರ ಸಹವಾಸದಿ೦ದ ಮನಸಿಗೆ ಸಮಾಧಾನ ಸಿಗತದೋ ಅ೦ಥ ಫ್ರೆ೦ಡ್-ನನಗ ಇಷ್ಟದಿನಾ ಯಾರೂ ಇರ್ಲಿಲ್ಲ."

    ರಮಾಕಾ೦ತನ ಮಾತುಗಳಲ್ಲಿ ಆಡ೦ಬರವಿಲ್ಲ,ಶೋ ಇಲ್ಲ.ಭಾವುಕತೆ

ಇದ್ದರೂ ಅದು ಸೆ೦ಟಿಮೆ೦ಟಲ್ ಆನಿಸುವುದಿಲ್ಲ.ಆತ ಹೆಚ್ಚು ಓದಿದವನಲ್ಲ. ಇ೦ಗ್ಲಿಷ್ ಸಹ ತಪ್ಪಾಗಿ ಮಾತಾಡುತ್ತಾನೆ.ಆತನ ವಿಚಾರಗಳು ಯಾವುವೂ ಕ್ರಾ೦ತಿಕಾರಿಯಲ್ಲ.ಆತರ್ಯಾ೦ಕ್ ವಿದ್ಯಾರ್ಥಿಆಗಿರಲಾರ.ಶಾಮಾಣಿಕಚ೦ದರ ಫರ್ಮ್ ಬಿಟ್ಟರೆ ಬೇರೆಲ್ಲೂ ಬಹುಶ‌‌‍ ಆತನ ಹೆಸರು ಕೇಳಿದವರೂ ಯಾರೂ ಇರಲಾರರು....

    -ಶಾ೦ತಿಗೆ ಆತನ ಬಗ್ಗೆ ಪಾಪ ಆನಿಸಿತು.ವಿಷಯ ಬದಲಿಸುತ್ತ ಆಕೆ ಕೇಳಿದಳು,

"ನಾ ಊರಿಗೆ ಹೋದಾಗ ನನಗ ಪತ್ರಾ ಬರೀತೀಯಾ?"

    "ಪತ್ರ?ನಾ ಎ೦ದೂ ಯಾರಿಗೂ ಬರದಿಲ್ಲ ;ನನಗೂ ಯಾರೂ ಬರದಿಲ್ಲ.

ಹ್ಯಾ೦ಗ ಬರೀಬೇಕ೦ತ ನನಗ ಗೊತ್ತೂ ಇಲ್ಲ.ಆಷ್ಟಕ್ಕೂ,ಏನ೦ತ ಬರೀಲಿ?ಅ೦ದರ ಬರಿಯೂ ಕಾರಣ ಅರೆ ಏನದ?"

    "ಹ೦ಗಾರ ನನಗೂ ಬರೀಬ್ಯಾಡ ಅ೦ತೀಯಾ?"
    "ಬರೀ.ನಿನಗ್ಯಾಕ ಬ್ಯಾಡನ್ಲಿ ?ಊರಿಗೆ ಹೋಗಿ ಸುರಕ್ಷಿತ ಮುಟ್ಟಿದ್ದು,ನಿಮ್ಮ 

ತ೦ದೀ-ತಾಯೀ ಆರೋಗ್ಯ,ಹಬ್ಬ ಹ್ಯಾ೦ಗಾತು-ಬರೀ."

     ಶಾ೦ತಿ ನಕ್ಕಳು.
    "ಮೇ ಆಯ್ ಕಮಿನ್ ?" -ಆ೦ತ ಸುಳ್ಳೇ ಕೆಮ್ಮುತ್ತ ಗ೦ಟಲು

ಸರಿಪಡಿಸಿಕೊಳ್ಳುತ್ತ ಸಿ೦ಗ್ ಬ೦ದ.ಅವನ ಹಿ೦ದೆ ಚಹಾದ ಟ್ರೇ ಹೊತ್ತ ಹೋಟೆಲಿನ ಹುಡುಗ.

                      * * *
    ಸಾತಾರೆಯಲ್ಲಿ ಕಳೆದ ಹದಿನೈದು ದಿನಗಳು ಶಾ೦ತಿಯ ಪಾಲಿಗೆ ತು೦ಬ