ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೪ ನಡೆದದ್ದೇ ದಾರಿ

   ಇದು ಹಿಂಗ ಇರಲಿ ನಡೀ ರಮಾಕಾಂತ, ನಮಗ ಹೊತ್ತಾಗ್ತದ ಎಂದು ಆಕೆ ಅವಸರಿಸಿದಳು.
   ಅರೆ, ಯಾರದದು ಪತ್ರ? ನೋಡೆರ ನೋಡಲಾ
   ಅದ, ನಾ ನಿನಗ ಹೇಳಿದ್ದಿಲ್ಲ- ನಾ ಹಿಂದಕ ಒಬ್ಬನ್ನ ಲವ್ಹ್ ಮಾಡಿದ್ದೆ ಅಂತ?
   ಓಹೋ, ಅವನದೇನು? ಛಲೋ ಹೊತ್ತಿನ್ಯಾಗ ತನ್ನ ನೆನಪ ಮಾಡಿಕೊಟ್ಟಾನ. ಇನ್ವಿಟೇಶನ್ ಕಳ್ಸೂಣೇನು ಅವನಿಗೂ? ಅಂತ ನಕ್ಕು ಆತ ಬೂಟ್ಸು ಹಾಕಿಕೊಳ್ಳತೊಡಗಿದ, ನಡೀ, ರಾತ್ರಿ ಊಟಾಗಿ ಮಲಗೋವಾಗ ಆರಾಮ ಕೂತು ಓದಿ ನೋಡೀಯಂತ ಏನು ಬರದಾನಂತ.
    ಯಾಕೋ ಶಾಂತಿಗೆ ಪಿಚ್ಚೆನ್ನಿಸತೊಡಗಿತು. ಆಕೆ ರಮಾಕಾಂತನ ಹಿಂದೆ ಸುಮ್ಮನೆ ನಡೆದಳು.
                            ***
  ರಾತ್ರಿ ಶಾಂತಿ ಮಂಚದ ಮೇಲೆ ಕೂತಿದ್ದಳು.ರಮಾಕಾಂತ ಮೊದಲು ಅವಳ ಪಕ್ಕದಲ್ಲಿ ಮಲಗಿದ್ದವನುಮ್ ಅವಳ ಮಾತು ಕೇಳುತ್ತ ಕೇಳುತ್ತ ನದುವೆಯೇ ಯಾವಾಗಲೋ ಎದ್ದು ಹೋಗಿ ಎದುರಿನ ಕುರ್ಚಿಯಲ್ಲಿ ಕೂತಿದ್ದನು. ಶಾಂತಿ ನಿಧಾನವಾಗಿ ಎಲ್ಲ ಹೇಳಿದಳು. ಅಲ್ಲಲ್ಲಿ ಅವಳು ಹೇಳಲು ಮರೆತ ಸಣ್ಣ-ಪುಟ್ಟವುದಗಳನ್ನು ಹೇಳಲು ಮಠದ್ ಅವಳಿಗೆ ಆಕಸ್ಮಿಕವಾಗಿ ತಿರುಗಿ ಕಳಿಸಿದ ಮಾಂಶಿಯ ಮನೆಯಿಂದ ರಿಡಿರೆಟ್ ಆಗಿದ್ದ ಅವಳವೇ ಪತ್ರಗಳಿದ್ದವು.
      ಎಷ್ಟೋ ಹೊತ್ತಿನವರೆಗೆ ರಮಾಕಾಂತ ಸುಮ್ಮನೇ ಕೂತಿದ್ದ. ನಗೆಚಾಟಿಕೆಯ ಧ್ವನಿಯಲ್ಲೇ ಕಥೆ ಹೇಳಲು ಪ್ರಾರಂಭಿಸಿದ್ದ ಶಾಂತಿ ಕ್ರಮೇಣ ಗಂಭೀರನಾಗುತ್ತಿದ್ದ ರಮಾಕಾಂತನನ್ನು ನೋಡುತ್ತ ತನಗೆ ತಿಳಿಯದೇ ತಾನೂ ಗಂಭೀರಳಾಗಿ, ಕೊನೆಗೆ ಪೆಚ್ಚಾಗಿ ಸುಮ್ಮನೆ ಮಲಗಿದಳು.
       ದಣಿದಿದ್ದರಿಂದ ಅವಳಿಗೆ ಕೂಡಲೇ ನಿದ್ರೆ ಬಂತು.
                            ***
    ಮುಂಜಾನೆ ಶಾಂತಿಗೆ ಎಚ್ಚರವಾದಾಗ ಪಕ್ಕದಲ್ಲಿ ಆತ ಇರಲಿಲ್ಲ.ದಿನಾ ಅವಳು ಚಹಾ ಮಾಡಿ ಹೊದಿಕೆ ಎಳೆದು ಎಬ್ಬಿಸುವವರೆಗೂ ಏಳದಿರುತೀದ್ದ ಆತ ಇಂದು ಇಷ್ಟು ಬೇಗನೇ ಎದ್ದದ್ದು ಅವಳಿಗೆ ಯಾಕೋ ಆಶ್ಚರ್ಯವನ್ನುಂಟು ಮಾಡಲೇ ಎಲ್ಲ. ಎಲ್ಲ ಮೊದಲೇ ಗೊತ್ತಿದ್ದಂತೆ ಆಕೆ ಎದ್ದು ಟೇಬಲ್ ಬಳಿ ಹೋಗಿ ನೋಡಿದಳು.