ಪುಟ:ನಡೆದದ್ದೇ ದಾರಿ.pdf/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದಂಬರಿಗಳು/ಶೋಷಣಿ, ಬಂಡಾಯ ಇತ್ಯಾದಿ....

ಪೇಶಂಟ್ಸ್ ಇಲ್ಲದೆ ತೀರ ಬಿಡುವಾಗಿದ್ದಾಗ ಮಾತ್ರ ಆಕೆ ರೋಶನ್ಬೀಯ ಕಣ್ಣೀರಿನ ಕತೆ ಕೇಳುವುದು. ರೋಶನ್ಬೀಯೂ ದಡ್ಡಿಯಲ್ಲ. ಅವಳಿಗೆ ಗೂತ್ತು. ಡಾಕ್ಟರ್ ಬಾಯಿಗೆ ಇವತ್ತು ಆಗಲೇ ತಡವಾಗಿದೆ . ಊಟ ಮಾಡಿ ಅವರು ಹತ್ತರ ಲೂಕಲ್ ಹಿಡಿದು ವ್ಹಿ.ಟಿ. ಯವರೆಗೂ ಹೂಗಬೇಕು . ಇಲ್ಲವಾದರೆ ದೊಡ್ಡ ದವಖಾನೆಯ ದೂಡ್ಡ ಡಾಕ್ಟರು ಸಿಟ್ಟಾಗುತ್ತಾರೆ . ಇದು ತನ ಕಥೆ ಬಿಚ್ಚಲು ಸಮಯವಲ್ಲ.... ತಾನೀಗ ಮೌನವಾಗಿ ಬೇಗ ಬೇಗ ಕೆಲಸ ಮುಗಿಸುವುದೇ ಒಳ್ಳೆಯದು ಅಂತ.

  ಆದರೂ ಇವತ್ತೇಕೋ ಆಕೆಗೆ ತಡೆದುಕೊಳ್ಳುವುದಾಗಲಿಲ್ಲ. ಶಶಿ ಊಟ ಮುಗಿಸಿ ಡ್ರೆಸ್ ಮಾಡಿಕೂಳ್ಳುತ್ತಿದಾಗ ಬಾಗಿಲಲ್ಲಿ ಬಂದು ನಿಂತಳು. ಗಂಟಲುಬ್ಬಿ ಬಂದು "ಡಾಕ್ಟರ್ ಬಾಯೀ...." ಅಂದಳು.
  ರೋಶನ್ಬೀಯ ಕತ್ತೆ ಇವತ್ತು ಬೇರೆಯಾಗಿದೆ ಅಂದುಕೂಂಡು ಶಶಿ ಕನ್ನಡಿಯೆದುರು ಕೂತಿದ್ದ ಹಾಗೇ ಹರುಕು-ಮುರುಕು ಹಿಂದೂಸ್ತಾನಿಯಲ್ಲಿ ಏನಾಯಿತೆಂದು ಕೇಳಿದಳು. ಆಕೆ ಅಷ್ಟು ಕೇಳುವುದೇ ತಡ , ರೋಶನ್ಬಿ ಕೂತ್ತಲೇ ಕುಸಿದು ಕುಳಿತು ಅಳಲಾರಂಭಿಸಿದಳು. ಅಳುವಿನ ನಡುವೆ ಡಾಕ್ಟರ್ ಬಾಯಿಯ ಗಡಿಬಿಡಿಯ ಹೊತ್ತಿನಲ್ಲಿ ತಾನು ಇಂಥ ಭಾವೋದ್ರೇಕಕ್ಕೂಳಗಾಗಿ ತೂಂದರೆಯುಂಟು ಮಾಡಿದ್ದನ್ನು ಸಮಥಿ೯ಸಿಕೂಳ್ಳಲೆನ್ನುವಂತೆ ಹೇಳುತ್ತ ಹೂದಳು-ಕಳೆದ ಎಂಟು ದಿನಗಳಿಂದ ಅಕೆಯ ಗಂಡ ಮೆಹಬೂಬ್ ಮನೆಗೇ ಬಂದಿರಲಿಲ್ಲ . ಕೂನೆಯ ಮಗುವಿಗೆ ವಿಪರೀತ ಕೆಮ್ಮು-ಜ್ಪರ . ಪ್ರತಿಸಲ ತನ್ನ ಸಂಬಳದ ಹಣದಲ್ಲಿ ಒಂದು ಪಾಲನ್ನಾದರೂ ಅವಳಿಗೆ ಕೂಡುತ್ತಿದ್ದವನು ಈ ಸಲ ಏನೂ ಕೊಟ್ಟಿಲ್. ಅಷ್ಟೇಅಲ್ಲ, ರೋಶನ್ಬೀಗೆ ಇವೊತ್ತು ಇಷ್ಟೊಂದು ಸಂತಾಪವಾಗಲು ಕಾರಣ-ಆಕೆ ಬಹು ಕಷ್ಟಪಟ್ಟು ದುಡಿದು ಸಮಯ ಬಂದಾಗ ಇರಲೆಂದು ಕೂಡಿಸಿಟ್ಟಿದ್ದ ಟ್ರಂಕಿನಲ್ಲಿನ ಹಣ ಸುಮಾರು ಇನ್ನೂರು ರೂಪಾಯಿಯಷ್ಟನ್ನು ಕಿತ್ತುಕೊಂಡು ಹೋಗಿದ್ದಾನೆ...
  "ಅವಳ ಮನೆ ಹಾಳಾಗ , ಅವಳಿಗೆ ಹುಳ ಬೀಳ ..." ರೋಶನ್ ಬಿ ಇನ್ನೇನು ಮಾಡಲೂ ತೋಚದೆ ತನ್ನ ಗಂಡ ಇಟ್ಟುಕೊಂಡ ಹೆಂಗಸಿಗೆ ಶಾಪಹಾಕುತ್ತ ಅಳುತ್ತಿದ್ದಳು.
  "ನಿನ್ನ ಗಂಡನ ತಪ್ಪಿಗೆ ಬೇರೆ ಹೆಂಗಸನ್ನೇಕೆ ಬೈಯುತ್ತೀ ರೋಶನ್ ? ಇವನ ಬುದ್ದೀನೇ ಸರಿ ಇದ್ದಿದ್ದರೆ ಅವಳೇನು ಮಾಡುತ್ತಿದ್ದಳು?"
  "ಇಲ್ಲ ಡಾಕ್ಟರ್ ಬಾಯಿ, ನನ್ನ ಗಂಡನ ಬುದ್ದಿ ಸರಿಯಾಗೇ ಇತ್ತು. ಆ ಲೌಡೀನೇ ಅವನನ್ನ ಕೆಡಿಸಿದ್ದು...."
   ಇದಲ್ಲವೆ ಪತಿಪರಾಯಣತೆ ಅಂದುಕೊಳ್ಳುತ್ತ ಶಶಿ ಮುಂದೆ ಮಾತು ಬೆಳೆಸದೆ
  "ನಿನ್ನ ಗಂಡನ ತಪ್ಪಿಗೆ ಬೇರೆ ಹೆಂಗಸನ್ನೇಕೆ ಬೈಯುತ್ತೀ ರೋಶನ್? ಇವನ ಬುದ್ದೀನೇ ಸರಿ ಇದ್ದಿದ್ದರೆ ಅವಳೇನು ಮಾಡುತ್ತಿದ್ದಳು?".
  "ಇಲ್ಲ ಡಾಕ್ಟರ್ಬಾಯಿ  ,ನನ್ನ ಗಂಡನ ಬುದ್ಧಿ ಸರಿಯಾಗೇ ಇತ್ತು. ಆ ಲೌಡೀನೇ ಅವನನ್ನ ಕೆಡಿಸಿದ್ದು...."
    
  ಇದಲ್ಲವೆ ಪತಿಪರಾಯಣತೆ ಅಂದುಕೊಳ್ಳುತ್ತ ಶಶಿ ಮುಂದೆ ಮಾತು ಬೆಳೆಸದೆ.