ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀಡುವ ಅವಕಾಶವೆಲ್ಲಿ? ತಿರುಗಿ ಬರುವಾಗ ಬಸ್ ಗಾಗಿ ಕಾಯುತ್ತ ತದವಾಯಿತೆಂದು ಚಡಪದಿಸುತ್ತ ನಿಂತಿರುವ ಯಾರಾದರೂ ಅಸಹಾಯ ಸುಂದರಿಗೆ ತನ್ನ ಸ್ಕೂಟರ್ ನಲ್ಲಿ ಲಿಫ್ಟ್ ಕೊಡುವುದು ಹೇಗೆ ಸಾಧ್ಯ? ಛೇ, ತೀರಾ ಆನ್ ರೋಮ್ಮಾಂಟಿಕ್ ಆಗುವುದು. ಹೇಗೆ ಇವಳನ್ನು ತಪ್ಪಿಸುವುದು...? 'ನೀನು ಬರಬೇಡ ಕಣೇ' ಎಂದು ಹೇಳಿದರೆ ಸಿಟ್ಟಾಗಿ ಆತ್ತು ಊಟ ಬಿಟ್ಟು ರಾತ್ರಿ ಮಕ್ಕಳೋಂದಿಗೆ ಹೊರಗಿನ ರೂಮಿನಲ್ಲೇ ಮಲಗುತ್ತಾಳೆ ಇವಳು. ನಂತರ ಇವಳನ್ನು ಸಮಾಧಾನಪಡಿಸಬೇಕಾದರೆ 'ನೀನೇ ನನ್ನ ಬಾಳಿನ ಬೆಳಕು' ಎಂದು ಮುಂತಾಗಿ ಸಿನೆಮಾ ನಾಯಕನ ಹಾಗೆ ಅರ್ಥವಿಲ್ಲದ್ದೆಲ್ಲ ಮಾತಾಡಿ, ಅವಳು ಇಚ್ಛಿಸಿದರೆ ಅವಳೊಂದಿಗೆ ಮೂರುವರೆ ತಾಸು ಸೆಕೆಯಲ್ಲಿ ಕೂತು ಹೊಸದಾಗಿ ಬಂದಿರುವ ಕನ್ನಡ ಸಿನೆಮಾ ನೋಡುವ ಶಿಕ್ಷೆ ಬೇರೆ ಅನುಭವಿಸಬೇಕು. ಎಂಥ ಸತ್ವ ಪರೀಕ್ಷೆ...

     ಅವನು ಮನಸ್ಸಿಲ್ಲದ ಮನಸ್ಸಿನಿಂದ ಹೊದಿಕೆ ಸರಿಸಿ ಎದ್ದು ಆಕಳಿಸುತ್ತಲೇ ಆಡಿಗೆ ಮನೆಗೆ ಬಂದು ಮುಖ ತೊಳೆಯದೆಯೆ ಚಹಕ್ಕಾಗಿ ಕೈ ಚಾಚಿದಾಗ ಪ್ರೀತಿಯಿಂದ ಗದರಿಸಿದಳು ಹೆಂಡತಿ, "ಇದೇನ್ರೀ ಇದು ಆಸಹ್ಯ, ಮುಖಾ ತೊಳಕೊಂಡು ಬರ್ರೆಲಾ."
     ಹತ್ತು ಗಂಟೆಗೆ ಇರುವ ಸಮಾರಂಭಕ್ಕಾಗಿ ಇವಳು ಎಂಟಕ್ಕೆ ಸಿಂಗಾರಾಗಿ ಕೂತಿದ್ದಾಳೆ: ಜರದ ಸೀರೆ, ಎತ್ತಿ ಕಟ್ಟಿದ್ದಾಳೆ ಕೂದಲನ್ನ, ಮಲ್ಲಿಗೆ ಹೂ. ಒಮ್ಮೆ ವಿಮರ್ಶಕನ ದೃಷ್ಟಿಯಿಂದ ಆಡಿಯಿಂದ ಅಡಿಯಿಂದ ಮುಡಿಯವರೆಗೆ ಅವಳನ್ನು ನೋಡಿದ ಆತ... ಆಡ್ಡಿಯಿಲ್ಲ, ಚೆನ್ನಾಗಿಯೇ ಇದ್ದಾಯೆ ತನ್ನ ಹೆಂಡತಿ. ಈಗಿವಳು ಒಮ್ಮೊಮ್ಮೆ ಪೆದ್ದು ಪೆದ್ದೆನಿಸಿದರೂ ಇವಳಿಗಾಗಿ ತಾನು ಹುಚ್ಚಾದ ಕಾಲವೂ ಒಂದಿತ್ತು. ತಾನು ಪ್ರೀತಿಸಿದ್ದ (ಪ್ರೀತಿ? ಹಹ್ಹಹ್ಹ...) ಹುಡುಗಿಯರಾರೂ ತನ್ನ ಪ್ರೀತಿಗೆ ಸೊಪ್ಪು ಹಾಕಲಿಲ್ಲವೆಂದು ತಾನು ಪರೀಕ್ಷೆಗೆ ಕೂಡ್ರುವದನ್ನೂ ಬಿಟ್ಟು ದುಃಖಾಂತ ನಾಟಕಗಳನ್ನೇ ಬರೆಯುತ್ತ ತಿರುಗುತ್ತಿದ್ದ ದಿನಗಳಲ್ಲಿ ಇವಳ ಅಪ್ಪನ ಕೈಗೆ ಸಿಕ್ಕು ಬಿದ್ದಿದ್ದೆ. ಇವಳನ್ನು ಕಟ್ಟಿದರು. ನಂತರ ರಾತ್ರಿ ಹಗಲಾಗಿ, ಹಗಲು ರಾತ್ರಿಯಾಗಿ ಇವಳೊಂದಿಗೆ ಮುಗಿಯದ ಆತದಲ್ಲಿ ಮೈಮರೆತಾಗ ಪ್ರೀತಿ-ಗೀತಿ ಎಲ್ಲ ಹುಚ್ಚೆನ್ನಿಸಿತ್ತು ; ಇದಿಷ್ಟೆ ಖರೆ ಅನಿಸಿತ್ತು. ಅಷ್ಟರ ಮಟ್ಟಿಗೆ, ಸ್ವಲ್ಪ ಕಾಲವೇ ಏಕಾಗಲೊಲ್ಲದು, ತನಗೆ ಮಬ್ಬು ಕವಿಸಿದ ವ್ಯಕ್ತಿತ್ವ- 'ವ್ಯಕ್ತಿತ್ವ'ವೆಂಬ ದೊಡ್ಡ ಹೆಸರೇಕೆ ಸುಮ್ಮನೆ, 'ಮೈ' ಸರಿಯಾದ ಶಬ್ಬ -ಇವಳದು.
     ಇಷ್ಷು ತಯಾರಾದವಳಿಗೆ ಬರಬೇಡ ಅಂದರೆ ಸರಿಯಾಗದು. ಬರಲಿ. ತಾನು ಗಂಭೀರವಾಗಿರಬೇಕಾಗುವುದಷ್ಟೆ? ಇರೋಣ, ಅದರಲ್ಲೇನು? ಹೆಂಡತಿಯೊದಿಗೆ ತಾನು ನಡೆದು ಬರುವಾಗ, ಇಲ್ಲದ ಪ್ರೀತಿ ಕಣ್ಣಲ್ಲಿ ತುಂಬಿಕೊಂಡು ಮಾತಾಡುವಾಗು,