ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೪೮೯ ನಡೆದದ್ದೇ ದಾರಿ
ಮುಂದಾಳುವಿನ ಜನತಾಸೇವೆ
ಅದೊಂದು ಸಣ್ಣ ತಾಲೂಕು ಕೇಂದ್ರ.ಅಲ್ಲೊಂದು ಸರ್ಕಾರಿ ಪದವಿ ಪೂರ್ವ ಕಾಲೇಜು.ಸುತ್ತಮುತ್ತಲ ಹತ್ತಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ಆ ಕಾಲೇಜಿಗೆ ಬರುತ್ತಿದ್ದರು ಹತ್ತಿರದಲ್ಲೆಲ್ಲೂ ಬೇರೆ ಕಾಲೇಜು ಇಲ್ಲದ್ದರಿಂದ ಸಹಜವಾಗಿಯೆ ಪ್ರತಿ ವರ್ಷ ಆ ಕಾಲೇಜಿನಲ್ಲಿ ಪ್ರವೇಶ ಪಡೆಯಲು ನೂಕು ನುಗ್ಗಲು ಇರುತ್ತಿತ್ತು.ಪ್ರತಿ ವರ್ಷ ಹಳ್ಳಿಗಲಿಂದ ಬರುವ ಹಲವಾರು ಮೂಗ್ಧ ವಿದ್ಯಾರ್ಥಿಗಳಿಗೆ ಆ ಕಾಲೇಜಿನಲ್ಲಿ ಪ್ರವೇಶ ದೊರಕಿದಸಿ ಕೊಡಲು ಒಬ್ಬ ಸ್ವಯಂಘೋಷಿತ ಮೂಂದಾಳು ಮೂಂದೆ ಬರುತ್ತಿದ್ದ.ಅವನ ಹೆಸರು ಕಲ್ಲಪ್ಪ ಮಣಿನಮನಿ.
ಈ ವಎಷ ಎಂದಿನಂತೆ ಕಲ್ಲಪ್ಪ ಮಣಿನಮನಿ ಖಾದಿ ಶರ್ಟ್-ಪಾಯಿಆಮ ಧರಿಸಿ ಗತ್ತಿನಿಂದ ಕಾಲೇಜಿಗೆ ಬಂದ ಜೂನ್ ತಿಂಗಳು ಆಗಷ್ಟೆ ಎಸ್ಸೆಸ್ಸೆಲ್ಸಿ ಫಾಲಿತಾಂಶ ಹೂರಬಿದ್ದಿತ್ತು.ಕಾಲೇಜಿನಲ್ಲಿ ಅಪಾರ ಜನ ಸಂದಣಿ.ಎಲ್ಲರನ್ನು ನೂಕಿಕೊಂಡು ಪ್ರಿನ್ಸಿಪಾಲರ ಕೋಣೆಯ ಹಒರಗಿದ್ದ ಸಿಪಾಯಿಯನ್ನ ಆಚೆ ದೂಡಿ ಮಣಿನಮನಿ ಒಳಗೆ ಪ್ರವೇಶಿಸಿದ."ಓಹೋ" ಅಂದುಕೊಂಡ.ಹೊಸ ಪ್ರಿನ್ಸಿಪಾಲರು ಈಗಷ್ಟೆ ಇಲ್ಲಿಗೆ ವರ್ಗವಾಗಿ ಬಂದಿದ್ದರು ಇನ್ನೂ ಯುವಕ ಆದರ್ಶವಾದಿಯಂತೆ,ಶಿಸ್ತಿನ ಸಿಪಾಯಿಯಂತೆ,ಕಾನ್ನೂನು ಪರಿಪಾಲಕನಂತೆ ಹಾಗಂತೆ ಹೀಗಂತೆ ಅಂತ ಮೂದಲೆ ಮಣ್ಣಿಮನಿ ಕೇಳಿ ತಿಳಿದ್ದಿದ್ದ.ಆದರೆ ಏನಿದ್ದರೇನು ತಾನು ಸಾಮಾನ್ಯಲ್ಲವಲ್ಲ.ತ್ತ್ನು ಮೂಂದಾಳು ನಾಳಿನ ಶಾಸಕ ಮುಂದಿನ ಮಂತ್ರಿ ನನ್ನ ಮೂಂದೆ ಇಂಥ ಪ್ರಿನ್ಸಿಪಾಲರು ಯಾವ ಗಿಡದ ತೊಪ್ಪಲು ಅಂತ ತಾತ್ಸಾರದಿಂದಲೆ ಕುರ್ಚಿಯಲ್ಲಿ ಕೂತ.ತನ್ನ ಬೇಡಿಕೆ ಮಂಡಿಸಿದ.ಒಂದು ಪಟ್ಟಿಯನ್ನು ಟೇಬಲ್ ಮೇಲೆ ಕುಕ್ಕಿದ ಈ ಪಟ್ಟಿಯಲ್ಲಿ ಹೆಸರಿದ್ದವರಿಗೆಲ್ಲಾ ಪ್ರವೇಶ ಕೊಡಲೇಬೇಕೆಂದ.