ಎರಡು ದಿನ ಶಿಕ್ಶಣ ಪಡೆದೂ ಆಗಿತ್ತು. ಅದರೆ ಮೂರನೇ ದಿನ ಆತ ಬರುವಾಗ
ಪಾವನಾ ಸೈಕಲನ್ನು ಮೇಲೆ ಕೆಡವಿಕೊಂಡೂ ಬಿದ್ದು ತಲೆ ಒಡೆದುಕೊಂಡಿದ್ದಳು. ಆತನೇ
ಎಂಟು ದಿನ ಅವಳ ಹಾಸಿಗೆಯ ಬದಿಯಿಂದ ಕದಲದೆ ಅವಳ ಶುಶ್ರೂಷೆ ಮಾಡಿದ್ದ.
ನಂತರ ಆಕೆ ಸೈಕಲಿನ ಸನಿಹ ಹೋಗಿರಲಿಲ್ಲ.
-ತನಗೆ ಡ್ರೈವ್ಹಿಂಗ್ ಬರುತ್ತಿದ್ದುದು ಎಲಿಸನ್ಗೆ ಗೊತ್ತಿಲ್ಲ. ಆತ ಈ ದಿನ
ಊಟಕ್ಕೆ ಉಳಿದುಕೊಂಡಿದ್ದರೆ ತೋರಿಸಬಹುದಾಗಿತ್ತು.
ಪಾವನಾ ತಿರುಗಿ ಬಂದಾಗ ಪೂರಾ ಕತ್ತಲಾಗಿತ್ತು. ಕಾರನ್ನು ಶೆಡ್-ನಲ್ಲಿ ಸೇರಿಸಿ
ಆಕೆ ಹೊರಬರುತ್ತಿದ್ದಂತೆ ಗೊಪಿ ಹೇಳಿದ. ಪಿಂಟೋ ಅವರಿಗೆ ಆಕ್ಸಿಡೆಂಟ್ ಆತಂತ
ಅಕ್ಕಾ"
"ಎಲಿಸನ್ ಗ? ಎಲ್ಲಿ ? ಹ್ಯಾಂಗ ಯಾವಾಗ ?" - ಪಾವನಾಳ ದನಿ
ನಡುಗಿತು. ಗೋಪಿಯ ಹಿಂದಿನಿಂದ ಬಂದ ಎಲಿಸನ್ ನಗುತ್ತ ಉತ್ತರಿಸಿದ, "ಇಷ್ಟ್ಯಾಕ
ಘಾಬರಾಗತೀದಿ ಪಾವನಾ?
ಮಾರ್ಕೆಟಿನ್ಯಾಗ ನಾ ಕೂತಿದ್ದ ಟಾಂಗಾದ ಕುದುರಿ ಬಿತ್ತು. ರಸ್ತೇದಾಗಿನ ಕಲ್ಲು ಬಡದು ಕೈಗೆ
ಸ್ವಲ್ಪ ಪೆಟ್ಟಾಗೇದ ಅಷ್ಟs "
'ಓ !'ಪಾವನಾ ಸಮಾಧಾನದ ಉಸಿರು ಬಿಟ್ಟು ನಿಧಾನವಾಗಿ ಮುಗುಳ್ನಕ್ಕಳು.
ತನ್ನ ವ್ಯರ್ಥ ಉದ್ವೇಗಕ್ಕಾಗಿ ಅವಳಿಗೆ ನಾಚಿಕೆಯಾಯಿತು.
"ನಾ ರಾತ್ರೀ ಬಸ್ಸಿನಿಂದ ಕಾರವಾರಕ್ಕೆ ಹೋಗತೀನಿ ಪಾವನಾ, ನಮಸ್ಕಾರ."
"ಆದರ ನಿಮಗೆ ತ್ರಾಸಾಗಿದ್ದರ ನಾಳೆ ಹೋಗಬಹುದಲ್ಲ ?" - ಸರಳವಾಗಿ
ಆಕೆ ಕೇಳಿದಳು.
'ಛೆ, ಇಷ್ಟ ಸಣ್ಣ ಆಕ್ಸಿಡೆಂತಟ್ಸ್ ಗೆಲ್ಲ ಎಂಥಾ ತ್ರಾಸು ? ನಾ ಇನ್ನ ಬರ್ತಿನಿ"
"ನಮಸ್ಕಾರ", ಪಾವನಾ ಹೇಳಿದಳು ಮಾತ್ರ. ಆದರೆ ಕೈ ಜೊಡಿಸುವ ನೆನಪೇ ಇಲ್ಲ
ಅವಳಿಗೆ.
ಎಲಿಸನ್ ಹೊರಟುಹೋದ... ಕತ್ತಲೆಯಲ್ಲಿ ಆತ ಪಾವನಾಗೆ ಕಾಣದಷ್ಟು
ದೂರ ಹೊರಟುಹೋದ...
-ಇಷ್ಟು ಸಣ್ಣ ಆಕ್ಸಿಡೆಂಟ್ಸ್ ಗೇ...' ಎಲಿಸನ್ನ ಈ ಕೊನೆಯ ಮಾತಿನಲ್ಲಿ ಎನಾದರೂ ವಿಶೇಷ ಅರ್ಥ್ ವಿತ್ತೇ ? ನಿಜ ; ಜೀವನದಲ್ಲಿ ಎಂತೆಂತಹವೋ
ಅಪಘಾತಗಳು ಸಂಭವಿಸುತ್ತವೆ. ಆ ಟಾಂಗಾದಲ್ಲಿ ಎಲಿಸನ್ ನೊಡನೆ ಬೇರೆ
ಪ್ಯಾಸೆಂಜರರೂ ಇರಬಹುದು. ಎಲಿಸಂನ್ ನಂತೆ ಅವರಿಗೂ
ಪೆಟ್ಟಾಗಿರಬಹುದು...
ಎಲಿಸನ್ ಎಂದಾದರೂ ಮತ್ತೆ ಅದೇ ಪ್ಯಾಸೆಂಜರರೊಡನೆ ಆ ಟಾಂಗಾದಲ್ಲಿ
ಪುಟ:ನಡೆದದ್ದೇ ದಾರಿ.pdf/೬೫
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೫೮
ನಡೆದದ್ದೇ ದಾರಿ