ಮನಸ್ಸಿನ್ಯಾಗಿದ್ದದ್ದು ನೀ ಹೇಳದನś ತಿಳಕೊಳ್ಲಿಕ್ಕೆ ನಿನ್ಹಾಂಗ ಸೈಕಾಲಜಿ ಓದಿಲ್ಲ
ನಾನು" -ಅಲ್ಲಿ ನಿಲ್ಲಲಾಗದೆ ಪಾವನಾ ಎದ್ದು ರೂಮು ಸೇರಿದಳು.
ಏನಾಯಿತು ತನಗೆ? ಎಲಿಸನ್ ಯಾರು. ತಾನು ಯಾರು? ಜೀವನದಲ್ಲಿ
ಒಮ್ಮೆ ಭೆಟ್ಟಿಯಾದ ವ್ಯಕ್ತಿಗಳೆಲ್ಲ ಕೊನೆವರೆಗೂ ಜೊತೆಗಿರುವುದು ಸಾಧ್ಯವೆ ?
ತನಗಿಂತ ಹತ್ತು ವರ್ಷಕ್ಕೆ ಹಿರಿಯನಾದ ಅಲಿಸ್ ನ ತನಗೆ ಸ್ನೇಹಿತನೂ ಆಗಲಾರ.
ಹಿರಿಯಣ್ಣ ಅನಂತನ ವಯಸ್ಸು ಆತನಿಗೆ. ಆದರೆ ಇಂತಹದೇ ಎಂದು ನಿರ್ದಿಷ್ಟವಾಗಿ
ಹೆಸರಿಸಲಾಗದ ಹೃದಯದಲ್ಲಿನ ಈ ನೋವು ಯಾವುದು ? ಏನು ಕಾರಣ ಇದಕ್ಕೆ ?
ಅಯ್ಯೋ ದೇವರೆ...
ಎಲಿಸನ್ ಅಷ್ಟೇನೂ ಬದಲಗಿಲ್ಲ. ಕಣ್ಣುಗಳಲ್ಲಿನ ಆ ತುಂಟತನ.
ನಡಿಗೆಯಲ್ಲಿನ ಆ ಗತ್ತು, ಹಣೆಯ ಮೇಲಿನ ಆ ಸುರುಳಿ ಕೂದಲು,
ಮುಗುಳ್ನಗುವಿನಲ್ಲಿಯ ಆ ಮಾದಕತೆ- ಎಲ್ಲಾ ಇನ್ನೂ ಹಾಗೇ ಇದೆ, ಆದರೂ
ಆತನೀಗ ಮುದುಕ. ಹೌದು,ಮೂವತ್ತು ದಾಟಿದ ಮೇಲೆ ಮತ್ತೇನು?
ಮುದುಕನಾಗಿರಲಿಕಿಲ್ಲ. ಅದರೆ ಹುಡುಗನಂತೂ ಅಲ್ಲವಲ್ಲ !
ಎಲಿಸನ್ ಇನ್ನು ಜೀವನದಲ್ಲಿ ತನಗೊಂದೂ ಭೆಟ್ಟಿಯಾಗದಿರಬಹುದು. ತನ್ನ
ಮದುವೆಗೆ ಆತನನ್ನು ಆಮಂತ್ರಿಸಬಹುದಾದರೂ ಆಗ ಮಾತನಾಡುವ ಅವಕಾಶ
ದೊರೆಯದು.
ಎಲಿಸನ್ ನ ಸ್ನೇಹ ತನ್ನ ಬಾಲ್ಯದ ಸಿಹಿ ನೆನಪುಗಳಲ್ಲೊಂದಾಗಿ ಕೊನೆಯ
ವರೆಗೂ ತನ್ನ ಹೃದಯದಲ್ಲುಳಿಯುವಂತಹುದು....
ಸಾಯಂಕಾಲವಾಗಿತ್ತು. ಪಾವನಾ ಎದ್ದು ಮುಖ ತೊಳೆದುಕೊಂಡಳು. ಈ
ಮಧ್ಯಾಹ್ನವೆಲ್ಲಾ ಮೂರ್ತಿಯ ನೆನಪೇ ಇಲ್ಲವಲ್ಲ!
ಸುಳ್ಳೋ ನಿಜವೋ ?
-ಎಲಿಸನ್ ನ ನೆನಪಿನ ಹಿಂಬದಿ ಎಲ್ಲೋ ಮೂರ್ತಿಯ ನೆನಪೂ
ಅಡಗಿರುವಂತೆ, ಎರಡೂ ಸೇರಿ ಹೃದಯದಲ್ಲಿ ಒಂದು ಬಗೆಯ ವಿಚಿತ್ರ ನೋವು
ಉಂಟುಮಾಡುತ್ತಿರುವಂತೆ ಭಾಸ.... ಬರಿಯ ಭಾಸ....?
ಛೇ, ಇಲ್ಲ. ಮೂರ್ತಿಗೂ ಎಲಿಸನ್ ಗೂ ಎಲ್ಲಿಂದೆಲ್ಲಿಯ ಸಂಬಂಧ ?
ಮೂರ್ತಿಯನ್ನು ತಾನು ಮನಸಾ ಪ್ರೀತಿಸುತ್ತಾಳೆ. ಅವನ ಜೊತೆ ಕಳೆಯಲಿರುವ ಬಾಳಿನ
ಸವಿಗನಸು ಕಾಣುವದರಲ್ಲಿ ತಾನು ಅಪ್ರಿಯವಾದುದೆಲ್ಲವನ್ನೂ ಮರೆಯಬಲ್ಲಳು.
ಪಾವನಾ ತಾನೇ ಕಾರು ಡ್ರೈವ್ಹ್ ಮಾಡಿಕೊಂಡು ಒಂದು ರೌಂಡ್ ಗೆಂದು
ಹೊರಟಳು. ಬಾಲ್ಯದಲ್ಲಿ ಅವಳಿಗೆ ಸೈಕಲು ಕಲಿಯುವ ಆಸೆಯಿತ್ತು. ಎಲಿಸನ್ ನಿಂದ
ಪುಟ:ನಡೆದದ್ದೇ ದಾರಿ.pdf/೬೪
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳ್ಳುಗಳು/ ಬರಿ ನೆನಪು
೫೭