ಪುಟ:ನಡೆದದ್ದೇ ದಾರಿ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೬

ನಡೆದದ್ದೇ ದಾರಿ

ಆದರೆ....ಆದರೆ ಹನ್ನೆರಡು ವರುಷಗಳ ನಂತರ ಇಂದು ಬೆಳಗು ಎಲಿಸನ್
ಹೀಗೆ ಬರಬಹುದೆಂದು ತನಗೆ ಕನಸಿಲ್ಲಾದರೂ ಇತ್ತೆ?
ಬಾಲ್ಯ ಸ್ನೇಹಿತನ ಭೆಟ್ಟಿಯಿಂದ ಸಂತೋಷವಾಗುವುದರ ಬದಲು ತಾನೇಕೆ
ಹೀಗೆ ಕಳವಳಗೊಳ್ಳುತ್ತಿದ್ದೇನೆ ಎಂದು ಆಕೆಗೆ ಆಶ್ಚರ್ಯವಾಯಿತು.
"ಹೋಗಿ ಮಾತಾಡು ಪಾವನಾ" ಎಂದರು ಸೀತಮ್ಮ.ಪಾವನಾ ಹೋಗಲಿಲ್ಲ.
ಎಲಿಸನ್ ಕೇಳಿದನೇನು 'ಪಾವನಾ ಎಲ್ಲಿ' ಎಂದು? ತಾನೇಕೆ ಹೋಗಬೇಕು? ಚಹಾ
ಕುಡಿದು ಎದ್ದು ನಿಂತ ಎಲಿಸನ್.'ಸಂಜೀನ್ಯಾಗ ತಿರುಗಿ ಹೋಗಬೇಕು ನಾ.ಡಾಕ್ಟರರಿಗೆ
ಹೇಳ್ರಿ ನಾ ಬಂದಿದ್ದೆ ಅಂತ."
"ಒಳ್ಳೇದು, ಹೋಗಿ ಬಾರಪಾ" ಎಂದರು ಸೀತಮ್ಮ.
ಪಾವನಾ ಗಡಬಡಿಸಿ ಎದ್ದು ನಿಂತಳು.ಎಲಿಸನ್ ಹೋಗುತ್ತಾನೆ-ಹೋಗಿಯೇ
ಬಿಡುತ್ತಾನೆ.... ತಾನಿನ್ನೂ ಆತನೆದುರು ಹೋಗಿಲ್ಲ.
-ತನಗರಿವಾಗದಂತೆಯೇ ಅವಳು ವೇಗವಾಗಿ ಹಿತ್ತಲ ಬಾಗಿಲಿಂದ
ಅಂಗಳವನ್ನು ದಾಟಿ ಎದುರಿನ ಬಾಗಿಲಿಗೆ ಬಂದಳು.ಎಲಿಸನ್ ಗೋಪಿಯೊಡನೆ ಗೇಟು
ತೆರೆಯುತ್ತಿದ್ದಾತ,ತಿರುಗಿ ನೋಡಿದ.ಆತನ ದೃಷ್ಟಿನ್ನೆದುರಿಸಿ ಪಾವನಾ ಮುಗುಳ್ನಗುವ
ಸಾಹಸ ಮಾಡಿದಳು.
"ಏನು ಪಾವನಾ,ಎಲ್ಲಾ ಆರಾಮ ಹೌದಲ್ಲೊ?" ಮುಗುಳ್ನಕ್ಕು ಆತ ಕೇಳಿದ.
"ಹ್ಞೂ"ಎಂದು ಮುಂದೇನು ಮಾತಾಡಬೇಕೋ ತೋಚದೆ ಆಕೆ ಕೇಳಿದಳು,
"ನೀವು ಪೂನಾದಾಗ ಇದ್ದಿರೆಲ್ಲs?"
"ಹೌದು,ಆದರ ನಾ ಕಾರವಾರಕ್ಕ ಬಂದು ಭಾಳ ದಿವಸಾತು.ನೀ ಬಾರಲಾ
ಒಮ್ಮೆ ಕಾರವಾರಕ್ಕ."
"ಹ್ಞೂ".
"ಒಳ್ಳೇದು ಹಂಗಾರ,ನಾ ಇನ್ನ ಬರ್‍ತೀನಿ-"
"ಹ್ಞೂ".
ಎಲಿಸನ್ ಕಣ್ಮರೆಯಾದಾಗ ಪಾವನಾ ತನ್ನನ್ನೇ ತಾನು
ಬೈದುಕೊಳ್ಳುವಂತಾಯಿತು,ತನ್ನ ಅಸಂಬದ್ಧ 'ಹ್ಞೂ'ಗಳಿಗಾಗಿ.ಕೂಟಿನ ವರೆಗೆ
ಎಲಿಸನ್ ನನ್ನು ಕಳಿಸಿ ಬಂದ ಗೋಪಿಯ ಮೇಲೆ ಆಕಾರಣವಾಗಿ ಆಕೆ ಸಿಟ್ಟಾದಳು.
'ಹುಚ್ಚ ನೀನು.ನಿನಗ ಎಂದ ಮ್ಯಾನರ್ಸ್ ಗೊತ್ತಾಗತಾವೋ ದೇವರs ಬಲ್ಲ.ಊಟಕ್ಕ
ಇಲ್ಲೇ ಬರ್ರಿ ಅಂತ ಯಾಕ ಹೇಳಲಿಲ್ಲ ಅವರಿಗೆ?"
ಕಣ್ಣರಳಿಸಿ ಗೋಪಿ ಕೇಳಿದ, "ಹಾಗಂತ ನೀ ಹೇಳಿದ್ದೇನು? ನಿನ್ನ