ಪುಟ:ನನ್ನ ಸಂಸಾರ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ಕಾದಂಬರಿ ಸಂಗ್ರಹ ಗದಿರಲೆಂದು ಒಂದು ಬಟ್ಟಲು ಮದ್ಯವನ್ನು ಕೈನಡುಗುವಹಾಗೆ ತೋರ್ಪಡಿಸಿ ಎತ್ತಿ ಹಾಕಿದನು. ಸುರಾದೇವತೆಯು ಅಲ್ಲಿದ್ದ ಮನುಷ್ಯನನ್ನು ಸ್ವಲ್ಪ ಸ್ವಲ್ಪವಾಗಿ ಆಕ್ರಮಣ ಮಾಡಲಾರಂಭಿಸಿದಳು. ಸ್ವಲ್ಪ ಕಾಲದಲ್ಲೇ ಅವನ ಜ್ಞಾನವು ಅವನ ತಲೆಯನ್ನು ಬಿಟ್ಟೋಡಿತು.

ಭಾಸ್ಕರನು ಆ ಮನುಷ್ಯನು ತನ್ನ ಬಲೆಗೆ ಶಿಕ್ಕಿಬಿದ್ದನೆಂದು ಮನಸ್ಸಿನಲ್ಲೇ ಸಂತೋಶಪಟ್ಟುಕ್ಕೊಂಡು ಇನ್ನೂ ಉಳಿದಿದ್ದ ಒಂದು ಶೀಸೆ ಬ್ರಾಂದಿಯನ್ನು ಬಟ್ಟ ಲಲ್ಲಿ ಸುರಿದು ಕೊಡುತ್ತಾ ಬಂದನು. ಆ ಮನುಷ್ಯನು "ಆಹಾ!ಭಲೇ!ಶಾಬಾಸ್ ಕೊಡು ಕೊಡು!ಎಲ್ಲಿ. ಮದ್ಯ!ಆಹಾ!ಅಮೃತದಂತಿರುವ ಮದ್ಯವೇ !ನಿನ್ನ ಸಮಾನ ರಾರು?ಭಲೆ!ಭಲೆ!ಈಗ ನಾನೆ ರೆವತಿ ಎಲೇ ಎಲ್ಲಿದ್ದೀ ನೋಡಿದಿಯಾ ದೂರ ಓಡಿಹೋಗುತ್ತೀ ಹತ್ತಿರ ಬಾ ಬಾ ಎಂದು (ಕುಣಿಯಲಾರಂಭಿಸಿದನು) ಎಲೋ ಯಾರೋಅಲ್ಲಿ ? ಸಂ ಗೀ ತ ಹಾಡೋ ಎಲ್ಲಿ ಸಾ ಗಾ ಮಾ ತೈಪೈ ಭಲಾ ಶಾಬಾಸ್ ಚೆನ್ನಾಗಿದೆ ನಿನಗೆ ನಮ್ಮ ಸಂಘದ ಯಜಮಾನನಿಂದ ಬಹುಮಾನ-ಊ-ರೂಪಾಯಿ ಕೊಡಿಸುತ್ತೇನೆ ಬಾ ಇದೇ ಬೀದಿಯಲ್ಲಿ ನಮ್ಮ ಮನೆಯಿದೆ ಎಂದು ವದುದನು.

  ಭಾಸ್ಕರು ಇದೇಸಮಯವೆಂದು ಯೋಚಿಸಿದನು, ಆದರೂ ಸಮಾಜದಲ್ಲೇ ಯಾರಾದರೂ ಆ ಮನುಷ್ಯನಿಗೆ ತಿಳಿದ ಮನುಷ್ಯರಿರಬಹುದೆಂಬ ಹೆದರಿಕೆಯಿಂದ ಸರಿ ಯಾಗಿ ಮಾತನಾಡದೆ ಮತ್ತೇರಿದವನಂತೆಯೇ ಮಾತನಾಡುತ್ತಾ ಬಂದನು.
  ಭಾಸ್ಕರ:-ಅಣ್ಣಾ ಶಾಬಾಸ್! ಮದ್ಯವು ಬಹಳ ಪಸಂದಾಗಿದೆ. ನೀನು ಹಾಡು. ನಾನು ಕುಣಿಯುತ್ತೇನೆ (ಕುಣಿಯುತ್ತಾನೆ) ನಾನು ನೀಲಕಂಠಬಾಬುವಲ್ಲವಾ ? ನಾನಿರು ವದು ಬ್ಲಾಕ್‌ಬೀದಿ ಅಹಹ ! ನೀನ್ಯಾರಣ್ಣಾ ! ಮಂಗನಂತೆ ಇಲ್ಲಿ ಬಂದಿದ್ದೀ ನೀನೆಲ್ಲಿರು ವುದು ಹೇಳಣ್ಣಾ.
  ಮನುಷ್ಯ;-ಸೈ ಸೈ ನೀನು ಬಾಬುವಾ-ಹಾಗಾದರೆ ನಾನು ಹರಿಚಂದ್ರ-ನಾನಿ ರುವುದು ಅದೆಲ್ಲಪ್ಪಾ ಹಾಳುಹೆಸರು ೩ ಸ್ಪ್ರಿ೦ಗ್ಬೀದಿ-ಮರೆತುಹೋಯಿತು. ಹೋಗಲಿ ನನಗೇನಪ್ಪಾ ಕಡಮೇ ನನ್ನ ಸಹೋದರರಿದ್ದಾರೆ. ಬೇಕಾದ್ದು ಕೊಡುತ್ತಾರೆ. ಹೊಸಬಜಮಾನ್ದಾರ-ಯಜಮಾನರ-ಮಗಳನ್ನು ಅದೇನೋ ಅಲ್ಲಿ ಮದುವೆಯಾಗುತ್ತಾನೆ ನಮಗೆಲ್ಲಾ ಬೇಕಾದಷ್ಟು-ತ್ತೂತ್ತೂ-ಕಣ್ಣೂಳಗೆ ದೆವ್ವ ಮಾರಿ ಸೇರಿಕೊಂಡಿದ್ದಾಳೆ. ಅದೆಲೋ ನನ್ನ ಕರವಸ್ತ್ರ. ನಮ್ಮ ಪಂಗಡದವರ ಗುರುತು ಕಾಣಣ್ಣಾ (ಎಂದು ಹೇಳುತ್ತಾ, ತನ್ನ ಒಳಜೋಬಿನಿಂದ ಒಂದು ಕರವಸ್ತ್ರವನ್ನು ತೆಗೆದನು. ಭಾಸ್ಕರನು