ಪುಟ:ನನ್ನ ಸಂಸಾರ.djvu/೧೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


28 ಕಾದಂಬ೨ ಸಂಗ್ರಹ

                ಏಳನೇ ಅಧ್ಯಾಯ
                 _______
                 (ಹರಿಚಂದ್ರ.) 
    ಮಾರನೇದಿನ ಪ್ರಾತಃಕಾಲದಲ್ಲೀ ಭಾಸ್ಕರನೆದ್ದು ಕಾಳೀಬೀದಿಗೆ ಹೋಗಿ ಅಲ್ಲಿ ಹರಿಚಂದ್ರನು ಹೇಳಿದ ಮನೆ ಯಾವುದೆಂದು ಹುಡುಕಿದನು. ಯಾವುದೂ ಅವನಿಗೆ ಸರಿ ಬೀಳಲಿಲ್ಲ. ಒಂದು ಸಂದಿಯಲ್ಲಿ ನುಗ್ಗಿ ಬುರುತ್ತಿರುವಾಗಲೊಂದು ಮನೆಯ ಗೋಡೆಯ ಮೇಲೆ " ಈ ದಿವಸ ಮದ್ಯವಿಸರ್ಜನೆವಿಷಯದಲ್ಲಿ ರಾತ್ರಿ ಉಪನ್ಯಾಸ ಟಿಕೀಟುಗಳನ್ನು ಕೋರತಕ್ಕಂತಾ ಮೆಂಬರುಗಳು ಒಳಕ್ಕೆ ಬಿಡಲ್ಪಡುವರು” ಎಂದು ಬರೆದಿರುವುದನ್ನೋದಿನೋಡಿ ಒಂದುವೇಳೆ ಈ ಮನೆಯೇ ಆಗಿರಬಹುದೋ ಎಂದು ಯೋಚಿಸಿ ಏನೇಆಗಲಿ ಈ ರಾತ್ರೀ ಇಲ್ಲಿಗೇ ಬಂದು ಪರೀಕ್ಷೆ ಮಾಡೋಣವೆಂದು ಹೇಳಿಕೊಂಡು ಗೋವಿಂದನ ಮನೆಗೆ ಹಿಂದಿರುಗಿ ಬಂದನು.
     
    ಅಲ್ಲಿಗೆ ಬಂದಕೂಡಲೇ ಗೋವಿಂದನು ಒಂದು ಕಾಗದವನ್ನು ತಂದುಕೊ ಟ್ಟನು. ಅದು ವಸಂತಪುರದಿಂದ ಬಂದಿದ್ದಿತು. ಒಡೆದು ನೋಡಲು ಸೋಮಸುಂದರನು ಬರೆದದ್ದಾಗಿತ್ತು. ಅದರಲ್ಲಿದ್ದದ್ದೇನಂದರೆ.
    "ಅಯ್ಯಾ, ಇದರ ಸಂಗಡಲೇ ಮತ್ತೊಂದು ಕಾಗದವನ್ನೂ ಕಳುಹಿಸಿರುವೆನು. ನನಗೇನೂ ತೋಚುವುದಿಲ್ಲವು. ನೀವೇ ನನ್ನನ್ನು ಕಾಪಾಡಬೇಕು. ನಾನು ಏನು ಬದಲು ಬರೆಯಲಿ ? ನನ್ನ ಮಗನ ವಿಷಯವೇನಾದರೂ ತಿಳಿಯಬಂದಿದೆಯೋ ? ಯಾವದಕ್ಕೂ ಕೂಡಲೇ ಜವಾಬುಬರೆಯಿರಿ.
                              ಇತಿ ಸೋಮಸುಂದರ.

    ಭಾಸ್ಕರನು, ಮತ್ತೊಂದು ಕಾಗದವನ್ನು ತೆಗೆದುಕೊಂಡು ಓದಲಾರಂಭಿಸಿದನು
    ಸೋಮಸುಂದರರಾಯರಿಗೆ:- 

ಅಯ್ಯಾ !

    ನಾವುಗಳು ಈ ಕಾಗದದಮೂಲಕ ನಿಮಗೆ ತಿಳಿಯಪಡಿಸುವುದೇನಂದರೆ, ನಿಮ್ಮ ಪುತ್ರನು ಜೀವಂತನಾಗಿರುವನು. ಇನ್ನೇನು ಸ್ವಲ್ಪ ದಿವಸದಲ್ಲೇ ಅವನು ಒಬ್ಬ ಋತುಮತಿಯಾದ ಕನೈಯನ್ನು ವಿವಾಹ ಮಾಡಿಕೊಳ್ಳಲು ಕಾದಿರುತ್ತಾನೆ. ನಾವುಗಳು ಶಾಸ್ತ್ರಕಾರರನ್ನು ವಿಚಾರಿಸಿನೋಡುವಲ್ಲಿ ಅರ್ಧದಲ್ಲಿ ನಿಂತುಹೋದ ಮದುವೆಯು, ಮದುವೆಯು ನಡೆಯದಹಾಗೇ ಆಯಿತೆಂದು ತಿಳಿದುಬರುತ್ತದೆ. ಆದ್ದರಿಂದ ನಿಮ್ಮ