ಪುಟ:ನನ್ನ ಸಂಸಾರ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

34 ಕಾದಂಬರೀ ಸಂಗ್ರಹ


ಯವು ಸಿಕ್ಕುತ್ತದೆ. ಇದೆಲ್ಲಾ ಇರಲಿ. ಸರ್ಕಾರದವರಿಂದಲೂ ಪೊಲೀಸಿನವರಿಂದಲೂ ನಮಗೇನು ಅಪಾಯಬರಬಲ್ಲದು? ನಾವು ಪ್ರಯತ್ನ ಮಾಡಿದರೆ ಸರ್ಕಾರದವರನ್ನು ತಲೆಕೆಳಗು ಮಾಡಬಹುದು. ಪೊಲೀಸಿನವರನ್ನೆಲ್ಲಾ ಕೊಲ್ಲ ಬಹುದು (ಆಗ ಅಲ್ಲಿದ್ದ ವರು ಹರಿಚಂದ್ರಾ ! ಇದೇನು ವಿಪರೀತ? ಕುಡಿದಿದ್ದೀಯೋ? ಎಂದು ಕೂಗಿದರು). ಆಗ ಹರಿಚಂದ್ರನು (ಭಾಸ್ಕರ) ಇಲ್ಲ. ಇಲ್ಲ. ನಾನು ಕುಡಿದಿಲ್ಲ. ನಾವೇನು ಕೈಲಾಗ ದವರೋ ? ನಾನೇನೋ ಕಲ್ಕತ್ತಾವನ್ನೇ ಬಿಟ್ಟು ಮತ್ತೆಲ್ಲಾದರೂ ಹೋಗಿ ನಮಗೆ ಮಧುಸೂದನನು ಕೊಡುವ ಹಣದಿಂದ ಜೀವನ ಮಾಡಬೇಕೆಂದಿರುತ್ತೇನೆ. (ಅಗ್ರಾಸ ನಾಧಿಪತಿಯು ಬಾಯಿನಮೇಲೆ ಬೆರಳಿಟ್ಟು ಹುಷಾರ್‌ ಎಂದು ಸನ್ನೆ ಮಾಡಿದನು.) ಎಲ್ಲರೂ ಭಾಸ್ಕರನ ಉಪನ್ಯಾಸವು ಮುಗಿದ ಕೂಡಲೇ ಕೈತಟ್ಟಿ " ಬೇಪ್ " ಇಂದು ಹರಿಚಂದ್ರನು ಕಷ್ಟ ಪಟ್ಟಿದ್ದಾನೆಂದು ಅವನ ಬೆನ್ನನ್ನು ಕೆಲವರು ತಟ್ಟಿದರು. ಮತ್ತೆ ಕೆಲವರು (ಹರಿಚಂದ್ರಾ ! ಬೀದಿಯಲ್ಲೆಲ್ಲಾದರೂ ಈ ರೀತಿ ಮಾತನಾಡಿಯೇ) ಕಾರಾಗೃಹವಾಸವು ಬರುವುಮ ! ಎಂದು ಹೇಳಿದರು. ಆಗ ಅಗ್ರಾಸನಾಧಿಪತಿಯು ಎದ್ದು ನಿಂತು ಮದುವೆಯು ಎಂಟುದಿವಸದಲ್ಲಿ ನಡೆಯುವುದು. ಹೆದರಿಕೆಯುಳ್ಳವರೆಲ್ಲಾ ನಾಳೇದಿವಸದಿಂದ ಗುಪ್ತಗೃಹದಲ್ಲಿ ವಾಸಮಾಡಿರಿ ! ಎಂದು ಹೇಳಿ ಸಭೆಯನ್ನು ಮುಗಿ ಸಿದನು. ಎಲ್ಲರೂ ಹರಿಚಂದ್ರನನ್ನು ಹೊಗಳುತ್ತಾ ಬೀದಿಗೆ ಬಂದರು. ಅಲ್ಲಿ ಎಲ್ಲರ ಕತ್ತಿಗೂ ಹೂವಿನ ಮಾಲೆಗಳು ಹಾಕಲ್ಪಟ್ಟವು. ಭಾಸ್ಕರನೂ ಹೊರಕ್ಕೆ ಬಂದು ವೇಗ ವಾಗಿ ನಡೆದು ಗೋವಿಂದನ ಮನೆಯನ್ನು ಸೇರಿದನು. ಇವನನ್ನೇ ಎದುರುನೋಡು ತ್ತಿದ್ದ ಗೋವಿಂದನು ಇವನನ್ನು ಕರೆದುಕೊಂಡು ಹರಿಚಂದ್ರನು ಮಲಗಿದ್ದ ಕೊಠಡಿಗೆ ಹೋದನು. ಅಲ್ಲಿ ಭಾಸ್ಕರನು ಅವನ ಉಡುಪನ್ನು ಅವನಿಗೇನೆ ಹಾಕಿ ಕತ್ತಿಗೆ ಹೂವಿನ ಮಾಲೆಯನ್ನೂ ಹಾಕಿ ಅವನನ್ನೆತ್ತಿಕೊಂಡು ಬಂದು ಗಾಡಿಯಲ್ಲಿ ಹಾಕಿಕೊಂಡು ಕಾಳೇಬೀದಿಯ ಎಂಕೂಟದವರ ಮನೆಯ ಬಳಿ ಒಂದು ಮೂಲೆಯಲ್ಲಿ ಹಾಕಿಬಿಟ್ಟು ಪುನಃ ಗೋವಿಂದನ ಮನೆಯನ್ನು ತಲಪಿ ಮಲಗಿ ನಿದ್ರೆಹೋದನು. ಎಂಟನೆಯ ಅಧ್ಯಾಯ. (ಪೊಲೀಸ್‌ ಅಧಿಕಾರಿಯ ಕೊಲೆ) ಮಾರನೇದಿವಸ ಬೆಳಗ್ಗೆ ಹರಿಚಂದ್ರನು ಕಣ್ಣು ತೆರದು ನೋಡಲು ತಾನು ಯಾವದೋ ಒಂದು ಮೂಲೆಯಲ್ಲಿ ಮಲಗಿರುವ ಹಾಗೆ ಕಾಣಬಂದಿತು. ಅಲ್ಲಿಗೆ