ಮಧುಸೂದನ ಈ ಮಧುಸೂದನನನ್ನು ನೋಡಿ ತಂದೆಗಳಾದವರು ತಮ್ಮ ಪುತ್ರರವಿಷಯದಲ್ಲಿ ಎಚ್ಚ ರವಾಗಿರಲಿ! ಪುತ್ರರು ಕೆಟ್ಟ ಸಂಘಗಳಿಗೆ ಸೇರಿ ಜಾತಿ ಭೇದವಿಲ್ಲವೆಂದು ಹೇಳಿಕೊಂಡು ಕುಡಿತ ಮುಂತಾದುವುಗಳನ್ನು ಕಲಿತು ಹಾಳಾಗುವರೆಂದು ತಿಳಿದು, ಅವರು ಅಂಥಾ ಸಂಘಗಳಿಗೆ ಸೇರದಹಾಗೆ ಇರುವುದಕ್ಕೆ ಪ್ರಯತ್ನಪಡಲಿ !!
ವಿಶ್ವನಾಥ:-ಮಧುಸೂದನಾ! ನಾಳೆದಿವಸ ನೀನು ನನ್ನ ಅಳಿಯನಾಗುವಿ.
ಆಮೇಲೆ ನೀನು ನಿಮ್ಮ ಮನೆಗೆ ಹೋಗಬಹುದು. ನಾನೂ ಸಹಾ ನನ್ನ ಸಂಘವನ್ನೊಡೆದು ಬೇರೆಸ್ಥಳಕ್ಕೆ ಹೋಗುವೆನು.
ಮಧುಸೂದನ (ಮದ್ಯದ ವೇಗದಿಂದ ಉನ್ಮತ್ತನಾಗಿ) ಅದಕ್ಕೇನು! ನಾನು
ನಿಮ್ಮ ಪುತ್ರಿಯನ್ನು ವಿವಾಹ ಮಾಡಿಕೊಳ್ಳುವೆನು. ನನ್ನ ಸಂಗಡಲೇ ನಿಮ್ಮ ಪುತ್ರಿಯನ್ನೂ ಕರೆದುಕೊಂಡು ವಾಸವಪುರಕ್ಕೆ ಹೋಗುವೆನು. ನನ್ನ ತಂದೆಯು ನನ್ನನ್ನು ಬಹಿಷ್ಕರಿಸಿದರೆ ನನ್ನ ಭಾಗವನ್ನು ತೆಗೆದುಕೊಂಡು ಸುಖವಾಗಿರುವನು.(ಸ್ವಲ್ಪ ಶಾಂತ ನಾಗಿ) ಅಯ್ಯೋ ನನ್ನ ಗತಿಯು ಹೀಗೆ ಆಗಬೇಕೇ? ನನ್ನ ತಂದೆ ಯೇನು ಹೇಳು ವನೋ ? ಈ ವಿವಾಹಕ್ಕೆ ಅವನೆಂದಿಗೂ ಒಪ್ಪನು.
ವಿಶ್ವನಾಥನು ಅವನಿಗೆ ಮತ್ತಿಷ್ಟು ಮದ್ಯವನ್ನು ಕೊಟ್ಟು ನಿಮ್ಮ ತಂದೆಯು
ಒಪ್ಪದೇ ಏನುಮಾಡುವನು ? ವಿವಾಹವು ಶಾಸ್ತ್ರಾಚಾರರೀತಿಯಿಂದಲೇ ನಡೆದಮೇಲೆ ನಿಮ್ಮ ತಂದೆ ಯೇನುಮಾಡುವನು ? ಇನ್ನು ಹೊತ್ತಾಯಿತು. ನಾನು ಹೋಗಿಬರುವೆನು. ನಾನು ಹೇಳಿದ ವಿಷಯಗಳು ಜ್ಞಾಪಕದಲ್ಲಿರಲಿ. ವಾಸವಪುರವನ್ನು ಸೇರಿದಮೇಲೆ ಒಂದು ಲಕ್ಷ ರೂಪಾಯನ್ನು ಕಳುಹಲು ಮರೆತುಬಿಡಬೇಡ” ಎಂದು ಹೇಳಿ ಹೊರಟು ಹೋದನು.
ಈದಿವಸ ಕಾಳಿಬೀದಿಯಲ್ಲಿರುವ "ಎಂ" ಸಂಘದವರ ಮನೆಯಲ್ಲಿ ಅತ್ಯಂತ
ಕೋಲಾಹಲ, ಮನೆಯೆಲ್ಲವೂ ಕದಳಿ ಸ್ತಂಭಗಳಿಂದಲೂ ಮಾವಿನ ತೋರಣಗಳಿಂದಲೂ ಅಲಂಕರಿಸಲ್ಪಟ್ಟಿರುವುದು. ಒಂದು ಕಡೆಯಲ್ಲಿ ವಾದ್ಯಗಳು ತಮ್ಮ ನಾದವನ್ನು ಎಲ್ಲ ಕಡೆಗೂ ಕಳುಹಿಸುತ್ತಿದ್ದವು. ಬೀದಿಯಲ್ಲಿ ಜನಗಳೆಲ್ಲರೂ ವಿಶ್ವನಾಥನ ಮಗಳಾದ ಸುಂದರಿಯೆಂಬ ಋತುಮತಿಯಾದ ಕನ್ನೆಯನ್ನು ಸೋಮೇಂದ್ರನೆಂಬುವನಿಗೆ ಕೊಱ್ಱುವಿವಾಹವೆಂದು ಹೇಳಿಕೊಳ್ಳುತ್ತಿದ್ದರು. ಕರೆಯಲ್ಪಟ್ಟಿದ್ದ ಜನಗಳು ಮಾತ್ರ ಬಿಡಲ್ಪಡುವರೆಂದೂ ಹೇಳಿಕೊಳ್ಳುತ್ತಿದ್ದರು. ಸುಮಾರು ಇಪ್ಪತ್ತೈದುಮ.ದಿ ವೈದಿಕಬ್ರಾಹ್ಮಣರುಗಳು ವಿಭೂತೀ ರುದ್ರಾಕ್ಷೀ ಮುಂತಾದವುಗಳನ್ನು ಧರಿಸಿಕೊಂಡು ಬೀದೀಬಾಗಲಿನಲ್ಲಿ