ಪುಟ:ನನ್ನ ಸಂಸಾರ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

45 ಮಧುಸೂದನ ಯೆರೆಯುವದೂ ಮಾಂಗಲ್ಯಸೂತ್ರಧಾರಣೆಯೂ ಉಳಿದಿದ್ದವು. ಪುರೋಹಿತರುಗಳು ವೇದಮಂತ್ರವನ್ನು ಘಟ್ಟಿಯಾಗಿ ಹೇಳುತ್ತಿದರು, ಮಧುಸೂದನನ ಕೈಗೆ ಮಾಂಗಲ್ಯ ಸೂತ್ರವು ಕೊಡಲ್ಪಟ್ಟಿತು. ಅವನು ಅದನ್ನು ಸುಂದರಿಯ ಕತ್ತಿಗೆ ಕಟ್ಟುವುದಕ್ಕೆ ಹೋದನು. ಇದೇನು ಕೂಗಾಟ ? ತೆರದಿದ್ದ ಬಾಗಲಿನ ಮೂಲಕ ಏಕಕಾಲದಲ್ಲಿ ಆಯುಧ ಪಾಣಿಗಳಾದ ಐವತ್ತು ಜನ ಪೋಲೀಸಿನವರೂ ಅವರ ಮುಂದುಗಡೆ ಭಾಸ್ಕರನೂ ಮತ್ತು ಪೋಲೀಸ್ ಕಮಿಷನರೂ ಎರಡೆರಡ ರಿವಾಲ್ವರುಗಳನ್ನು ಹಿಡಿದುಕೊಂಡು ನುಗ್ಗಿ ಬಂದರು ! ಭಾಸ್ಕರನು, ಮಧುಸೂದನ ! ನಿಧಾನಿಸು. ಮಾಂಗಲ್ಯವನ್ನು ಕಟ್ಟಬೇಡ ವೆಂದು ಕೂಗಿದನು. ಅಲ್ಲಿ ನೆರದಿದ್ದವರೆಲ್ಲಾ ಎದ್ದುನಿಂತು ವಿಶ್ವನಾಥನ ಮುಖವನ್ನು ನೋಡಿದರು. ಇಂಥಾ ಸಮಯದಲ್ಲಿಯೂ ಕೂಡಾ ಅವನು ನಗುತ್ತಾ ನೀವು ನನ್ನ ಮನೆಯೊಳಕ್ಕೆ ನುಗ್ಗಲು ಕಾರಣವೇನು ? ಎಂದು ಕೇಳಿದನು. ಭಾಸ್ಕರನು ಇದೋ ಇದೇ ಕಾರಣ ಎಂದು ಹೇಳಿ ಸೋಮೇಂದ್ರನ ಬಳಿಗೆ ನುಗ್ಗಿ ಅವನ ದಾಡಿಯನ್ನೂ ಮಿಶೆಯನ್ನೂ ಹಿಡಿದೆಳೆಯಲು ಅವೆರಡೂ ಬಂದುಬಿಟ್ಟವು. ಕೂಡಲೇ ಭಾಸ್ಕರನು ವಿಶ್ವನಾಥ ! ನಿನ್ನನ್ನು, ಮಧುಸೂದನನನ್ನು ಕದ್ದದ್ದಕ್ಕೂ ಸುರತಪುರದ ಜಹಗೀರ್‌ದಾ ರನ ಮನೆಯಲ್ಲಿ ಡಕಾಯತಿ ಮತ್ತು ಕೊಲೆಯ ನಡಿಸಿದ್ದಕ್ಕಾಗಿಯೂ, ಮೋಸೆಸ್ಸನನ್ನು ಕೊಂದದ್ದಕ್ಕಾಗಿಯೂ ಸೆರೆಹಿಡಿಯುವೆನು ಎಂದು ಹೇಳಿದ ಕೂಡಲೆ ಸುಂದರಿಯು, ಅಯ್ಯೋ' ಎಂದು ಕೂಗಿ ಕೆಳಕ್ಕೆ ಬಿದ್ದಳು. ಕೂಡಲೇ ವಿಶ್ವನಾಥನು ತನ್ನ ರಿವಾಲ್ವ ರುಗಳನ್ನು ಎಳೆದುಕೊಂಡು” ನಾವು ನಿಮ್ಮ ಕೈಗೆ ಸುಲಭವಾಗಿ ಶಿಗತಕ್ಕವರಲ್ಲವೆಂದು ಘರ್ಜಿಸಿ ಭಾಸ್ಕರನ ಮೇಲೆ ಹೊಡೆದನು. ಕೂಡಲೇ 'ಎ೦' ಸಂಘದ ಮೆಂಬರುಗಳೆಲ್ಲರೂ ತಮ್ಮ ತಮ್ಮ ರಿವಾಲ್ವರುಗಳನ್ನು ಎಳೆದು ಗುಂಡುಗಳನ್ನು ಹೊಡೆಯಲು ಪ್ರಾರಂಭಿಸಿದರು. ಪೋಲೀಸಿನವರಲ್ಲಿಯೂ ಅನೇಕರು ಗತಾಸುಗಳಾಗಿ ಉರುಳಿದರು. ಆದರೆ "ಎಂ” ಸಂಘದ ಮೆಂಬರುಗಳಲ್ಲಿ ಆಗಲೇ ಹದಿನೆಂಟು ಜನಗಳು, ಕೆಲವರು ಪ್ರಾಣ ಬಿಟ್ಟೂ ಮತ್ತೆ ಕೆಲವರು ಪ್ರಾಣಾಪಾಯವಾದ ಘಾಯಗಳನ್ನು ಹೊಂದಿಯೂ ನೆಲದ ಮೇಲೆ ಉರುಳಿದ್ದರು. ಉಳಿದ ಏಳು ಜನಗಳನ್ನು ಸೆರೆಹಿಡಿದುಕೊಂಡರು. ಇಷ್ಟು ಹೊತ್ತಿನವರಿಗೂ ಘೋರವಾಗಿ ಜಗಳವಾಡುತ್ತಿದ್ದ ವಿಶ್ವನಾಥನು ಇನ್ನು ಪ್ರಯೋಜನ ವಿಲ್ಲ ವೆಂದು ಯೋಚಿಸಿ ಭಾಸ್ಕರನಮೇಲೂ ಬಂದೂಕ ಹೊಡೆಯಲು ಅದು ತಪ್ಪಿಹೋಗಿ ಇಬ್ಬರು ಪೋಲೀಸಿನವರನ್ನು ಧಾಯಪಡಿ: ದವು. ಇನ್ನು ಎರಡೇ ಗೋಲಿಗಳು ಉಳಿದಿ ರುವುದನ್ನು ನೋಡಿ ಅಯ್ಯೋ ! ಪುತ್ರಿ, ನನ್ನನ್ನು ಕ್ಷಮಿಸು. ನಿನ್ನನೊಬ್ಬಳನ್ನೇ ಬಿಟ್ಟು