ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ. ಜಯ : ಶಂಕರ ಭಗರ್ವ !! ಶಂಕರಕ ಥಾಸಾರ. ಪ್ರಥಮವಲ್ಲರೀ ಪರಿಚಿನ್ತ್ಯ, ಪರಾತ್ಮಾನಂ ಅದ್ವಿತೀಯಂ ಮುಹುರ್ಮುಹು: | ಶಾಂಕರೇ ವಿಜಯೇ ಸಾರಃ ಸಂಗ್ರಹೇಣ ನಿರೂಪ್ಯತೆ || ೧ || ಅದ್ವೈತವಿದ್ಯಾಬ್ಧಿ ವಿಲೋಡನೇನ | ವಿದ್ಯೋತಮಾನಂ ಮಕರಂದಮೀಡ್ಯಮ್ || ಪ್ರದಾಯ ಯೋರ್ಸ್ಮಾ ಕೃಪಯಾ ರರಕ್ಷ | ಸ ದೇಶಿಕಃ ಶಂಕರ ಏವ ಚಿನ್ತ್ಯಃ|| ೨ ||

ಧರ್ಮಾರ್ಥಕಾಮಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಮೋಕ್ಷವೇ ಉತ್ತಮವಾದದ್ದೆಂದು ಸಕಲರಿಗೂ ತಿಳಿದೇಇದೆ. ಆ ಮೋಕ್ಷವು "ಸರ್ವಂ ಖಲ್ವಿದಂ ಬ್ರಹ್ಮ" "ಅಹಂ ಬ್ರಹ್ಮಾಸ್ಮಿ" ಎಂಬ ಅದ್ವೈತ ಜ್ಞಾನದಿಂದ ಬರುವುದೇ ಹೊರ್ತು ಬೇರೆ ಅಲ್ಲ. "ಜ್ಞಾನಾತ್ ಕೈವಲ್ಯಮಶ್ನುತೆ? ಎಂಬಂತೆ ಬ್ರಹ್ಮಜ್ಞಾನ ಸಂಪಾದನೆಯು ಅತ್ಯಾವಶ್ಯಕವು, ಆ ಬ್ರಹ್ಮ ಜ್ಞಾನವು ಅದ್ವೈತ ಜ್ಞಾನವಲ್ಲದೇ ಬೇರೇ ಅಲ್ಲ.ಅದ್ವೈತಜ್ಞಾನವು ಕೇವಲ ಮುಕ್ತಿಹೇತುವೆಂದು ಅನೇಕ ಶ್ರುತಿ, ಸ್ಮೃತಿಗಳು ಬೋಧಿಸುತ್ತವೆ. ಅಂತಹ ಅದ್ವೈತವಿದ್ಯೆಯು ದುರ್ಮತಸಂಜಾತರಾದ ಬೌದ್ಧರೇ ಮೊದಲಾದವರ ಪ್ರಾಬಲ್ಯದಿಂದ ಕ್ಷೀಣತೆಯನ್ನು ಹೊಂದುತ್ತಿತ್ತು. ಆಗ ದೇವತೆಗಳು ಬ್ರಹ್ಮನಲ್ಲಿಗೆ ಹೋಗಿ, ಭೂಲೋಕದ ಅನಾಚಾರಗಳನ್ನೆಲ್ಲಾ ತಿಳಿಸಿದರು. ಬ್ರಹ್ಮನೂ ಅವರ ಸಂಗಡಲೇ ಲೋಕಶಂಕರನಾದ ಶಂಕರನ ಸಮಿಾಪವನ್ನು ಕುರಿತು ತೆರಳಿದನು.