ಪುಟ:ನನ್ನ ಸಂಸಾರ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ ರ್ಣರಾಗಿ ಪುತ್ರಕಾಮೇಷ್ಟಿಯಂಮಾಡಿ, ಅನೇಕ ಭೂರಿದಕ್ಷಿಣೆಗಳಂ ಬ್ರಾಹ್ಮಣರಿಗೆ ಕೊಟ್ಟು ಅವರಿಂದ ಕೊಡಲ್ಪಟ್ಟ ಮಂತ್ರಾಕ್ಷತೆಯನ್ನು ಶಿರಸಾಧಾರಣಮಾಡಿ, ಶಿವ ಮಂತ್ರಾಭಿಮಂತ್ರಿತವಾದ ಪರಮಾನ್ನಹವಿಶ್ಯೇಷವನ್ನು ಭುಂಜಿಸಿ ಧರ್ಮರತರಾಗಿ ದ್ದರು. ಪರಮೇಶ್ವರನು ತನ್ನ ಕಲೆಯನ್ನೆಲ್ಲಾ ಆ ಪರಮಾನ್ನಹವಿಶೇಶ್ಯೇಷದಲ್ಲಿಟ್ಟ ದ್ದನು. ಇಷ್ಟಾದಬಳಿಕ ಆರ್ಯಾಂಬೆಗೆ ದೋಹದಲಕ್ಷಣಗಳೊಂದೊಂದಾಗಿ ಕಾಣಲು ಪ್ರಾರಂಭವಾದವು. ಇದಲ್ಲದೆ ಆರ್ಯಾಂಬೆಯು, ತಾನು ವೃಷಭಾಚಲದಮೇಲೆ ದೇವತೆಗಳಿಂದ ಸೇವಿಸಲ್ಪಡುತ್ತಿದ್ದಂತೆಯೂ, "ಜಯ, ಜಯ" ಎಂದು ಹೊಗಳಿಸಿಕೊಳ್ಳುತ್ತಿದ್ದಂತೆ ಯೂ, ಕನಸಂಕಂಡು ಬೆಚ್ಚಿಬೀಳುತ್ತಿದ್ದಳು. ಪ್ರಾತಃಕಾಲ ಎದ್ದು ನೋಡಿದರೆ ಆಕೆಯ ಹಾಸಿಗೆಯಮೇಲೆ ಪಾರಿಜಾತಾದಿಪುಷ್ಪಗಳು ಇರುತ್ತಿದ್ದವು. - ಶಿವಗುರುವು ಆ ಗರ್ಭಕ್ಕೆ ಪುಂಸವನವೇ ಮೊದಲಾದ ಶಾಸ್ತ್ರೋಕ್ತವಾದ ಸಂಸ್ಕಾರಗಳಂ ಮಾಡುತ್ತಾ ಧರ್ಮದಿಂದಿರುತ್ತಿದ್ದನು. - -+-+-+-+-+-- ತೃತೀಯವಲ್ಲರೀ ಶಾಕ್ತೈ , ಪಾಶುಪತೈರಪಿ ಕ್ಷಪಣಕೈ ಕಾಪಾಲಿಕೈರ್ವೈಷ್ಣವೈ ಅಪ್ಪನೈರಖಿಲೈ ಖಲೈ ಖಲು ಖಿಲಂ ದುರ್ವಾದಿಭಿರ್ವೈದಿಕಮ್ | ಪನ್ನಾನಂ ಪರಿರಕ್ಷಿತುಂ ಕ್ಷಿತಿತಲಂ ಪ್ರಾಸ್ತಃ ಪರಿಕ್ರೀಡತೆ ಘೋರೇ ಸಂಸೃತಿಕಾನನೇ ವಿಚರತಾಂ ಭದ್ರಂಕರಃ ಶಂಕರಃ|| -.--}}{ಳಿಸಿ .. ಶ್ರೀ ಶಂಕರಾವತಾರಘಟ್ಟ 8.

ಕಲಿಯುಗದಲ್ಲಿ 3890 (ಎಕ್ರಮಶಕೆ 850, ಕ್ರಿಶ 788) ನೇ ವಿಭವ  ನಾಮಸಂವತ್ಸರದ ವೈಶಾಖಮಾಸ, ಶುಕ್ಲಪಕ್ಷ ಪಂಚಮಿ ಯದಿನ,
  • ಪಂಚಮಿ ದಿನ ಆಚಾರ್ಯಾವತಾರವೆಂಬುದಕ್ಕೆ ಸರಿಯಾದ ಅಧಾರವಿಲ್ಲ. ದಶಮಿದಿನ ಆಚಾ ರ್ಯಾವತಾರವೆಂದು ಸದಾನಂದಪಂಡಿತರು ಹೇಳುತ್ತಾರೆ. ಉತ್ತರದೇಶದವರು ದಶಮಿಯ ದಿನವೇ ಶಂಕರಜಯಂತಿಯನ್ನು ಬಹಳವಾಗಿ ಆಚರಿಸುತ್ತಾರೆ. ದಾಕ್ಷಿಣಾತ್ಯರು ಸಚಂಮಿಡಿವಸ ಆರಾಧಿ ಸುತ್ತಾರೆ.