ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಕಥಾಸಾರ ೪೧ ನವಮವಲ್ಲರೀ

ಗತ್ವಾ ಗೋಕರ್ಣತೀರ್ಥಂ ಗುರುರಗತನಯಾಧೀಶಮಾರಾಧ್ಯ ತಸ್ಮಾತ್‌ ಗಾರ್ಯ ಮೂಕಾಂಬಿಕಾಯಾಃ ಪದಯುಗಮಥ ಸಂಜೀವ್ಯ ಭೂದೇವಪುತ್ರಮ್ | ಲಬ್ಧ್ವಾ ಬಲ್ಯಗ್ರಹಾರಂ ತದನು ಪುರಿ ಯುತಶೃಂಗಗಿರ್ಯಾಂ ಸ್ವಶಿಷ್ಯೈಃ | ವಾಕ್ಷೀಠಸ್ಥಂ ಸುರೇಶಂ ವಿದಧದಘಹೃತೀ ವಾಕ್ಪದಾಬ್ಜೇ ನಿಷೇವೇ ||

ನಂತರ ಆಚಾರ್ಯರು ತೀರ್ಥಯಾತ್ರೆಗಳಂ ಮಾಡುತ್ತಾ ಗೋಕರ್ಣ ಕ್ಷೇತ್ರಕ್ಕೆ ಬಂದು ಗೋಕರ್ಣೇಶ್ವರನನ್ನು ಪೂಜಿಸಿ ವಾದಿಗಳನು.  ಜಯಿಸುತ್ತಾ ಮೂಕಾಂಬಿಕೆಯ ದರ್ಶನಾರ್ಥವಾಗಿ ತೆರಳಿದರು

ದಾರಿಯಲ್ಲಿ ವಿಪ್ರದಂಪತಿಗಳೋರ್ವರು ಮೃತನಾಗಿರುವ ತಮ್ಮ ಏಕಮಾತ್ರ ಪುತ್ರನನ್ನು ತೊಡೆಯಮೇಲಿಟ್ಟುಕೊಂಡು ಪ್ರಲಾಪಿಸುತ್ತಿರುವು ದನ್ನು ಆಚಾರ್ಯರು ನೋಡಿ ಬಹಳ ವ್ಯಸನಾಕ್ರಾಂತರಾಗುತ್ತಿರಲು ಆಕಾಶವಾಣಿಯು " ಸಂರಕ್ಷಿಸುವುದಕ್ಕೆ ಶಕ್ತಿ ಇಠುವ ಮನುಷ್ಯನಿಗೆ ದುಃಖಕ್ಕಿಂತಲೂ ದಯೆಯೇ ಶ್ರೇಷ್ಠವು” ಎಂದಿತು. ಅದನ್ನು ಆಚಾರ್ಯರು ಕೇಳಿ " ತ್ರಿಜಗದ್ರಕ್ಷಣ ಸಾಮರ್ಥ್ಯವುಳ್ಳವರಿಗೆ ಅದು ಸತ್ಯವು" ಎನ್ನಲು ಆ ಮೃತಪುತ್ರನು ನಿದ್ರೆಯಿಂದ ಎದ್ದವನಂತೆ ಎದ್ದನು. ಅನಂತರ ಆಚಾರ್ಯರು ಅವರಿಂದ ಸ್ತುತಿಸಲ್ಪಟ್ಟವರಾಗಿ, ಮೂಕಾಂಬಾದೇವಾ ಲಯಕ್ಕೆ ಹೋಗಿ ದೇವಿಯನ್ನು ಆರಾಧಿಸಿ ಶ್ರೀ ಚಕ್ರವಂ ಸ್ಥಾಪಿಸಿ ಅನಂತರ ಶ್ರೀ ಬಲಿ ಸಂಜ್ಞ ಕವಾದ ಅಗ್ರಹಾರಕ್ಕೆ ಸಶಿಷ್ಯರಾಗಿ ಬಂದರು. ಅಲ್ಲಿಗೆ ದಿವಾಕರನೆಂಬ ಬ್ರಾಹ್ಮಣನು ಮೂಕನಾದ ತನ್ನ ಮಗನನ್ನು ಕರೆದು ಕೊಂಡುಬಂದು ಆಚಾರ್ಯರಿಗೆ ವಂದಿಸಿ "ಸ್ಯಾವಿೂ! ನನ್ನ ಮಗನು ಜನ್ಮಾರಭ್ಯದಿಂದ ಮೂಕನಹಾಗೆ ಇದಾನೆ, ವಿಪ್ರತ್ವಕ್ಕೆ ಭಂಗಬರುವುದೆಂದು ಸಕಾಲದಲ್ಲಿಯೇ ಉಪನಯನ ಮಾಡಿದೆನು. ಹುಡುಗರು ಆಟಕ್ಕೊಸ್ಕರ ಗದ್ದಲಮಡಿಕೊಂಡು ಹೋದರೂ, ನನ್ನ ಮಗನು ಹೋಗುವುದಿಲ್ಲ. ಹುಡುಗರು ಮೂರ್ಖನಾದ ಇವನನ್ನು ನೋಡಿ ಹೊಡೆದರೂ ಇವನು ಕೋಪವನ್ನು ಹೊಂದುವುದಿಲ್ಲ. ಯಾವಾಗಲಾದರೂ ತನ್ನ ಮನಸ್ಸು ಬಂದಾಗ ಊಟಮಾಡುವನೇ ಹೊರ್ತು ನಿತ್ಯವೂ ಊಟಮಾಡುವುದಿಲ್ಲ. ಸ್ವೇಚ್ಛಾವಿ ಹಾರಮಾಡುತ್ತಾನೆ; ಯಾವಮಾತನ್ನೂ ಆಡುವುದಿಲ್ಲ" ಎನ್ನಲು ಆಚಾರ್ಯರು " ನೀನು