ಪುಟ:ನನ್ನ ಸಂಸಾರ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬, ಕಾದಂಬರೀಸಂಗ್ರಹ ಏಕಾದಶವಲ್ಲರೀ ಪ್ರಾಜ್ಞೇ s ರ್ಸ್ಮಿ ತೀರ್ಥಯಾತ್ರಾಮಟತಿ ತದನು ಸ ಸ್ವಾಜ್ಞಯಾ ಪದ್ಮಪಾದೇ ಪ್ರಾದುರ್ಭೂತೋ ಜನನ್ಯಾಃ ಸ್ಮೃತಿಮನುವಿದಧತ್ ಸಂಸ್ಥಿತಾಯಾಃ ಕ್ರಿಯಾಸ್ತಾಃ || ತದ್ಗ್ರಾಮಿಣಾಂಶ್ಚಶಪ್ತ್ವಾ ಸಮುಚಿತವಚನಾನಧ್ವನೀನಾನಥಾ s ಯಂಗ್ರರ್ನ್ಯಾ ಪ್ರಾಚೀಕಟತ್ಕೇರಳವರಮಹಿವೃತ್ಪದ್ಮಪಾದ ಪ್ರಣೀರ್ತಾ ||

  • ನಂತರ ಪದ್ಮಪಾದರು ಆಚಾರ್ಯರನ್ನು ಕುರಿತು ಸ್ವಾಮಿಾ ತೀರ್ಥಯುಕ್ತಗಳಾದ ದೇಶಗಳನ್ನು ನೋಡಬೇಕೆಂದಿಚ್ಛೆಯುಂಟಾಗಿದೆ; ಅನುಜ್ಞೆಯಾಗಬೇಕು” ಎಂದು ಪ್ರಾರ್ಥಿಸಲು ಆಚಾರ್ಯರು : ಗುರುಗಳ ಸಮೀಪದಲ್ಲಿ ಮಾಡತಕ್ಕ ವಾಸವೇ ಕ್ಷೇತ್ರವಾಸವು, ಅವರ ಪಾದೋದಕವೇ ತೀರ್ಥವು; ಗುರೂಪದೇಶದಿಂದ ಹೊಂದಲ್ಪಟ್ಟ ಆತ್ಮದೃಷ್ಟಿಯೇ ಸಕಲ ದೇವತಾ ದರ್ಶನಾದಿಗಳು ” ಎಂದು ಹೇಳಿ ಅವನ ಮನಸ್ಸು ತೀರ್ಥಯಾತ್ರೆಯಮೇಲಿರುವುದನ್ನು ತಿಳಿದು ಪ್ರಾರಬ್ಧಕರ್ಮಗಳನ್ನು ಅನುಭವಿಸಿಯೇ ತೀರಿಸಬೇಕೆಂಬ ಅನೇಕ ಉಪದೇಶವಂ ಮಾಡಿ ಬೀಳ್ಕೊಟ್ಟರು.

ಇತ್ತ ಆಚಾರ್ಯರು ಸುರೇಶ್ವರಾದಿಗಳೊಡನೆ ಇರುತ್ತಾ ತಾಯಿಯಾದ ಆರ್ಯಾಂಬೆಯ ಸ್ಮರಣೆಯನ್ನು ಆತ್ಮಯೋಗಸಾಮಧದಿಂದ ತಿಳಿದು, ಈ ವಿಷಯವನ್ನು ಶಿಷ್ಯರಿಗೆ ತಿಳಿಸಿ ಅಂತರಿಕ್ಷ ಮಾರ್ಗದಿಂದ ಬಹು ಜಾಗ್ರತೆಯಾಗಿ ತಾಯಿಯ ಸಾನ್ನಿಧ್ಯವನ್ನು ಹೊಂದಿದರು. ಆಗ ಆರ್ಯಾಂಬೆಯು ತಾನು ಪೂರ್ಣಾನದಿಯಲ್ಲಿ ಸ್ನಾನಮಾಡಬೇಕೆಂದೂ, ಹೋಗಲು ಶಕ್ತಿ ಇಲ್ಲ ವೆಂದೂ ಹೇಳಲು ಆಚಾರ್ಯರು, ತಮ್ಮ ಮಹಿಮೆಯಿಂದ ಆ ನದಿಯನ್ನು ತಮ್ಮ ಮನೆಯ ಸಮೀಪಕ್ಕೆ ಕರೆದುಕೊಂಡುಬಂದರು, ಇಷ್ಟರಲ್ಲಿಯೇ ಆರ್ಯಾಂಬೆಯು ಮೃತಳಾಗಲು ಆಚಾರ್ಯರು ತಾಯಿಗೆ ಅಂತ್ಯಕರ್ಮವನ್ನು ತಾವೇ ಮಾಡಬೇಕೆಂದು ಯೋಚಿಸಿ ತಮ್ಮ ಬಂಧುಗಳನ್ನು ಕರೆಯಲು ಅವರು ಯತಿಗೆ ಕರ್ಮಾಧಿಕಾರವಿಲ್ಲದಕಾರಣ, ತಾವೊಬ್ಬರೂ ಬರುವುದಿಲ್ಲ ವೆಂದು ಹೇಳಿದ್ದಲ್ಲದೇ ತಮ್ಮ ಮನೆಗಳಿಂದ ಬೆಂಕಿಯನ್ನು ಕೂಡ ಕೊಡಲಿಲ್ಲ. ಇದನ್ನು ನೋಡಿ ಆಚಾರ್ಯರು ತಮ್ಮ ಬಲಗೈಯಲ್ಲಿ ಅಗ್ನಿಯಂ ಮಥಿಸಿ ತಾಯಿಯು ವಾಸವಾಗಿದ್ದ ಮನೆಗೇ ಅಗ್ನಿ ಪ್ರತಿಷ್ಠಾಪನೆಯಂ ಮಾಡಿ, ಅನಂತರ ಆ ಅಗ್ರಹಾರದವರನ್ನು “ ಇಲ್ಲಿಂದ ಮುಂದೆ ನೀವು ವೇದಬಾಹ್ಯರಾಗಿ ಯತಿಗಳಿಗೆ,