ಪುಟ:ನನ್ನ ಸಂಸಾರ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨. ಕಾದಂಬರೀಸಂಗ್ರಹ ಬ್ಬನೇ ಬ್ರಹ್ಮ ವಿಷ್ಣುಗಳಿಗೂ ಮತ್ತು ಲೋಕಗಳಿಗೂ ಕಾರಣಭೂತನು ; ಜಗತ್ಸಂಹಾರ ಕಾರಿಣಿಯಾದ ಶಕ್ತಿಯು ಮದಿಚ್ಛಾರೂಪಿಣಿಯು ; ನನ್ನಿಂದಲೇ ಸೃಷ್ಟಿ ಮಾಡಲ್ಪಟ್ಟ ಆ ಶಕ್ತಿಯು ನನ್ನಿಂದಲೇ ನಾಶವನ್ನು ಹೊಂದಿ ಪುನಃ ನನ್ನಿಂದಲೇ ಸೃಷ್ಟಿಸಲ್ಪಡುತ್ತಾಳೆ ; ಅವ್ಯಯರಾದ ಏಕಾದಶರುದ್ರರೂ, ನನ್ನಿಂದಲೆ ಸೃಷ್ಟಿಸಲ್ಪಟ್ಟರು ; ಸೃಷ್ಟಿ ಕರ್ತನನ್ನು ರಾಜಸಗುಣಯುಕ್ತನನ್ನಾಗಿಯೂ, ರಕ್ಷಕನನ್ನು ಸಾತ್ವಿಕಗುಣಯುಕ್ತ ನನ್ನಾಗಿಯೂ, ನಾಶಕನನ್ನು ತಮೋಗುಣಯುಕ್ತನನ್ನಾಗಿಯೂ ಸೃಷ್ಟಿಸಿದೆನು ; ಅವರೇ ಬ್ರಹ್ಮ ವಿಷ್ಣು ಮಹೇಶ್ವರರು ' ಎಂದು ಮೊದಲಾಗಿ ಹೇಳಿದ್ದಾನೆ. ರುದ್ರಪೂಜಾಸಕ್ತರೂ, ರುದ್ರಜಪಮಾಡತಕ್ಕವರೂ, ಪಂಚಾಕ್ಷರಿಜಪರಶರೂ, ರುದ್ರಾಕ್ಷಿಗಳಿಂದಲಂಕೃತರಾದ ಅಂಗಗಳುಳ್ಳವರೂ ಮತ್ತು ವಿಭೂತಿಯಿಂದ ಬಳಿಯಲ್ಪಟ್ಟ ದೇಹಗಳುಳ್ಳವರೂ ಆದ ಜನರು ಶಿವಲೋಕಕ್ಕೆ ಹೋಗುತ್ತಾರೆ ; ಇದಲ್ಲದೆ : ಸತ್ಯಂ ಜ್ಞಾನಮನಂತಂ' ಇತ್ಯಾದಿ ಶ್ರುತಿವಾಕ್ಯಗಳಿಂದಲೂ ಈಶ್ವರನು ಹೇಳಲ್ಪಟ್ಟಿದ್ದಾನೆ ; ಅವನು ತನ್ನ ತೇಜಸ್ಸನ್ನು ಸೂರ್ಯಾಕಾರದಿಂದ ಸೃಷ್ಟಿಸಿದನು. ;ಕ್ಲೇಶದಾಯಕನಾದ ಶನಿಯನ್ನೂ ಅವನೇ ಸೃಷ್ಟಿಸಿದನು ; • ನತತ್ರಸೂರ್ಯೋಛಾತಿನ ಚಂದ್ರತಾರಕಂ ' ಇತ್ಯಾದಿ ಶೃತಿವಾಕ್ಯಗಳಿಂದ ಸೂರ್ಯಾದಿಮಂಡಲಗಳೂ ಈಶ ತೇಜಸ್ಸಿಲ್ಲದೆ ಸ್ವಯಂ ಪ್ರಕಾಶಿಸಲಾರವು; ಆದ್ದರಿಂದ ನೀವೂ ನಮ್ಮಂತೆ ಚಿಹ್ನ ಧಾರಣಿಯಂ ಮಾಡಿಕೊಂಡು ಈಶ್ವರನನ್ನು ಉಪಾಸನೆ ಮಾಡಿ ಎಂದರು. ಹೀಗೆ ಹೇಳಲ್ಪಟ್ಟ ಆಚಾರ್ಯರು ಎಲೈ ಮೂಢರೇ ! ಒಬ್ಬ ದೇವನೇ ಬ್ರಹ್ಮ ರೂಪದಿಂದ ಸೃಷ್ಟಿಸಿ, ವಿಷ್ಣು ರೂಪದಿಂದ ರಕ್ಷಿಸಿ ರುದ್ರರೂಪದಿಂದ ಪ್ರಳಯವಂ ಮಾಡುತ್ತಾನೆ, ನಾಭಿಯಮೇಲುಭಾಗದಲ್ಲಿ ಸೋಮಪರೂ, ನಾಭಿಯ ಕೆಳಭಾಗದಲ್ಲಿ ಅಸೋಮಪರೂ ಆದ ದೇವತೆಗಳು ಇದ್ದಾರೆ. ವೇದವೇದಾಂತಪಾರಗನಾದ ಬ್ರಾಹ್ಮಣನ, ಶಿಖಾ, ಶಿರ, ಲಲಾಟ, ಕಿವಿ, ಮೂಗು, ಕಪೋಲ, ಜಿಹ್ವಾ, ಓಷ್ರ, ಚಿಬುಕ, ಕಂಠ, ಅಂಸದ್ವಂದ್ವ, ಬಾಹುಯುಗ್ಮ, ಹಸ್ತಯುಗ, ವಕ್ಷಸ್ಸು, ನಾಭಿ, ಕಟಿ, ಲಿಂಗ, ವೃಷಣ, ಊರು, ಜಾನುಕ, ಗುಲ್ಫದ್ವಯ, ಪಾದಯುಗ್ಮ, ಇವುಗಳನ್ನು ನಾನೇ ಮೊದಲಾದ ದೇವತೆಗಳೂ, ಪಿತ್ಯುಗಳೂ, ಮುನಿಗಳೂ, ಆಶ್ರಯಿಸಿಕೊಂಡು, ಸ್ನಾನಾದ್ಯಾಹಾರಮಿಶ್ರಿತಗಳಾದ ನಿತ್ಯ ಕರ್ಮಗಳಿಂದ ತೃಪ್ತರಾಗುತ್ತೇವೆ ಎಂದು ಬ್ರಹ್ಮನು ಅರುಣಕೇತುವಿಗೆ ಹೇಳಿದ್ದಾನೆ. « ಬ್ರಾಹ್ಮಣನ ದೇಹದಲ್ಲಿ ಸಕಲ ದೇವತೆಗಳು ವಾಸಿಸುತ್ತಾರೆ' ಎಂದು ಶ್ರುತಿವಾಕ್ಯವು ಬೋಧಿಸಿದರೂ, ದೇಹಕ್ಕೆ ತಾಪಮಾಡಿದರೆ ಶೀರ್ಷಾವಿಪ್ರದೇಹದಲ್ಲಿೀದೇವತೆಗಳು ಇವನನ್ನು ಶಪಿಸಿ ಓಡಿಹೋಗುತ್ತಾರೆ; ವ್ಯಾಧಿಯಿಲ್ಲದೆ ಕರ್ಮಯೋಗ್ಯವಾದ ವಿಪ್ರದೇಹದಲ್ಲಿ ಚಿಹ್ನೆಯನ್ನ ನೋಡಿದರೆ ಲೋಕೇಶ್ವರ