ಪುಟ:ನನ್ನ ಸಂಸಾರ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

4 ಕಾದಂಬರೀಸಂಗ್ರಹ

            ೫ ನೆಯ ನಿಬಂಧನೆಯಲ್ಲಿ . ಎರಡನೆಯ ವರ್ಗದ ಸಾಧಾರಣಸಭ್ಯರು               
      ಹೊರತು ಮಿಕ್ಕ ಸಭ್ಯರೆಲ್ಲರಿಗೂ ಪರಿಷತ್ತಿನ ಸಾಮಾನ್ಯಸಭೆಗಳಲ್ಲಿ ತಮ್ಮಅಭಿಮತ 
      ವನ್ನು ತಿಳಿಸುವ ಸ್ವಾತಂತ್ರ್ಯವಿರತಕ್ಕುದು ; ಮತ್ತು ಪರಿಷತ್ತಿನಿಂದ ಪ್ರಕಟವಾಗುವ 
      ಗ್ರಂಥಗಳ ಮತ್ತು ಪತ್ರಿಕೆಗಳ ಒಂದೊಂದು ಪ್ರತಿಯ. ಅವರಿಗೆ ಉಚಿತವಾಗಿ ದೊರೆಯ 
      ತಕ್ಕುದು" ಎಂದು ಹೇಳಿದೆ. ಇದರಲ್ಲಿ ಎರಡನೆಯ . ವರ್ಗದವರನ್ನು ವಿನಾಯಿಸಿರುವ 
      ಮಟ್ಟಿಗೆ ಈ ನಿಬಂಧನೆಯನ್ನು ತಿದ್ದಿಕೊಳ್ಳಬೇಕಾಗಿದೆ. ಅವರ ವಾರ್ಷಿಕವರ್ಗಣಿಯನ್ನೂ  
      ೩ ರೂ.ಗೆ ಇಳಿಸಿ ಮತಾದಧಿಕಾರವನ್ನೂ ಪುಸ್ತಕಾದಿಗಳನ್ನು ಪಡೆಯುವ ಸ್ವಾತಂತ್ರ  
      ವನ್ನೂ ಕೂಡ ಅವರಿಗೆ ಕೊಡಬೇಕೆಂದು ನಾನು ಹೇಳುವುದು ಕೆಲವರಿಗೆ ವಿಪರೀತ 
      ಸೂಚನೆಯಾಗಿ ತೋರಬಹುದು. ಆದರೆ ನಮ್ಮ ದೇಶದಮಟ್ಟಿಗೆ ದಾರಿದ್ರ್ಯವನ್ನೂ
      ಒಂದು ಅಪರಾಧವಾಗಿ ನಾವು ತಿಳಿಯತಕ್ಕುದಲ್ಲ. ಇದಲ್ಲದೆ ಯಾವ ತರಗತಿಯ 
      ಸಭ್ಯರಲ್ಲಿಯೂ ಬಲು ದೊಡ್ಕ ಭಾಗದವರು ಬೆಂಗಳೂರಿನ ಹೊರಗಿರುವವರಾಗಿ ಅವರಿಗೆ 
      ಪರಿಷತ್ತಿನಿಂದ ಅಚ್ಚಾದ ಪುಸ್ತಕಪತ್ರಿಕಾದಿಗಳನ್ನು ಪಡೆಯುವ ಮತ್ತು ಸಮ್ಮೇಳನದ 
      ಕಾಲದಲ್ಲಿ ಮತ (Vote) ಕೊಡುವುದಕ್ಕಿಂತ ಹೆಚಿನ ಯಾವ ಪ್ರಯೋಜನವೂ ದೊರೆ 
      ಯುವಂತಿಲ್ಲವೆಂಬುದನ್ನು ಈ ಸಂದರ್ಭದಲ್ಲಿ ಮರೆಯತಕ್ಕುದಲ್ಲ. ಆದುದರಿಂದ ಪತ್ರಿಕೆ 
      ಯನ್ನು ಮಟ್ಟಿಗೆ ಸಮಸ್ತ ವರ್ಗದವರಿಗೆ ಉಚಿತವಾಗಿ ಕೊಟ್ಟು ಪುಸ್ತಕಗಳ ವಿಷಯ 
      ದಲ್ಲಿ ಸಂದರ್ಭಾನುಸಾರ ವತಿಸಲು ಕಾರ್‍ಯನಿರ್ವಾಹಕರಿಗೆ ಅಧಿಕಾರ ಕೊಡುವುದು 
      ಯುಕ್ತವಾಗಿದೆ. ಇನ್ನು, ಬೆಂಗಳೂರಿನಲ್ಲಿಯೇ ಇದು ಪ್ರಸ್ತಕಾಲಯದ ಪ್ರಯೋಜನ 
      ವನ್ನೂ ಪಡೆಯುವ ಸದಸ್ಯರ ಸಂಗತಿಯಲ್ಲಿ ಬೇಕಾದರೆ ಸ್ಥಳೀಯ ವರ್ಗಣಿಯಾಗಿ 
      ವರ್ಷಕ್ಕೆ ೧ರೂ. ಯಂತೆ ಹೆಚಾಗಿ ವಪೆಯಬಹುದು. ಇತರ ಸದಸ್ಯರು ಕೂಡ ತಮ್ಮ 
      ತಮ್ಮ ಪಟ್ಟಣಗಳಲ್ಲಿ ಉಪಶಾಖೆಗಳನ್ನು ಹೊರಡಿಸಿದಾಗ ಆಯಾ ಶಾಖೆಯ ಪೋಷಣೆ 
      ಗಾಗಿ ಇದೇ ಮೇರೆಗೆ ೧ರೂ. ಸ್ಥಳೀಯ ವರ್ಗಣಿಯನ್ನು ಕಡತಕ್ಕುದೆಂದು ನಿಬಂಧಿಸ 
      ಬಹುದು.
             ಹಾಗೆಯೇ, ೨ ನೆಯ ವರ್ಗದ ಸಭ್ಯರಿಗೆ ಮತಾಧಿಕಾರವು ಏತಕ್ಕೆ ಇರಬಾರದೆಂ 
        ಬುದೂ ಆಲೋಚಿಸತಕ್ಕ ಒಂದು ವಿಷಯವಾಗಿದೆ. ಅವರು ಕೊಡುವ ವರ್ಗಣಿಯು 
        ಕಡಿಮೆಯೆಂಬ ಒಂದೇಕಾರಣದಿಂದ ಅವರನ್ನು ಈ ರೀತಿಯಾಗಿ ನಡೆಯಿಸಿಕೊಳ್ಳುವುದು 
        ಎಷ್ಟು ಮಾತ್ರಕ್ಕೂ ಯೋಗ್ಯವಲ್ಲವೆಂದು ನಾನು ಭಾವಿಸುವೆನು. ಸಾಮಾನ್ಯವಾಗಿ ಈ 
        ವರ್ಗಕ್ಕೆ ವಿದ್ಯಾರ್ಥಿಗಳೂ ಅನುಭವ ಕಡಿಮೆಯಾಗಿರುವ ತರುಣರೂ ಇತು ಸ್ವಲ್ಪ 
        ಆದಾಯವುಳ್ಳ ಜನರೂ ಸೇರುವರಾದುದುಂದಲೂ ಈ ವರ್ಗದವರ ಸಂಖ್ಯೆಯೇ