ಪುಟ:ನನ್ನ ಸಂಸಾರ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

- ಅವಂತೀಶನು ಭೋಜನಾಲಯದಿಂದ ತನ್ನ ಕಿರುಮನೆಗೆ ಹೋಗಿ ಒಂದು ವೇತ್ರಾಸನದಮೆಲೆ ಕುಳಿತು ಕಣ್ಣೀರು ಸುರಿಸುತ್ತಾ ರಾತ್ರಿಯನ್ನೆಲ್ಲಾ ಕಳೆದನು. ಸೂರ್ಯೋದಯಾತೂರ ಪ್ರತಿದಿನವೂ ಎದ್ದು ಗಾಳಿಸವಾರಿಹೊರಡುತ್ತಿದ್ದ ಚಕ್ರವ ರ್ತಿಯು ಸೂರ್ಯೋದಯವಾಗಿ ಎರಡುಗಳಿಗೆಯಾದರೂ ಕಿರುಮನೆಯಿಂದ ಹೊರಗೆ ಬಾರದಿದ್ದುದನ್ನು ನೋಡಿ ಮಂತ್ರಿ ಮೊದಲಾದವರು ಕಳವಳಗೊಂಡರು. ಮುಖ್ಯಾ ಮಾತ್ಯನು ಚಕ್ರವರ್ತಿಯ ಕಿರುಮನೆಯ ಬಳಿಗೆ ಬಂದು ಬಾಗಿಲಸಂದಿನಲ್ಲಿ ನೋಡಲು, ರಾಜನು ಒಂದು ಆರಾಮವೇತ್ರಾಸನದಮೇಲೆ ಕುಳಿತು ಕೆನ್ನೆಯಮೇಲೆ ಕೈಯನ್ನಿಟ್ಟುಕೊಂಡು ಏನನ್ನೊ ಯೋಚಿಸುತ್ತಿದ್ದುದನ್ನು ಕಂಡನು. ರಾಜನ ಪ್ರಕೃತಸ್ಥಿತಿ ಯನ್ನು ನೋಡಿ ಮುಖ್ಯಾಮಾತ್ಯನಿಗೂ ದಾರಿ ತೋರದೆಹೋಯಿತು, ರಾಜನು ಏತಕ್ಕೆ ಈರೀತಿ ಶೋಕಿಸುತ್ತಿರುವನೆಂಬುದಕ್ಕೆ ಕಾರಣವನ್ನು ಎಷ್ಟು ಯೋಚಿಸಿದರೂ ಕಂಡುಹಿಡಿಯಲಾರದೆಹೋದನು, ಕಡೆಗೆ ತನ್ನಲ್ಲಿತಾನೆ • ರೋಹಿಣಿಯನ್ನು ನೋಡಿದ ದಿನದಿಂದಲೂ, ರಾಜನ ಸ್ಥಿತಿಯು ವಸ್ತುತಃಸರಿಯಾಗಿಲ್ಲವು, ಆಕೆಯ ರೂಪು, ಲಾವಣ್ಯ, ಬುದ್ಧಿ ಶಕ್ತಿ ಮೊದಲಾದುವುಗಳಿಗೆ ಪರವಶನಾಗದ ಮನುಷ್ಯನು ಪಾಮ ರನೇ ಸರಿ! ಹಾಗಿರುವಾಗ್ಗೆ ನಮ್ಮ ಚಕ್ರವರ್ತಿಯು ಆಕೆಯನ್ನು ನೋಡಿ ಮೋಹಿಸಿರ ಬಹುದೆಂದು ಯೋಚಿಸಿದರೆ ಅದು ಸುಳ್ಳಾಗಲಾರದು, ಏಕೆಂದರೆ ಆಕೆಯು ಅವಿವಾಹಿ ತಳು, ಯೌವ್ವನವತಿಯು, ರೂಪವತಿಯು, ಮತ್ತು ವಿದ್ಯಾವತಿ, ಚಕ್ರವರ್ತಿಯೂ ಕೂಡ ರಾಜ್ಯಕಾರ್ಯದಲ್ಲಿ ನಿಪುಣನು, ಯುವಕನು, ರೂಪಿನಲ್ಲಿ ಅನಂಗನನ್ನೂ ಮರೆಸು ವನು. ಈತನ ರಾಜ್ಯ ಸ್ಥಿತಿಯು ಹೇಗಿರುವುದೆಂದರೆ :- ಬಡತನವು ಸ್ತ್ರೀಯರ ನಡುವಿನಲ್ಲಿಯೂ, ಮಾಂದ್ಯವು ಅವರ ನಡೆಯಲ್ಲಿಯೂ, ಕಠಿಣತ್ವವು ಅವರ ಎದೆಯಲ್ಲಿಯೂ, ಚಾಂಚಲ್ಯವು ಅವರ ಕಡೆಗಣ್ಣಿನ ನೋಟದಲ್ಲಿಯೂ, ಕುಟಿಲತ್ವವು ಅವರ ಗುಂಗುರುಕೂದಲುಗಳಲ್ಲಿಯೂ ಕಂಡುಬರುತ್ತಿರುವುದೇ ಹೊರತು ಜನರಲ್ಲಿ ಹುಡುಕಿದರೂ ಸಿಗುವುದಿಲ್ಲ. ಈ ವಿಧವಾದ ಬಿಕ್ಕಟ್ಟಿನಲ್ಲಿ ರಾಜ್ಯಭಾರಮಾ ಡುತ್ತಲಿರುವ ಸಾರ್ವಭೌಮನು ಒಬ್ಬ ಸ್ತ್ರೀಗೆ ಸೋತುದು ಆಶ್ಚರ್ಯವಲ್ಲವೆ? ಹೇ ಮನಸ್ಸೇ ! ನಿನ್ನ ನಿರ್ಧರವೇ ನಿರ್ಧರ! ನಿನ್ನ ನಿಶ್ಚಯವೇ ನಿಶ್ಚಯ ! ನಿನ್ನ ನ್ಯಾಯವೇ ನ್ಯಾಯ ! ನಿನಗೆ ತಕ್ಕಹಾಗೆ ನಿನ್ನ ಸ್ನೇಹಿತರೀರ್ವರೂ (ಕಿಎ, ಕಣ್ಣು) ಸಹಾಯಮಾ ಡುವರು. ಭಗವಂತನ ನಿಯಾಮಕವಿದ್ದಂತೆಆಗಲಿ ಎಂದು ಯೋಚಿಸುತ್ತಾ, ಚಕ್ರವರ್ತಿ ಸಾರ್ವಭೌಮರಿಗೆ ಜಯವಾಗಲಿ ” ಎಂದು ನಮ್ರಭಾವದಿಂದ ಹೇಳಿದನು. ರಾಜನು ಝಗ್ಗನೆ ತನ್ನ ಪೀಠದಿಂದ ಎದ್ದು ಮುಖ್ಯಾಮಾತ್ಯನನ್ನು ಬಳಿಗೆ ಬರಹೇಳಿದನು.