ಪುಟ:ನನ್ನ ಸಂಸಾರ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರೋಹಿಣಿ

ತಮ್ಮಲ್ಲಿ ಬಿಟ್ಟಿ ಪುಷ್ಪಗಳ ರೇಖುಗಳನ್ನೆಲ್ಲಾ ಶ್ರೀ ಜಗದಂಬೆಯಮೇಲೆ ಉದುರಿಸುತ್ತಿದ್ದವು . ಈಶ್ವರನ ದೇವಸ್ಥಾನದ ಮುಂದುಗಡೆಯಲ್ಲಿ ಒಂದು ದೊಡ್ಡ ಬಿಲ್ವಪ ತ್ರೆಯ ಗಿಡವಿದ್ದಿತು, ದೇವಸ್ಥಾನದ ಹೊರಗಡೆ ಎಡಭಾಗದಲ್ಲಿ ಅನೇಕ ಬೇಲ ಮತ್ತು ಹಲಸಿನಮರಗಳು ಅನೇಕ ಮುಳ್ಳುಗಿಡಗಳಿಂದ ಆವೃತವಾಗಿದ್ದುವು, ಒಂದು ಸಣ್ಣ ನದಿಯು ದೇವಸ್ಥಾನವನ್ನು ಸುತ್ತುಗಟ್ಟಿಕೊಂಡು ನಿದಾನವಾಗಿ ಪ್ರವಹಿಸುತ್ತಿದ್ದಿತು. ಸುವರ್ಣಪುರಾಧೀಶನು ಅಲ್ಲಿ ಹರಿಯುತ್ತಿದ್ದ ನದಿಯ ಶೋಭೆಯನ್ನೂ ದೇವಸ್ಥಾನ ವನ್ನೂ ತನ್ನ ಮನಸ್ಸಿನಲ್ಲೇ ವರ್ಣನೆಮಾಡುತ್ತಾ ದೇವಸ್ಥಾನದ ಸುತ್ತಲೂ ಸ್ವಲ್ಪ ಹೊತ್ತು ಅಲೆದಾಡುತ್ತಾ ಅಲ್ಲಿ ಒಂದು ಹಲಸಿನಮರದಲ್ಲಿ ಪಕ್ಷವಾಗಿ ಬಿರುಕುಬಿಟ್ಟಿದ್ದ ಒಂದು ಹಲಸಿನ ಹಣ್ಣನ್ನು ಕೊಯ್ದು ತಂದು ನದಿಯದಡದಲ್ಲಿಟ್ಟು ತಾನು ಉಟ್ಟು ತೊಟ್ಟಿದ್ದ ಬಟ್ಟೆಗಳನ್ನೆಲ್ಲಾ ಒಗೆದು ಒಣಗಿಸಿಕೊಂಡು ತನ್ನ ನಿತ್ಯ ಕರ್ಮಗಳನ್ನು ತೀರಿಸಿ ಕೊಂಡು ದೇವಸ್ಥಾನದ ಒಳಕ್ಕೆ ಹೋಗಿ ದೇವರಸಾನ್ನಿಧ್ಯದಲ್ಲಿನಿಂತು ಒಂದೇಮನಸ್ಸಿ ನಿಂದ ದೇವರನ್ನು ಧ್ಯಾನಮಾಡಿ ತಾನು ತಂದಿದ್ದ ಹಣ್ಣನ್ನು ದೇವರಮುಂದೆ ಇರಿಸಿ ನಮಸ್ಕಾರಮಾಡಿ ಹಣ್ಣನ್ನು ತೆಗೆದುಕೊಂಡು ಕೈಸಾಲೆಯಲ್ಲಿ ಕುಳಿತುಕೊಂಡು ಹಣ್ಣನ್ನೂ ಸಿಪ್ಪೆಯನ್ನೂ ಬೇರೆಬೇರೆಮಾಡಿ ತಾನು ತಿನ್ನಬೇಕೆಂದಿರುವಷ್ಟರಲ್ಲಿಯೇ ತನ್ನೆದು ರಿಗೆ ಒಬ್ಬ ಮುದಿಬ್ರಾಹ್ಮಣನನ್ನು ಕಂಡು ಆತನಿಗೆ ದಂಡಪ್ರಣಾಮವನ್ನು ಮೂಡಿ ಹಲ ಸಿನ ಹಣ್ಣಿನಲ್ಲಿ ಅರ್ಧಭಾಗವನ್ನು ಆತನಿಗೆ ಕೊಟ್ಟು ತಾನೂ ತಿಂದನು. ಮುದಿಬ್ರಾಹ್ಮ ಣನು ಸುವರ್ಣಪುರಾಧೀಶನ ವೃತ್ತಾಂತವನ್ನೆಲ್ಲವನ್ನೂ ಸಮಗ್ರವಾಗಿ ಕೇಳಿ "ಎಲೈ ಅರಸೇ ! ಇಲ್ಲಿಗೆ 8 ಮೈಲಿ ದೂರದಲ್ಲಿ ಜಯಪುರಿಯಲ್ಲಿ ಭೀಮರಾಜನೆಂಬುವನು ರಾಜ್ಯ ಭಾರಮಾಡುತ್ತಿರುವನು. ನೀನು ಆತನಬಳಿಗೆ ಈದಿವಸವೇ ಹೊರಟು ನಿನ್ನ ವೃತ್ತಾಂತ ವನ್ನೆಲ್ಲವನ್ನೂ ತಿಳಿಸು. ಆತನು ನಿನಗೆ ಸಹಾಯಮಾಡುವನು, ಜಾಗ್ರತೆಯಲ್ಲಿಯೇ ನಿನಗೆ ಮಂಗಳವುಂಟಾಗಲಿ” ಎಂದು ಹರಸಿ ಎಲ್ಲಿಯೋ ಹೊರಟು ಹೋದನು. ವಿಪ್ರವಾಕ್ಯದಂತೆ ಸುವರ್ಣಪುರಾಧೀಶನು ತಕ್ಷಣವೇ ಹೊರಟು ಸಂಧ್ಯಾ ಕಾಲಕ್ಕೆ ಸರಿಯಾಗಿ ಜಯಪುರಿಗೆ ಶೇರಿದನು, ನಿತ್ಯ ಪದ್ಧತಿಗನುಸಾರವಾಗಿ ಭೀಮರಾಜನು ದರ್ಬಾರನ್ನು ತೀರಿಸಿಕೊಂಡು ಊಟಕ್ಕೆ ಹೋಗುತ್ತಿರುವ ಹೊತ್ತಿಗೆ ಸರಿಯಾಗಿ ದೂತನೊಬ್ಬನು, "ಯಾರೋ ಒಬ್ಬರು ತಮ್ಮ ದರ್ಶನಾರ್ಥವಾಗಿ ಬಂದಿರುವರು" ಎಂದು ವಿಜ್ಞಾಪಿಸಿಕೊಂಡನು. ರಾಜನು ತಕ್ಷಣವೇ ಆತನನ್ನು ಕರೆದುಕೊಂಡು ಬರು ವಂತೆ ಆಜ್ಞೆಯಿತ್ತು ಅಲ್ಲಿಯೇ ಇದ್ದ ವೇತ್ರಾಸನದಮೇಲೆ ಕುಳಿತುಕೊಂಡು ಬಂದಿರ ತಕ್ಕವರು ಯಾರಿರಬಹುದೆಂದು ಯೋಚಿಸುತ್ತಿರುವಷ್ಟರಲ್ಲಿಯೇ ದೂತರನಡುವೆ ಇದ್ದ