ಪುಟ:ನನ್ನ ಸಂಸಾರ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರೋಹಿಣ

ಅವಂತೀಶನು ಕಾಗದವನ್ನು ಮತ್ತೆ ಮತ್ತೆ ಓದಿನೋಡಿ ಕಿರುಮನೆಯಲ್ಲಿದ್ದ ತನ್ನ ಚಿಕ್ಕ ಪೆಟ್ಟಿಗೆಯೊಳಗಿನಿಂದ ಬೇರೆ ಇನ್ನೊಂದು ಕಾಗದವನ್ನು ತೆಗೆದು ನೋಡಲು, ಅದರ ಬರವಣಿಗೆಯೂ, ರೋಹಿಣಿಯುಕೊಟ್ಟ ಕಾಗದದ ಬರವಣಿಗೆಯೂ, ಒಂದೇ ಆಗಿತ್ತು. ಅವಂತೀಶನು ತನ್ನ ಪೆಟ್ಟಿಗೆಯಿಂದ ತೆಗೆದ ಕಾಗದವನ್ನು ರೋಹಿಣಿಯಕೈಗೆ ಕೊಟ್ಟು ಓದ ಹೇಳಿದನು, ರೋಹಿಯು ಓದಿದಳು, ಅದರಲ್ಲಿ ಹೀಗೆ ಬರೆದಿತ್ತು :- ಚಕ್ರವರ್ತಿಸಾರ್ವಭೌಮರಿಗೆ | ತಮಿಗೂ ಮತ್ತು ಸುವರ್ಣಪುರದವರಿಗೂ ನಡೆಯುತ್ತಿರುವ ಈ ಪ್ರಾಥಮಿಕ ಯುದ್ಧದಲ್ಲಿ ತಾವು ಸೋತು ಓಡಿಹೋಗುತ್ತಿದ್ದಾಗ ತಮ್ಮ ಪ್ರೀತಿಪಾತ್ರಳಾದ ಅಹಲ್ಯೆಯನ್ನು ಹೊರಕ್ಕೆ ಕರೆದುಕೊಂಡುಬರುವುದು ಬಹಳ ದುಸ್ತರವಾಯಿತು. ನಾನು ಹೊಟ್ಟೆಗಿಲ್ಲದೆ ಕಲ್ಯಾಣನಗರದಬಳಿ ಉದ್ಯಾನವನದಲ್ಲಿ ರೂಪುಮರೆಸಿಕೊಂಡಿರುತ್ತೇನೆ. ತಮ್ಮ ಪುತ್ರಿ ಅಹಲ್ಯೆಮೇಲೆ ಕೃವೆಯಿಟ್ಟು ಜಾಗ್ರತೆ ಬಂದು ಆ ಮಗುವನ್ನು ಕರದುಕೊಂಡು ಹೋಗಬೇಕು, ಸಾವಕಾಶಮಡಕೂಡದು, ಛಳಿ ಮಳೆ ಗಾಳಿಗಳ ಬಡಿತಕ್ಕೆಸಿಕ್ಕಿ ನರಳುತ್ತಿರುವೆನು. ರಾಮಲಾಲ್, 1 ನೇ ಪಟಾಲಂ. ಕಾಗದವನ್ನು ಓದಿಕೊಂಡು ಅದನ್ನು ಅವಂತೀಶನಿಗೆ ಹಿಂದಿರುಗಿಕೊಟ್ಟು ಬಿಟ್ಟಳು, ಅವಂತೀಶಟು ಕರುಣಾಂಬೆಯಕಡೆಗೆ"ತಿರುಗಿ ಎಲೆ ತಾಯೆ ! ಈ ರೋಹಿಣಿಯನ್ನು ನೋಡಿದರೆ ನನ್ನ ಪ್ರೀತಿಪುತ್ರಿ ಆ ಅಹಲ್ಯೆಯ ಜ್ಞಾಪಕವು ಪದೇಪದೇಬರುತ್ತಿರುವುದು, ಆ ಅಹಲ್ಯೆಯ ಕತ್ತಿನಲ್ಲಿದ್ದ ತಾಯತಿನೊಳಗೆ ಕೆಲವು ಎಪ್ರವಾಕ್ಯಗಳನ್ನು ಬರಸಿ ಕಟ್ಟಿದ್ದೆನು, ರೋಹಿಣಿಯ ಕತ್ತಿನಲ್ಲಿರತಕ್ಕ ತಾಯಿತಿಯೊಳಗೇನಿದೆ, ಆದನ್ನು ತಾವು ಕಟ್ಟಿದಿರಾ ? ಇಲ್ಲದಿದ್ದರೆ ಅದರೊಳಗೇನಿರುತ್ತದೆಂದು ತಾವು ದಯವಿಟ್ಟು ತಿಳಿಸಿದರೆ ನನ್ನ ಅನುಮಾನವು ಸುಳ್ಳೇ ಆಧವಾ ದಿಟವೆ ? ಎಂಬುದು ವ್ಯಕ್ತವಾಗುತ್ತದೆ' ಎನ್ನಲು ಕರುಣಾಂಯುಬೆಯು ರೋಹಿಣಿಯ ಕತ್ತಿನೊಳಗಿದ್ದ ತಾಯತಿಯನ್ನು ಬಿಚ್ಚಿ ತೆಗೆದು ಅದರೊಳ ಗಿದ್ದ ಸಣ್ಣ ಚೀಟಿಯನ್ನು ತೆಗೆಯಲು ಅವಂತೀಶನು ಹೇಳಿದ್ದಂತೆಯೇ ಕೆಲವು ವಿಪ್ರವಾ ಕ್ಯಗಳು ಅದರಲ್ಲಿ ಬರೆಯಲ್ಪಟ್ಟಿದ್ದಿತು, ಅದನ್ನು ನೋಡಿದ ತಕ್ಷಣದಲ್ಲಿಯೇ ಅವಂತೀ ಶಬ ರೋಹಿಣಿಯನ್ನು ತಬ್ಬಿಕೊಂಡು ಮುದ್ದಾಡುವುದಕ್ಕೆ ಮೊದಲುಮಾಡಿದನು, ಕರ ಣಾಂಬೆಗಂತೂ ಎಲ್ಲವೂ ಸ್ವಪ್ನ ಭಾಸವಾಗಿದ್ದಿತು.