ಪುಟ:ನನ್ನ ಸಂಸಾರ.djvu/೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ನನ್ನ ಸಂಸಾರ 27 AAAAAAAAAA #\ n \ # *n th \ \ \nn /೧೧ ಗಿ 1 1,\\r\ \ n 1AAN \ ೧೧t 11 \\n\\ n AAA ~ ~ A Ann F* * ಹೇಳಿ ಬೇಜಾರಾಗಿ ನಮ್ಮ ಯಜಮಾನರು ನನ್ನ ವಿಷಯದಲ್ಲಿ ಬಹಳ ಅಸಮಾಧಾ ನವನ್ನು ಪ್ರದರ್ಶಿಸುತ್ತೆ ಬಂದರು. ಆಗಲೂ ನಾನು ಅವರ ಮನಸ್ಸಿಗೆ ಬಹು ಕ್ಷೋಭೆಯ ನ್ನುಂಟುಮಾಡುವುದನ್ನು ಬಿಡಲಿಲ್ಲ. ನನಗೆ ಆಗ ಏನೋ ಅಜ್ಞಾನವು ಕವಿದುಕೊಂಡು ನನ್ನ ಪತಿಯು ನನ್ನನ್ನು ಎಷ್ಟು ತಿರಸ್ಕರಿಸಿದರೂ ಅದನ್ನು ಲಕ್ಷಿಸದೆ ಪ್ರತಿಭಟಿಸುವಂ ತಹ ಮೌರ್ಖ್ಯವು ಪ್ರಾಪ್ತವಾಗಿದ್ದಿತು. ನನ್ನ ಹುಚ್ಚಾಟವನ್ನು ಕಂಡು ನನ್ನ ಅಕ್ಕ----ಭಾವ ಮುಂತಾದವರಿಗೆಲ್ಲಾ ಒಂದು ವಿಧವಾದ ಹಾಸ್ಯಕ್ಕೆ ಕಾರಣವಾಯಿತು. ನನ್ನ ಅಕ್ಕನು ಮನೆಯಲ್ಲಿ ಹೇಗೆಹೇಗೆ ವರ್ತಿಸುವರೋ ನಾನು ಹುರುಡಿನಂತೆ ಅವರ ಕೆಲಸಗಳನ್ನು ಅನುಕರಣಮಾಡತೊಡ ಗಿದೆನು. ಈ ನನ್ನ ಆಟವನ್ನು ನೋಡಿ ಅಕ್ಕನಿಗೆ ಕೋಪಬಂದಿತು. ಅವರು ನನಗೆಷ್ಟೋ ನೀತಿಯನ್ನು ಪದೇಶಿಸಿದರು. ನನಗೆ ಒಂದೂ ಹಿಡಿಯಲೇ ಇಲ್ಲ. ಕ್ರಮ ಕ್ರಮವಾಗಿ ನನ್ನ ಅಕ್ಕನು ನನಗೆ ನೀತಿ ಹೇಳುವುದನ್ನು ಬಿಟ್ಟು ಬಿಟ್ಟರು. ಮತ್ತು ನನ್ನನ್ನು ಅಕ್ಷಿಸದೆ ಸಮಸ್ತವಾದ ಮನೆಗೆಲಸಗಳನ್ನೂ ತಾವೇ ನಿರ್ವಹಿಸುತ್ತ ಬಂದರು. ತಮ್ಮ ಮಗುವಿಗೆ ನೀರು ಹಾಕಬೇಕಾಗಿರಲಿ ತಾವೇ ಎರದು ಕೊಳ್ಳಬೇಕಾಗಲೀ ಯಾವುದಕ್ಕೂ ನನ್ನನ್ನು ಲಕ್ಷಿಸದೆ ಇನ್ನಾರಾದರೂ ಹೆಂಗಸರನ್ನು ಕರೆದು ಅವರ ಕೈಲಿಮಾಡಿಸುತ್ತಾ ಬಂದರು. ನನಗೆ ವಿಶೇಷ ಕೋಪಬಂದು ಕೆಲಸ ಮಾಡುವುದನ್ನು ಬಿಟ್ಟೇಬಿಟ್ಟು ಕಸೂತಿ ಹಾಕುವು ದಕ್ಕೆ ಆರಂಭಮಾಡಿದೆನು. ನಮ್ಮ ಯಜಮಾನರೂ ನನಗೆ ಹೀಗಿರುವುದು ಸುಯಲ್ಲ ವೆಂದು ವಿಧವಿಧವಾಗಿ ಬೋಧಿಸಿದರು. ನನಗೆ ಯಾವುದೂ ಮನಸ್ಸಿಗೆರುಚಿಸಲಿಲ್ಲ. ನಾನು ಈರೀತಿ ಮಂಕುಹಿಡಿದವಳಂತೆ ಆದುದನ್ನು ಕಂಡು ಮನೆಯವರೆಲ್ಲರೂ ನನ್ನ ವಿಷಯದಲ್ಲಿ ಬಹುವಾಗಿ ಅಸಮಾಧಾನಪಟ್ಟು ಕೊಳ್ಳುತ್ತಿದ್ದರು. ಹೀಗೆಯೇ ಮೂರು ತಿಂಗಳಾಯಿತು.

ಆತ್ರಮ್ಮನವರೂ ತಾತನವರೂ ಯಾತ್ರೆಯನ್ನು ಮುಗಿಸಿಕೊಂಡು ಊರಿಗೆ ಬಂದರು. ಮನೆಗೆ ಬಂದಮೇಲೆ ನಾವು ಓರಗಿತ್ತಿಯರಿಬ್ಬರೂ ಇರುವ ಸ್ಥಿತಿಯನ್ನು ಕಣ್ಣಾರ ನೋಡಿ ಕ್ರಮವಾದ ಸ್ಥಿತಿಯಲ್ಲಿರಬೇಕೆಂದು ಆಕ್ಷೇಪಿಸಲಾರಂಭಿಸಿದರು. ನಮ್ಮಿಬ್ಬರಿಗೂ ಗಂಡಂದಿರ ಬಲವಿರುವಾಗ ನಾವು ಅತ್ತೆಯ ಮಾತನ್ನೇಕೆ ಗಣಿಸಬೇಕೆಂಬ ಭಾವನೆಯು ಉತ್ಪನ್ನವಾದುದು. ಈ ಭಾವನೆಯು ನನ್ನ ಅಕ್ಕನ ಮನಸ್ಸಿನಲ್ಲಿದ್ದಿತೋ ಇಲ್ಲವೋ ನನಗೆ ತಿಳಿಯದು. ಇತರರ ವಿಷಯದಲ್ಲಿ ಸ್ವತಂತ್ರವಾಗಿ ಮಾತನಾಡುವಷ್ಟು ಶಕ್ತಿಯು ನನಗಿಲ್ಲ. ನಮ್ಮ ಅತ್ತೆಯು ನಮ್ಮ ವರ್ತನಗಳನ್ನು ಒಂದೆರಡು ತಿಂಗಳು ಕಾಲ ನೋಡಿದರು. ಹತೋಟಿಗೆ ಬರುವಂತೆ ತೋರಲಿಲ್ಲ. ಇನ್ನು ಹೀಗೆಯೇ ಒಟ್ಟಿಗೆ