ಪುಟ:ನನ್ನ ಸಂಸಾರ.djvu/೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


 ನನ್ನ ಸಂಸಾರ 29 vvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvv ಮಾಡಿಬಿಟ್ಟೆವು. ಆ ವಿಷಲತೆಯ ಜತೆಯಲ್ಲೇ ನನಗೆ ಪ್ರಾಪ್ತವಾಗಿದ್ದ ಹುರುಡು, ಅಜ್ಞಾನ, ಮೌರ್ಖ್ಯವೆಂಬ ಶತ್ರುತ್ರಯಗಳೂ ನಾಶವಾಗಿ ಹೋದುವು. ವಿಷಲತೆಯು ನಾಶವಾದ ಬಗೆಯನ್ನೂ, ಶತ್ರುತ್ರಯನಿರ್ಮೂಲನದ್ವಾರಾಶಾಂತಿಸ್ಥಾಪನೆಯಾದ ವಿಷಯವನ್ನೂ, ಈಗ ವಿಸ್ತಾರವಾಗಿ ವರ್ಣಿಸುತ್ತೇನೆ. ಪಾಠಕಿಯರು ಪಠಿಸಬೇಕು.

    ನಮ್ಮ ಭಾವನವರಿಗೆ 75 ರೂ || ತಲಬು ಬರುವುದೆಂಬುದನ್ನು ಹಿಂದೆಯೇ ತಿಳಿಸಿದೆ ಯಷ್ಟೆ ? ಮನೆಯ ವೆಚ್ಚಕ್ಕೆ ಮೂವತ್ತು ರೂಪಾಯಿಗಳು ಖರ್ಚಾದರೂ ಕಡಮೆ 45 ರೂಪಾಯಿಗಳು ಪ್ರತಿತಿಂಗಳೂಮಿಗುತ್ತಿತ್ತು.  ನಮ್ಮ ಭಾವನವರು ಹಣವನ್ನು ಸೇವಿಂಗ್ಸ್ ಬ್ಯಾಂಕಿನಲ್ಲಾಗಲೀ ಇತರ ವಿಧವಾದ ಬಡ್ಡಿಗಾಗಲೀ ಕೊಡುತ್ತಿರಲಿಲ್ಲ. ಈ ಕಾರಣದಿಂದ ಸಿಲುಕಾಗಿ ಉಳಿವ ಮೊಬಲಗನ್ನು ಪೆಟ್ಟಿಗೆಯಲ್ಲಿಟ್ಟು ಬೀಗವನ್ನು ಹಾಕಿ ಕೊಂಡು ಅದರ ಬೀಗದಕಯ್ಯನ್ನು ಹೆಂಡತಿ (ನಮ್ಮ ಅಕ್ಕ)ಗೆ ಮಾತ್ರ ತಿಳಿಯುವಂತೆ ರಹಸ್ಯವಾದೊಂದು ಪ್ರದೇಶದಲ್ಲಿ ಇಡುತ್ತಿದ್ದರಂತೆ ?  ಮತ್ತು ವಿಶೇಷವಾಗಿ ಹಣವೇ ನಾದರೂ ಖರ್ಚಾಗಬೇಕಾಗಿದ್ದರೆ ನಮ್ಮ  ಅಕ್ಕನಾಗಲೀ ಭಾವನವರಾಗಲೀ  ಪೆಟ್ಟಿಗೆ ಬಾಗಿಲು ತೆರೆದು ಆವಶ್ಯಕವಾದಷ್ಟು ಹಣವನ್ನು ತೆಗೆದುಕೊಂಡು ಅದನ್ನು ಲೆಖ್ಖಕೈ ಬರೆದುಕೊಂಡು ಬೀಗದಕಯ್ಯನ್ನು ನಿರ್ದಿಷ್ಟ ಸ್ಥಾನದಲ್ಲಿ ಇರಿಸುತ್ತಿದ್ದರಂತೆ ?  ಮತ್ತು ಆ ಪೆಟ್ಟಿಗೆಯನ್ನು ಇರಿಸಿರುವ ಚಿಕ್ಕ ಮನೆಯಲ್ಲಿ ಯಾವಾಗಲೂ ಯಾರಾದರೊಬ್ಬರು ನಮ್ಮ ಅಕ್ಕನ ಕಡೆಯವರಾಗಿ ಇರುತ್ತಲೇ ಇದ್ದರು. ಯಾರೂ ಇಲ್ಲದವೇಳೆಯಲ್ಲಿ ಚಿಕ್ಕ ಮನೆಗೆ ಬೀಗ ಹಾಕಿಕೊಂಡು ಹೋಗುವ ಪದ್ದತಿಯನ್ನಿಟ್ಟು ಕೊಂಡಿದ್ದರು.  ಈ ಕಾರಣದಿಂದ ನಮ್ಮ ಅಕ್ಕ, ಭಾವ, ಅವರಕಡೆ ಹುಡುಗರು  ವಿನಾ ಇತರರು ಅವರ ಕೊಠಡಿಗೆ ಪ್ರವೇಶಮಾಡಲಸಾಧ್ಯವಾಗಿದ್ದುದರಿಂದ  ಅವರ ಒಟ್ಟಿ, ಒಡವೆ,  ಹಣಗಳು ಸುರಕ್ಷಿತವಾಗಿಯೇ ಇರುತ್ತಿದ್ದವು.  ಇಂತಿರಲು ನಮ್ಮ ಅಕ್ಕನ ಮಗುವಿಗೆ  ವರುಷ ದಹೆಚ್ಚಿನದಿನವು ಬಂದಿತು.  ಆದಿನ  40-50 ಮಂದಿಗೆ  ಊಟಕ್ಕೆ ಹೇಳಿ ದಿವ್ಯವಾದ ಸಂತರ್ಪಣೆಯನ್ನು ಮಾಡಿಸಿದರು.  ಈ ಉತ್ಸವಕ್ಕಾಗಿ ಸುಮಾರು ಅವರು ಐವತ್ತು ರೂ ಪಾಯಿಗಳ ಮೇಲೆಯೇ ವೆಚ್ಚವನ್ನು ಮಾಡಿದರು.  ಆದಿನವೆಲ್ಲಾ ನಾನೂ ಅಕ್ಕನೂ ಬಂದವರ ಯೋಗಕ್ಷೇಮವನ್ನು ತೆಗೆದುಕೊಂಡು ಅವರನ್ನು ಆದರಿಸುವ ಸಡಗರದಲ್ಲೇ ಇದ್ದುಬಿಟ್ಟೆವು.  ಹಬ್ಬದ ದಿನ ರಾತ್ರಿ ಮಕ್ಕಳನ್ನು ಹಸೆಯ ಮೇಲೆ ಕೂರಿಸಿ ಆರತಿಯ ಕ್ಷತೆಯನ್ನು ಅಟ್ಟಹಾಸದಿಂದ ಮಾಡಿದರು.
      ಆದಿನವೂ ಕಳೆಯಿತು. ಕಾಲಕ್ಕೆ ಮಾತ್ರ ಅಹಂಕಾರವಿಲ್ಲ. ಸೋಮಾರಿತನವಿಲ್ಲದೆ ತನ್ನ ಕೆಲಸವನ್ನು ಅವಿಚ್ಛಿನ್ನವಾಗಿ ಮಾಡಿಕೊಂಡು ಹೋಗುತ್ತಿರುವುದು. ಕಾಲ