ಈ ಪುಟವನ್ನು ಪರಿಶೀಲಿಸಲಾಗಿದೆ
38 ಕಾದಂಬರಿ ಸಂಗ್ರಹ
ಮಾಡದಿದ್ದರೂ ನಮ್ಮಮೇಲೆ ಕೋಪಿಸಿಕೊಳ್ಳದಿರಲೆಂದು ಭಾವಿಸಿ ಸ್ತೋತ್ರ ಪಾಠಾಬ್ಯಾಸ ಮಾಡಲುಪಕ್ರಮಿಸಿರುವೆವು.
"ಎಚ್, ಮಾನುಷ ಫಲವರ್ಧಿನಿ ! ನಿನಗೆ ಬೇಗ ಬೇಗ ನಮಸ್ಕರಿಸುವೆವು, ಅದರಿಂದಲೇ ನೀನು ತಡೆಯಿಲ್ಲದೆ ನಮ್ಮ ಬೊಕ್ಕಸದಲ್ಲಿ ಕುಣಿದಾಡು. ದಡ್ಡನಿಗೂ ದೊಡ್ಡ-ದಾದ ಫಲವನ್ನು ಕೊಡುವ ದುಡ್ಡು ದೇವರೇ! ನಿನಗಿಂತಲೂ ದೊಡ್ಡದಾದ ದೇವರಿಲ್ಲವೇಇಲ್ಲ ! ಹೇ ಸರ್ವತೋಮುಖಿ ! ಸರಕಾರದ ಕೆಲಸಕ್ಕೆ ಸೇರಿದರೂ ಭೂಮಿಯ ವ್ಯವ ಸಾಯವನ್ನು ಮಾಡುತ್ತಿದ್ದರೂ ಕೈಗಾರಿಕೆಯನ್ನು ಕೈಗೊಂಡರೂ ವ್ಯಾಪಾರ ಮಾಡಲಾರಂಭಿಸಿದರೂ ಎಲ್ಲಾ ಕಡೆಯಲ್ಲೂ ನೀನು ಮುಖವನ್ನು ತೋರಿಸಿದ ಹೊರತು ನಿರ್ವಾಹವೇ ಇಲ್ಲ. ಎಲೌ ಧನದೇವತೆಯೇ ! ನಿನ್ನನ್ನು ಅಂಧಕಾರಾವೃತರಾಗಿಯೇ ಪೂಜಿಸುವೆವು, ಏಕೆಂದರೆ ಎಚ್ಚರದಿಂದ ನಮ್ಮ ಹಣವು ಸದ್ವಿನಿಯೋಗದಲ್ಲಿ ನಿಂತರೆ ನಾವು ರಿಕ್ತ ಹಸ್ತರಾಗಿ ಜನರ ಅವಹೇಳನಕ್ಕೆ ಗುರಿಯಾಗುವೆವು. ಹೇ ತಿರಸ್ಕಾರ ವಿಮುಖಿ ! ನಿನ್ನನ್ನು ತಿರಸ್ಕರಿಸಿದುದರಿಂದಲೇ ಬಲಿ-ಹರಿಶ್ಚಂದ್ರ-ಕರ್ಣ-ಧರ್ಮಾದಿಗಳು ತಾವೇ ನಷ್ಟ ಪಟ್ಟರು. ಹೇ ? ಉಲ್ಲಾಸಿನೀ, "ಷರಟಿನ ” ಜೇಬಿನಲ್ಲಿ ಎರಡು ರೂಪಾಯಿಗಳು ಇದ್ದ ಮಾತ್ರ ದಿಂದಲೇ ಅಲ್ಲಾಡಿಸುವ ಉಲ್ಲಾಸವನ್ನು ಕೊಡುವ ಶಕ್ತಿಯು ನಿನ್ನದೇ ಆಗಿರುವುದು. ಹೇ ! ಮಂದಗಾಮಿನಿ ! ಅತ್ಯಾಶೆಯಿಂದ ನಿನ್ನನ್ಯಾಶಿಸುವವರ ಬಳಿಗೆ ಬರಲು ನೀನೇಕೆ ಮಂದಳಾದೆ? ಹೇ ಶೀಘ್ರಗಾಮಿನಿ!! ಒಬ್ಬರ ಬಳಿಯಿಂದ ಮತ್ತೊಬ್ಬರ ಬಳಿಗೆ ಅನ್ಯಾಯದಿಂದ, ವಿವೇಚನೆಯಿಲ್ಲದೆ ಹೋಗಿ ಸೇರಲು ನಿನ್ನ ನಡಿಗೆಯು ಎಷ್ಟು ಚುರು ಕಾಗಿರುವುದು. ಎಲೌ ಸರ್ವವ್ಯಾಪಿನಿಯೇ ! ಭೂಮಿಯಮೇಲೆ ಧನಾದಿರೂಪದಿಂದಲೂ .ಒಳಗಡೆ ಲೋಹಾದಿರೂಪದಿಂದಲೂ ಹರಡಿರುವ ನಿನ್ನ ವ್ಯಾಪಕತೆಯು ಸರ್ವೋತ್ಕೃಷ್ಟ ವಾಗಿರುವುದು. ಹೇ ಅಜ್ಞಾನತಿಮಿರಬಹುಳಪಕ್ಷೆಯೆ ! ಅವಿವೇಕಿಯಾದ ಧನಿಕನಲ್ಲಿ ಎಂತಹ ಅಂಧಕಾರವನ್ನು ಅನುಗ್ರಹಿಸುವೆ? ಹೇ ಸರ್ವಸಮದೃಷ್ಟಿಯುಳ್ಳವಳೆ ! ಹಾಲುಮಾರುವವಳಲ್ಲಿಯೂ ಹೆಂಡಮಾರುವವನಲ್ಲಿಯೂ ನೀನು ಎಂತಹ ಸರ್ವಸಮತ್ವ ವನ್ನು ವ್ಯಕ್ತಗೊಳಿಸುತ್ತಿರುವೆಯೆಂಬುದು ಪರಮಾಶ್ಚರ್ಯಕರವಾಗಿರುವುದು, ಹೇ! ದಾರಿ ದ್ರಾಂಬುಧಿತರಣಿ ! ಭವರೋಗಭಿಷಜೆ ! ಪ್ರಾಣದಾಯಿನಿ !! ಪ್ರಾಣಾಪಹಾರಿಣಿ !! ಪ್ರತಿಷ್ಠಾಪ್ರದಾಯಿನಿ !! ಮಹಾಪರಾಧಗೋಪನೆ!! ಪೌರುಷಪ್ರಕಾಶೆ !! ಜನ ವಶೀಕರೆ!! ಮಿಥ್ಯಾಸ್ತುತಿ: ಫಲಪ್ರದಾಯಿನಿ !! ಅಜ್ಞಾನಾಂಧಕಾರ ಕೂಪಪತನ ಸಾಹಯ್ಯೆ!! ಸ್ವೇತರ ದೈವಜ್ಞಾನವಿನಾಶಿನೀ !! ಅನ್ಯಾಯಾರ್ಚಿತಜನಪಕ್ಷಪಾತೆ !! ಜಯ! ವಿಜಯ!! ನಿನ್ನ ಅದ್ಭುತ ಮಹಿಮೆಯನ್ನಾರು ವರ್ಜಿಸಲಾಪರು. ಹೇ ನ್ಯಾಯೋಲ್ಲಂಘನ ಶಿಕ್ಷಣ