ಪುಟ:ನನ್ನ ಸಂಸಾರ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44

                        ಕಾದಂಬರಿ ಸಂಗ್ರಹ

ಬೆಂಕಿ ಹಚ್ಚಿಕೊಂಡು ಜ್ವಾಲೆಯು ಸರ್ವತ್ರವ್ಯಾಪಿಸಿದಾಗ ಪಶ್ಚಾತ್ತಾಪ ಪಡುವರಂತೆ ನಿನ್ನ ತಾಯಿಯ ಸ್ಥಿತಿಯಾಯಿತು. ನೀನು ಇದನ್ನೆಲ್ಲಾ ಮನಸ್ಸಿನಲ್ಲಿ ಚೆನ್ನಾಗಿ ಆಲೋಚಿಸು, ಇನ್ನು ಮುಂದಾದರೂ ನಿನ್ನ ಎಚ್ಚರಿಕೆಯಲ್ಲಿ ನೀನಿರು, ನೀನು ಈಗ ಕಳೆದುಕೊಂಡ ಹಣವು ನೀತಿಬೋಧೆಗಾಗಿ ಗುರುಗಳಿಗೆ ಕೊಟ್ಟ ದಕ್ಷಿಣೆಯೆಂದು ತಿಳಿದುಕೊ, ಈಗ ಹಣ ಹೋದ ವಿಚಾರವು ನಡೆಯದಿದ್ದರೆ ಇಷ್ಟು ಸಂಘಟನೆಗಳು ಉಂಟಾಗುತ್ತಿರಲಿಲ್ಲ. ನಿನಗೆ ಚೆನ್ನಾಗಿ ಬುದ್ದಿಯೂ ಬರುತ್ತಿರಲಿಲ್ಲ, ನಿನ್ನ ತಂದೆ ತಾಯಿಗಳ ಹಿತೋಪದೇಶವು ಹೀಗೆಯೇ ಬೆಳೆದು ನಮ್ಮಿಬ್ಬರನ್ನೂ ಬಹುಕಷ್ಟಕ್ಕೆ ಗುರಿಮಾಡುತ್ತಿದ್ದಿತು. ಈಗ ನಾನು ಮಾಡಿದ ಉಪದೇಶವೂ ನಿನಗೆ ಲಭಿಸುತ್ತಿರಲಿಲ್ಲ. ಪ್ರಿಯೆ! ಭಾವಿಸು! ಚನ್ನಾಗಿ ಯೋಚಿಸು.! ಈಗ ನಿನಗೆ ಅಕಸ್ಮಾತ್ತಾಗಿ ಪ್ರಾಪ್ತವಾದ ಅಪಮಾನವು ನಿನ್ನ ಭವಿಷ್ಯ ತುಖಾಭಿವೃದ್ಧಿಗೆ ಹೌದೋ ಅಲ್ಲವೋ ಹೇಳು. ಇನ್ನೂ ಕೇಳು, ಲೋಕದಲ್ಲಿ ಕೆಲವು ಮಂದಿ ಮೂರ್ಖಸ್ತ್ರೀಯರು ತಮ್ಮ ಗಂಡಂದಿರನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಉಪಾಯವನ್ನು ಹುಡುಕುತ್ತಾರೆ. ಇಂತಹ ಸ್ತ್ರೀಯರಿಗೆ ತಕ್ಕ ಉಪದೇಶಕರೂ ಸಿಕ್ಕುತ್ತಾರೆ. ಪಂಚಾಕ್ಷರೀಪುರಶ್ಚರಣೆ, ತಾಯತೀ, ಭಸ್ಮವೇ, ಮುಂತಾದ ಔಷಧಪ್ರ ಯೋಗ, ಹಸುರು ಹಾಕುವುದು, ಇಂತಹ ಕಪಟಮಾಯಾ ವಿದ್ಯೆಯನ್ನು ಆ ಉಪದೇಶ ಕರಾದ-ಮೋಸಗಾರರಾದ-ನೀಚಸ್ತ್ರೀಯರು ಮುಗ್ಧೆಯರಾದ ಹೆಣ್ಣು ಮಕ್ಕಳಿಗೆ ಕಲಿಸಿ ಬಿಡುತ್ತಾರೆ. ಇದರಿಂದ ಶ್ರಮಪಟ್ಟು ಸಂಪಾದಿಸಿದ ದ್ರವ್ಯವು ವ್ಯಯವಾಗಿ ಆ ದುಷ್ಟ ಹೆಂಗಸರ ದುರ್ಬೋಧನೆಯಿಂದ ಆ ಸ್ತ್ರೀಯರ ಮರ್ಯಾದೆಯೂ ಉಳಿಯುವುದಿಲ್ಲ. ಸ್ತ್ರೀಯರು ಇವರ ಹೇಳಿಕೆಯಂತೆ ಅನೇಕ ಅಧರ್ಮದ ಕೆಲಸಗಳನ್ನು ಮಾಡಿ ಜನರಲ್ಲಿ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ಇದರ ಫಲಿತಾರ್ಥವು ಇಷ್ಟರಿಂದಲೇ ಕೊನೆ ಗಾಣುವುದಿಲ್ಲ. ಈ ಮೋಸಗಾರರು ತಮ್ಮ ಮಾತು, ನಿಜವೆಂದು ತೋರ್ಪಡಿಸಿಕೊಳ್ಳಲಿಕ್ಕಾಗಿ, ಈ ಔಷಧವನ್ನು ಇಂತಹ ವೇಳೆಯಲ್ಲಿ ಈ ವಿಧದಲ್ಲಿ ನಿನ್ನ ಗಂಡನಿಗೆ ಏನಾ ದರೂ ರುಚಿಯಾದ ತಿಂಡಿಯಲ್ಲಿ ಬೆರಸಿಕೊಡು, ಇದರಿಂದ ನೀನು ಹೇಳಿದಂತೆ ಅವನು ನಡೆಯುತ್ತಾನೆಂದು ಹೇಳಿ, ಏನೋ ಒಂದು, ಕಲ್ಲೋ, ಮಣೋ, ಬೂದಿಯೋ, ಹಸರು ಸಪ್ಪೋ-ಏನಾದರೊಂದನ್ನು ಕೊಟ್ಟುಬಿಡುತ್ತಾರೆ. ಬುದ್ದಿಹೀನರಾದ ಹೆಂಗಸರು ಆ ಉಪದೇಶಕ್ಕೆ ಮರುಳಾಗಿ ಆ ಔಷಧಗಳನ್ನು ತಮ್ಮ ಗಂಡಂದಿರಿಗೆ ಯಾವಾಗಲಾದರೂ ತಿನ್ನಿಸಿಬಿಡುತ್ತಾರೆ. ಆ ಔಷಧಗಳ ಸ್ವಭಾವವನ್ನು ಪರೀಕ್ಷಿಸುವಷ್ಟು ಬುದ್ಧಿ ಇವರಿಗಿರುವುದಿಲ್ಲ, ಇವುಗಳಲ್ಲಿ, ತಾಮ್ರ, ಪಾದರಸ, ಪಾಷಾಣ, ಮುಂತಾದ ಅಪಕ್ವ ಭಸ್ಮಗಳೂ ಅಪಾಯಕರಗಳಾದ-ಬುದ್ದಿಯನ್ನು ಕೆಡಿಸಿಬಿಡುವ-ದೀರ್ಘರೋಗಿಗಳ