ಪುಟ:ನನ್ನ ಸಂಸಾರ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನನ್ನ ಸಂಸಾರ 43 AAAAAAAAAAAAAAAAAAAAAAAAAAAAAAAAAAAAAAAAAAA

ಸ್ಸಿನಲ್ಲಿ ಹರ್ಷಾಶ್ಚರ್ಯ ವ್ಯಸನಗಳು ಸಂಮಿಳಿತವಾಗಿದ್ದುವು. ನಾನು ನಮ್ಮ ಯಜಮಾನರನ್ನು ಬಹು ವಿಧವಾಗಿ ಪ್ರಾರ್ಥಿಸಿದೆನು .ಪತಿಗೆ ವಂಚನೆಮಾಡಿ ಆತನ ಮನಸ್ಸಿಗೆ ಬೇಸರ ಪಡಿಸಿದವಳು ಬದುಕಿರುವುದಕ್ಕಿಂತಲೂ ಸಾಯುವುದುಮೇಲೆಂದು ಅವರೊಡನೆ ಹೇಳಿ ಮಗುವನ್ನು ಎರಡುಬಾರಿ ಮುದ್ದಿಸಿ ನಮ್ಮ ಸ್ವಾಮಿಯ ಪಾದಗಳಿಗೆ ನಮಸ್ಕರಿಸಿ ನಾನು ಮನಸ್ಸಿನಲ್ಲಿ ಮಾಡಿಕೊಂಡಿದ್ದ ವಿಷಯವನ್ನು ಅವರೊಡನೆ ವಿಜ್ಞಾಪಿಸಿಕೊಂಡೆನು. ಆಗ ಯಜಮಾನರು ಚಕಿತರಾಗಿ ನನ್ನನ್ನೇ ದಿಟ್ಟಿಸಿನೋಡುತ್ತಾ ನನ್ನೆರಡು ಕೈಗಳನ್ನೂ ಹಿಡಿದೆಳೆದು ತಮ್ಮ ಹತ್ತಿರದಲ್ಲಿ ಕುಳ್ಳಿರಿಸಿಕೊಂಡು ಇಂತು ಉಪದೇಶಿಸಲಾರಂಭಿಸಿದರು.

 ಮುಗ್ದೆ !

ನಿನಗಿನ್ನೂ ಪ್ರಾಪಂಚಿಕ ವ್ಯವಹಾರಜ್ಞಾನವೂ ಗೃಹಿಣಿಯ ವೃತ್ತವೂ ಚೆನ್ನಾಗಿ ತಿಳಿದಿಲ್ಲ, ಈಗ ನಮ್ಮ ಮನೆಯಲ್ಲಿ ಸಂಘಟಿಸಿರುವ ಹಣದ ವಿಷಯವು ನಿನ್ನನ್ನು ಒಳ್ಳೆಯ ಗೃಹಿಣಿಯನ್ನಾಗಿ ಮಾಡಲು ನಡೆದಂತೆಯೇ ಭಾವಿಸುತ್ತೇನೆ. ನಿನ್ನ ಮನಸಿನಲಿ, ನನ್ನ ಹಣವೂ ಹೋಗಿ ನಿಷ್ಕಾರಣಾವಾದಕ್ಕೂ ಪಾತ್ರಳಾಗಬೇಕಾಗಿ ಬಂದಿ ತಲ್ಲಾ ಎಂಬ ಯೋಚನೆಯು ಪ್ರಬಲವಾಗಿರಬಹುದು. ಹಣ ಹೋದರೆ ಹೋಗಲಿ. ಅದಕ್ಯಾಗಿ ನೀನು ಚಿಂತಿಸಬೇಡ, ನಿಮ್ಮ ತಾಯಿಯನ್ನು ಕೇಳಿದಾಗ ನೀನು ನಿರಪರಾಧಿನಿ ಯೆಂದು ನನಗೆ ಗೊತ್ತಾದುದು, ಇಷ್ಟು ಅನರ್ಥಗಳಿಗೂ ಮೂಲಕಾರಣರು ನಿಮ್ಮ ತಾಯಿ ತಂದೆಗಳೆಂದು ಭಾವಿಸಿಕೊ, ನಿಮ್ಮ ತಾಯಿಯು ನಿನ್ನಲ್ಲಿ ಹಣವನ್ನು ಕೊಡು ವಾಗ ನಿಮ್ಮ ಯಜಮಾನರಿಗೆ ಈ ವಿಷಯವನ್ನು ತಿಳಿಸಬೇಕೆಂದು ಹೇಳದೆ ಇದ್ದುದು ಅವರ ಮುಖ್ಯ ತಪ್ಪು. ನಿನಗಾದರೂ ಗೃ ವಂದಾಗಿ ಆ ವಿಚಾರವನ್ನು ನನ್ನೊಡನೆ ತಿಳಿಸದಿದ್ದುದು ನಿನ್ನ ತಂವು ನಮ್ಮ ಮನೆಯಲ್ಲಿ ಹಣ ಹೋಯಿತೆಂದು ಚರ್ಚೆಬಿದ್ದಾಗ ಲಾಗಲೀ ಪೆಟ್ಟಿಗೆಗಳನ್ನು ಶೋಧಿಸಬೇಕೆಂಬ ವಿಚಾರ ಬಂದಾಗಲಾಗಲೀ ನೀನು ಈ ಎಷ ಯವನ್ನು ಯಾರೊಡನೆಯೂ ಹೇಳದೇಹೋದೆ. ಹೀಗೆ ಹೇಳದಿರುವುದರ ಕಾರಣವನ್ನು ನಾನುಬಲ್ಲೆ .ನಿನ್ನ ಭೀರುಸ್ವಭಾವವೂ, ಮಾತೃರಹಸ್ಯಪದೇಶಮಂತ್ರವೂ, ಅವಿವೇ ಕವೂ ಸಿನಗೆ ಆಗ ಅಜ್ಞಾನವನ್ನು ತಂದಿಟ್ಟಿತು. ಲೋಕದಲ್ಲಿ ತಂದೆ ತಾಯಿಗಳು ಹೆಣ್ಣು ಮಕ್ಕಳಿಗೆ, ಪತಿಸೇವಾ ಧರ್ಮವನ್ನು ತಿಳಿಯಿಸದೆ, ಆತನ ಮನಸ್ಸನ್ನು ಪ್ರಸನ್ನ ವಾ ಗಿರುವಂತೆ ಇಡಲು ತಕ್ಕಂತೆ ಉಪದೇಶಿಸದೆ ನಿನ್ನ ತಂದೆತಾಯಿಗಳಂತೆ ಇಂತಹ ಮನೆ ಪಾಳು ರಹಸ್ಯಗಳನ್ನೂ ಮಕ್ಕಳುಗಳಿಗೆ ಹಠಮಾರಿತನವನ್ನೂ ಒಡವೆಗಾಗಿ ಗಂಡನನ್ನು ನೀಡಿಸಬೇಕೆಂಬುದನ್ನು, ಇನ್ನೊಬ್ಬರನ್ನು ನೋಡಿ ಕುರುಡು ಹತ್ತಬೇಕೆಂಬುದನ್ನು ಊಹ ದೇಶಿಸಿದರೆ ಲೋಕದಲ್ಲಿ ಯಾವ ಸಂಸಾರವೂ ನೆಟ್ಟಗಾಗಲಾರದು .ತನ್ನ ಮನೆಗೆ ತಾನೇ