ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
42
ಕಾದಂಬರೀ ಸಂಗ್ರಹ

ನವರಿಗೆ ಜುಲ್ಮಾನೆಯಾಗಿ ಕೊಟ್ಟಂತೆ ಭಾವಿಸಿಕೊ. ಇನ್ನು ಮೇಲಾದರೂ ಹಠಮಾರಿತನವನ್ನೂ, ಹುರುಡನ್ನೂ, ಮೌಗ್ದ್ಯವನ್ನೂ, ಪರಿತ್ಯಜಿಸು. ನಾನು ನಾಳೆಯದಿನ ಸಾಯಂಕಾಲ ಅಲ್ಲಿಗೆ ಬರುತ್ತೇನೆ.

ರಂಗಪುರಿ,
ಇತ್ಯಾಶಿಷಃ
16-1-17.
H. V. SASTRY.

ಕಾಗದವನ್ನು ನೋಡಿ ನನಗೆ ಬಹು ಸಂತೋಷವಾಯಿತು. ಮತ್ತು ನಾನು ವೃಥಾಪವಾದ ಗ್ರಸ್ತಳಾಗಿ ನನ್ನ ಯಜಮಾನರ ಅಹಿತಕ್ಕೆ ಪಾತ್ರಳಾಗಿದ್ದುದಕ್ಕೆ ತಕ್ಕ ಪ್ರಾಯಶ್ಚಿತ್ತಕಾಗಿ "ಉಧ್ಯಂಧನಂವಾ ವಿಷಭಕ್ಷಣಂವಾ ಕೃತ್ವಾಮರಿಷ್ಯೆ" ಎಂದು ನಿಶ್ಚಯಮಾಡಿಕೊಂಡೆನು. ಯಾವ ಸ್ತ್ರೀಯು ತನ್ನ ಪತಿಯ ವಿಷಯದಲ್ಲಿ ದ್ರೋಹಮಾಡುವಳೋ ಅಂಥವಳು ಜನ್ನಿಸಿದ್ದರೂ ವ್ಯರ್ಥ. ನಾನು ನನ್ನಲ್ಲಿದ್ದ ಹಣದ ವಿಷಯವನ್ನು ನನ್ನ ಯಜಮಾನರಿಗೆ ತಿಳಿಸದಿದುದು ಮಹಾ ಪಾಪಕರವಾದ ಕಾರ್ಯವಾದಾಗ್ಯೂ, ನನ್ನ ನೈಜಗುಣವೂ, ಭೀರುಭಾವವೂ, ನಿರಪರಾಧಿತ್ವವೂ ಸ್ಥಾಪಿತವಾದ ಮೇಲೆ ನಾನು ಹರ್ಷಾಕಾಂತಳೇನೋ ಆದೆನು, ಆದರೆ ಕಿಂಚಿತ್ಕಾಲ ನನ್ನ ಯಜಮಾನರ ಮನಸ್ಸಿನಲ್ಲಿ ಮಹಾ ಸಂಕಟವನ್ನು ತಂದಿಟ್ಟಿದ್ದ. ನಾನು ಇನ್ನು ಬದುಕಿ ಏನು ಪ್ರಯೋಜನ. ಆದುದರಿಂದ ಹೇಗಾದರೂ ಈ ಪ್ರಾರ್ಥಿವ ದೇಹವನ್ನು ಪಂಚಭೂತಗಳಲ್ಲಿ ಐಕ್ಯ ಮಾಡುವುದೇ ಸರಿಯೆಂದು ನಿರ್ಧರಿಸಿದೆನು. ಆದರೂ ಈವರ್ತಮಾನವನ್ನು ಅವರ ಪಾದತಲದಲ್ಲಿ ಸಮರ್ಪಿಸಿ, ಜಲಪತನ ಮಾಡಬೇಕೆಂದು ನಿಶ್ಚಯಿಸಿಕೊಂಡೆನು. ನಮ್ಮ ಭಾವನವರಾದರೂ ನಮ್ಮ ಯಜಮಾನರ ಕಾಗದವನ್ನು ನೋಡಿ ಹೆಂಡತಿಯೊಡನೆ ಏನೋ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಅದೇನೆಂದು ನನಗೆ ಅರ್ಧವಾಗಲಿಲ್ಲ. ಆದರೂ ಕಷ್ಟದಿಂದಲೂಹಿಸಿನೋಡಲು, ಅಪರಾಧಿಯಾದ ಹೆಂಡತಿಯ ಗುಣವನ್ನು ಮುಚ್ಚಿಬಿಡುವದಕ್ಕಾಗಿ ಈ ಆಟವನ್ನು ಹೂಡಿದ್ದಾನೆಂದು ನಮ್ಮ ಭಾವನವರು ತಮ್ಮನ ವಿಷಯದಲ್ಲಿ ನಿಷ್ಕರ್ಷಿಸಿರುವರೆಂದು ತಿಳಿದು ಬಂದಿತು. ಏನಾದರೂ ಆಗಲಿ. ಹೇಗಾದರೂ ಹೋಗಲಿ. ಇತರರು ಏನು ಬೇಕಾದರೂ ಊಹಿಸಿಕೊಳ್ಳಲಿ. ನನ್ನ ಯಜಮಾನರು ನನ್ನ ವಿಷಯದಲ್ಲಿ ನಿಷ್ಕಳಂಕರಾಗಿರುವುದೊಂದೇ ನನಗೆ ಮುಖ್ಯವಾಗಿಬೇಕಾದುದು.

ಮಾರನೆಯದಿನ ಪ್ರಾತಃಕಾಲ ನಮ್ಮ ಯಜಮಾನರೂ ಬಂದರು. ನನ್ನನ್ನು ವಿಶೇಷವಾಗಿ ತಿರಸ್ಕರಿಸಿದುದಕ್ಕಾಗಿ ಕ್ಷಮೆ ಬೇಡಲು ನನ್ನ ಬಳಿಗೆ ಬಂದರು. ನನಗೆ ಆಗ ಮನ