ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನನ್ನ ಸಂಸಾರ 51 ^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^

   ವಾಗಿರುವುದಕ್ಕೆ ಓರಗಿತ್ತಿಯರಿಬ್ಬರ ಅನ್ಯೋನ್ಯಾಸಹನಗಳೇ ವಿನಾ ಬೇರೆ 
  ಕಾರಣವಿರದು. ಇದನ್ನು ಹೀಗೆಯೇ ಸರಿಮಾಡಿಕೊಂಡು ನಾವು ಒಂದೇ 
  ಸಂಸಾರದಲ್ಲಿದ್ದು ಬಿಟ್ಟರೆ ಇತೋಪ್ಯಧಿಕವಾದ ದ್ವೇಷಾಸೂಯೆಗಳು ನಮ್ಮಿಬ್ಬರಿಗೂ 
  ಉಂಟಾಗಿ ಅನರ್ಥವುಂಟಾಗಲು ಕಾರಣವಾಗಬಹುದಾದುದರಿಂದ, ನಾನು ಈ ದಿನ 
  ಈ ಸಂಸಾರದಲ್ಲಿ ಹುಟ್ಟಿದ ಈ ವಿಷಬೀಜನ್ನು ನಾಶಮಾಡುವುದಕ್ಕಾಗಿ ಬೇರೆ ಕಡೆಗೆ 
  ಹೊರಟುಹೋಗುತ್ತೇನೆ. ನಮ್ಮಿಬ್ಬರ ಪ್ರೀತಿಗಳು ಪೂರ್ವದಂತೆಯೇ ಇರಲಿ. ನಮ್ಮ 
  ಸಂಸಾರದಲ್ಲಿ ಶಾಂತಿಯುನೆಲಸಲಿ.                                    

ಅಣ್ಣ___(ಎಲ್ಲವನ್ನೂ ನಿದಾನವಾಗಿ ಕೇಳಿ ತಲೆದೂಗುತ್ತಾ) ನಿನ್ನ ಮನಸ್ಸುಬಂದಂತೆ

  ಮಾಡುವುದರಲ್ಲಿ ಆರ ಆತಂಕವೂ ಇಲ್ಲ.
    ಈ ರೀತಿ ಸಂಭಾಷಣೆಗಳು ನಡದಬಳಿಕ ನಮ್ಮ ಭಾವನವರು ತಮ್ಮ ಚಿಕ್ಕಮನೆಗೆ ಹೊರಟು ಹೋದರು. ನಮ್ಮ ಯಜಮಾನರೂ ಕೂಡಲೆ ತಾವೂ ಹೊರಕ್ಕೆಹೋಗಿ ಒಂದು ಗಾಡಿಯನ್ನು ಮಾಡಿಕೊಂಡು ಸ್ವಲ್ಪಹೊತ್ತಿನಲ್ಲೇ ನಮ್ಮ ಮನೆಯ ತಲೆಬಾಗಿಲಿನಲ್ಲಿ ತಂದು ನಿಲ್ಲಿಸಿದರು. ಮಿತವಾಗಿ ಗೃಹಕೃತ್ಯಕ್ಕೆ ಬೇಕಾಗುವ ಪಾತ್ರೆಪದಾರ್ಥಗಳನ್ನು ಗಾಡಿಯಲ್ಲಿರಿಸಿ ನನ್ನನ್ನು ಬಂದು ಕುಳಿತುಕೊಳ್ಳುವಂತೆ ಹೇಳಿದರು. ಮೇಲಿನ ಸಂಭಾಷಣೆಗಳನ್ನೂ ಈ ವಿಧವಾದ ಪರಿವರ್ತನವನ್ನೂ ನೋಡಿ ನಾನು ವಿಸ್ಮಯದಿಂದ ತಲೆದೂಗುತ್ತ, ಭಾವನವರಿಗೂ, ಅಕ್ಕನವರಿಗೂ ನಮಸ್ಕರಿಸಿ ಗಾಡಿಯಮೇಲೆ ಹೋಗಿ ಕುಳಿತುಕೊಂಡೆನು. ನಮ್ಮ ಯಜಮಾನರೂ ಅಂತೆಯೇ ಅಣ್ಣ ಅತ್ತಿಗೆಯರುಗಳಿಗೆ ನಮಸ್ಕರಿಸಿ ಗಾಡಿಯಮೇಲೆ ಕುಳಿತು ಬಂಡಿಯನ್ನು ರಂಗಪುರಕ್ಕೆ ಹೊಡೆಯುವಂತೆ ಹೇಳಿದರು. ರಂಗಪುರಕ್ಕೆ, ಎಂಬ ಮಾತನ್ನು ಕೇಳಿ ನನಗೆ ಬಹು ಹರ್ಷಾಶ್ಚರ್ಯಗಳುಂಟಾಗಿ ಇದೇನು? ಈಗ ರಂಗಪುರಕ್ಕೆ ಏಕೆ ಹೋಗಬೇಕೆಂದು ಕೇಳಿದೆನು. ಅದಕ್ಕೆ ಅವರು, ನಿಮ್ಮ ತಾಯಿಯವರನ್ನು ಮೊನ್ನೆ ನೋಡಲಿಕ್ಕೆ ಹೋಗಿದ್ದಾಗ ಅವರು ನವಮಾಸಗರ್ಭವತಿಯರೆಂದೂ ಅನನ್ಯ ಸಹಾಯರಾಗಿರುವರೆಂದೂ ತಿಳಿದು ನಾನು ನನ್ನಿಂದ ಸಹಾಯವೇನಾಗಬೇಕೆಂದು ಕೇಳಲು ನಮ್ಮ ಸೌ || ಮಹಾಲಕ್ಷ್ಮಿಯನ್ನು ಮೂರುತಿಂಗಳುಮಟ್ಟಿಗೆ ಕಳುಹಿಸಿಕೊಟ್ಟಿ ದ್ದರೆ ಬಹಳ ಉಪಕಾರವಾಗುವುದೆಂದು ಹೇಳಿದ್ದರು. ನಾನು ಅದಕ್ಕೆ, ನೋಡೋಣ_ ಎಂದು ಹೇಳಿ ಬಂದಿದ್ದೆನು. ಅವರ ಸಹಾಯಾರ್ಥವಾಗಿಯೂ ನಿನ್ನ ಮನಸ್ಸಮಾಧಾನ ಕ್ಕಾಗಿಯೂ ನಿನ್ನನ್ನು ಈಗ ರಂಗಪುರಕ್ಕೆ ಕರೆದುಕೊಂಡು ಹೋಗುತ್ತಿದೇನೆ. ಎಂದು ಹೇಳಲು ನನಗೆ ಆಗ ಪರಮಾವಧಿಸಂತೋಷವುಂಟಾಯಿತು. ನನ್ನ ತಾಯಿಯನ್ನು ನೋಡಿ ನಾನು ವರ್ಷವಾಗಿ ಹೋಗಿದ್ದಿತು. ಇಂದು ನಾನು ತಂದೆತಾಯಿಗಳನ್ನು ನೋಡುವ