ಪುಟ:ನನ್ನ ಸಂಸಾರ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

54 ಕಾದಂಬರಿ ಸಂಗ್ರಹ

ದ್ದಳು. ಆದರೆ ನಮ್ಮ ಮನೆಯಲ್ಲಿ ಮಾತ್ರ ನಿಸ್ಪೃಹಳಂತೆ ತೋರ್ಪಡಿಸಿ ಕೊಳ್ಳುತಿದ್ದಳು. ಇವಳನ್ನು ಕಂಡರೆ ನಮ್ಮ ಅಕ್ಕನವರಿಗೆ ಬಹುಪ್ರೀತಿ, ಗುಟ್ಟಾಗಿ ಅವಳ ಕೈಲಿ ದುಡ್ಡು ಕೊಟ್ಟು ಆಗಾಗ್ಗೆ ತಮಗೆ ಬೇಕಾದ ತಿಂಡಿಯನ್ನು ಮಾಡಿಸಿಕೊಳ್ಳುತ್ತಿದ್ದರು. ಆ ಮುದು ಕಿಯ ಅಣ್ಣನ ಭಾವಮೈದುನ ಮಗ 10 ವರ್ಷ ವಯಸ್ಸುಳ್ಳ ಚಂಡಕೇಶವನೆಂಬ ಒಬ್ಬ ಹುಡುಗನು ಅನಾಥನಾಗಿ ಬಂದು ಈ ಮುದುಕಿಯ ಮನೆಯಲ್ಲಿ ಸೇರಿಕೊಂಡಿದ್ದನು. ಅವನ ವಿದ್ಯಾಭ್ಯಾಸದ ವಿಚಾರವನ್ನು ಈ ಮುದುಕಿಯು ವಹಿಸಿಕೊಂಡಿದ್ದಳು. ಈ ಹುಡುಗನು ನಮ್ಮ ಮನೆ ಮಕ್ಕಳೊಡನೆ ಸೇರಿಕೊಂಡು ಆಟವನ್ನು ಆಡುತಿದ್ದನು. ಅಲ್ಲದೆ ನಮ್ಮ ಅಕ್ಕನು ತಮ್ಮ ಚಿಕ್ಕ ಮನೆಯ ಕಾವಲಿಗೆ ತಾವು ಮನೆಯಲ್ಲಿಲ್ಲದಾಗ ಈ ಹುಡು ಗನನ್ನು ನೇಮಿಸುತ್ತಿದ್ದರು. ಹುಡುಗನೂ ನಂಬಿಕೆಯಾಗಿಯೇ ಇದ್ದನು. ಮುದುಕಿಯು ಆ ಹುಡುಗನನ್ನು ಒಳ್ಳೆಯ ಶಿಕ್ಷೆಯಲ್ಲಿಟ್ಟುಕೊಂಡಿದ್ದಳು. ನಮ್ಮ ಮನೆಯಲ್ಲಿ ಹಣ ಹೋಗಿ ನನ್ನ ಮೇಲೆ ಕಳ್ಳತನವು ಆರೋಪಿತವಾದಾಗ ಆ ಮುದುಕಿಯ ಆ ಹುಡು ಗನೂ ಅಲ್ಲಿಯೇ ಇದ್ದರು. ನಮ್ಮ ಮನೆಯಲ್ಲಿ ಆಗ ನಡೆದ ವೃತ್ತಾಂತವೆಲ್ಲಾ ಆ ಮುದು ಕಿಗೆ ಚೆನ್ನಾಗಿ ಗೊತ್ತಾಗಿ ಅವಳು ಅದೇ ಸಮಯವೆಂದು ನನ್ನ ಮೇಲೆ ಅನೇಕಕ್ಷುದ್ರ ಗಳನ್ನು ಹೇಳಿಬಿಟ್ಟಿದ್ದಳು. ಇದೇಕಾರಣದಿಂದಲೇ ನಮ್ಮ ಭಾವನವರು ನಮ್ಮ ಯಜಮಾ ನರ ಮಾತನ್ನು ನಂಬದೆ ತಿರಸ್ಕರಿಸಿ ಮಾತನಾಡಿದ್ದರು. ನಾವು ಆ ಮನೆಯನ್ನು ಬಿಟ್ಟು ಹೊರಟುಬಂದಮೇಲೆ ಇಪ್ಪತ್ತು ದಿನಗಳು ಕಳೆದಿದ್ದಿತು. ಆಗೊಂದು ದಿನ ನಮ್ಮ ಭಾವನ ವರ ಅಂಗಿಜೇಬಿನಲ್ಲಿ ಮಧ್ಯಾಹ್ನ ನಾಲ್ಕು ಗಂಟೆಯಲ್ಲಿಟ್ಟಿದ್ದ ಹತ್ತು ಪಾವಲಿಗಳಲ್ಲಿ ನಾಲ್ಕು ಪಾವಲಿಗಳು ಕಮ್ಮಿಯಾಗಿದ್ದು ವಂತೆ ? ಅವರು ಸಾಯಂಕಾಲ ಎಂಟುಗಂಟೆಗೆ ಮನೆಗೆ ಬಂದು ಏನೋ ಖರ್ಚಿಗಾಗಿ ಜೇಬಿನಲ್ಲಿದ್ದ ದುಡ್ಡನ್ನು ನೋಡಲು ನಾಲ್ಕು ಪಾ ವಲಿಗಳು ಇರಲಿಲ್ಲವಂತೆ ! ಮನೆಯಲ್ಲಿ ಯಾರನ್ನು ಕೇಳಿದರೂ ನನಗೆ ಗೊತ್ತಿಲ್ಲ, ತನಗೆ ಗೊತ್ತಿಲ್ಲವೆಂದು ಹೇಳಿ ಬಿಟ್ಟರು. ನಮ್ಮ ಭಾವನವರಿಗೆ ಯಾರಮೇಲೆ ಸಂದೇಹ ಪಡಲಿಕ್ಕೂ ಕಾರಣವಿಲ್ಲದ್ದರಿಂದಲೂ ಮನೆಯಲ್ಲೆಲ್ಲರೂ ನಂಬಿಕೆಗೆ ಅರ್ಹರೆಂದು ತಿಳಿದಿದ್ದುದರಿಂದಲೂ ಸುಮ್ಮನಾಗಿಬಿಟ್ಟು ಕೈಕಾಲು ತೊಳೆದುಕೊಂಡು ಸಂಧ್ಯಾವಂದನೆ ಗಾಗಿ ಬೀದಿಜಗಲಿಯ ಮೇಲೆ ಹೋಗಿ ಕುಳಿತು ಕೊಂಡರು. ಆಗ ನಡುಬೀದಿಯಲ್ಲಿ ಆದಿಕೊಂಡು ಬರುತ್ತಿದ್ದ ನಮ್ಮ ಮನೆಯ ಚಂಡಕೇಶವನೂ ಮಗ್ಗು ಲುಮನೆ ನಾರಾಯಣ ನೆಂಬ 11 ವರ್ಷದ ಹುಡುಗನೂ ಈ ಕೆಳಗೆ ಕಂಡಂತೆ ಸಂಭಾಷಿಸುತ್ತಿದ್ದರು., ನಾರಾಯಣ-ಎಲೋ ! ಕೇಶವ, ನೀನು ಈ ದಿನ ಹೋಟಲಿನಲ್ಲಿ ಕೊಡಿಸಿದ ತಿಂಡಿ ಬಹುರುಚಿಯಾಗಿತ್ತು ಕಣೋ, ಅದರಲ್ಲೂ ಬಾಳೆಕಾಯಿಪಕೋಡವಂತೂ ತುಂಬಾ ಚೆನ್ನಾಗಿತ್ತು.