ಪುಟ:ನನ್ನ ಸಂಸಾರ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನನ್ನ ಸಂಸಾರ 57

     ಈರೀತಿಯಾಗಿ ಸಮಸ್ತ ವೃತ್ತಾಂತವೂ ನನಗೆ ಪತ್ರಮೂಲಕವಾಗಿ ತಿಳಿದು ಬಂದಿತು-ಹೀಗೆಯೇ ಇನ್ನೂ ಒಂದು ತಿಂಗಳು ಕಳೆದಿತು. ನಮ್ಮ ಯಜಮಾನರಿಗೆ ಅಷ್ಟು ಹೊತ್ತಿಗೆ ರಜವು ಮುಗಿದುದರಿಂದ ನನ್ನನ್ನು ಕರೆದು ಕೊಂಡು ಹೋಗಲು ರಂಗಪುರಕ್ಕೆ ಬಂದರು.
     ನಾವು ರಂಗಪುರದಿಂದ ಶ್ರೀನಗರಕ್ಕೆ ಬಂದು ನಮ್ಮ ಯಜಮಾನರು ಹೊಸದಾಗಿ ಹತ್ತು ರೂಪಾಯಿ ಬಾಡಿಗೆಗೆ ಮಾಡಿದ್ದ ಒಂದು ದಿವ್ಯ ಗೃಹದಲ್ಲಿ ಸಂಸಾರ ಮಾಡಲಾರಂಭಿಸಿದೆವು. ಅದೇ ತಿಂಗಳಲ್ಲೇ ನಮ್ಮ ಯಜಮಾನರಿಗೆ 15ರೂಪಾಯಿ ಸಂಬಳ ಹೆಚ್ಚಾಯಿತು. ನಮ್ಮ ಭಾವನವರಿಗೂ 100ರೂಪಾಯಿಗಳು ಆತಿಂಗಳಿಂದ ಬರಲಾರಂಭವಾಯಿತು. ಇನ್ನೊಂದು ತಿಂಗಳಿಗೆ ನಮ್ಮ ಭಾವನವರ ಮಗು ವಿದ್ಯಾಮೂರ್ತಿಗೆ ಉಪನಯನವೂ ನಮ್ಮ ಹುಡುಗಿ (ಸಪತ್ನಿ ಪುತ್ರಿ) ಸೀತಾಲಕ್ಷ್ಮಿಗೆ ವಿವಾಹ ಲಗ್ನಪೂ ಹರಪುರದಲ್ಲಿ ಬೆಳೆಯಲು ನಿಷ್ಕರ್ಷೆ ಯಾಗಿರುವುದು. ನಾವೆಲ್ಲರೂ ಅಲ್ಲಿಗೆ ಹೋಗ ಬೇಕಾಗಿದೆ. ಇಂದೀಗಲೇ ನಮ್ಮ ಸಂಸಾರವು ಶಾಂತಿ ಗೃಹದಂತೆ ರಾರಾಜಿಸುತ್ತೆಲಿದೆ. ವಿಷಬೀಜವೂ ವಿಷಲತೆಯೂ ಧ್ವಂಸವಾಗಿ ಸರ್ವತ್ರ ಅಮೃತ ವರ್ಷಣವು ವರ್ಷ ಸುತಲಿದೆ. ನಾನು ಪತಿಯ ಬೋಧೆಗಳನ್ನು ಮನನಮಾಡುತ್ತಾ ಪತಿಸೇವೆಯನ್ನು ತೃಪ್ತಿ ಕರವಾಗಿ ಮಾಡಲು ಆರಂಭಮಾಡಿರುವೆನು. ಸೋದರಿಯರೇ! ಪುನಃ ನಮ್ಮ ಸಂಸಾರದಲ್ಲಿ ಅಶಾಂತಿ ಯುಂಟಾಗಲು ಕಾರಣವೇನೂ ಇರದು. ನನ್ನೀ ಸಂಸಾರಸ್ಥಿತಿಯನ್ನು ನೋಡಿ-ಓದಿ, ಸರ್ವರೂ ಗೃಹಚ್ಛಿದ್ರಗಳನ್ನು ಕಳೆದು ಸುಖಿಗಳಾಗಲೆಂದೂ, ನಮ್ಮೀ ಭಾರತ ಭೂಮಾತೆಯು ಸದ್ಗೃಹಿಣಿಯರಿಂದ ಕೂಡಿ ಚಿರಕಾಲ ರಾರಾಜಿಸಲೆಂದೂ ಮಂಗಳ ಪರಂಪರೆಗಳು ಗೃಹಗೃಹದಲ್ಲೂ ವೃದ್ಧಿ ಯಾಗಲೆಂದೂ ಅನನ್ಯ ಭಾವದಿಂದ ಪರಮಾತ್ಮನನ್ನು ಧ್ಯಾನಿಸಿ ವಿಶ್ರಾಂತಿ ಹೊಂದುವೆನು. ಸಮಯ ಬಂದಾಗ ಪುನಃ ನಿಮ್ಮ ಸಂದರ್ಶನವನ್ನು ತೆಗೆದುಕೊಳ್ಳಲು ಅಡ್ಡಿಯಿಲ್ಲ.
                     ನಮ್ಮ ಭಗಿನೀಪರ್ಗಕ್ಕೆ ಶುಭವಾಗಲಿ !!!
                               ಸಂಪೂರ್ಣ೦.
          printed by B. V. Narasimha Tyengar, at the 
                ROYAL PRINTING PRESS, MYSORE.