ಲಲಿತೆಯು ಎರಡು ವರ್ಷದ ತನ್ನ ಮಗುವನ್ನು ಎತ್ತಿಕೊಂಡು ಬೀದಿಯ ಬಾಗಿಲಿಗೆ ಬಂದಳು. ಜಗಲಿಯ ಮೇಲೆ ಯಾರೋ ಮಲಗಿರುವಂತೆ ತೋರಿತು. ವಿಚಾರಿಸಿ ನೋಡ ಲು ಆ ವ್ಯಕ್ತಿಯು ಬೆಳಿಗ್ಗೆ ಬಂದಿದ್ದ ಭಿಕ್ಷುಕನೆಂದು ತಿಳಿದುಬಂದಿತು. ಲಲಿತೆಗೆ ಸಂಶ ಯವುಂಟಾಯಿತು. ಆಗ ಆ ಭಿಕ್ಷುಕನು ಮೃದುಸ್ವರದಿಂದ, “ತಾಯಿ! ಮುಂದಿನೂ ರಿಗೆ ಹೋಗಲು ಕತ್ತಲಾದುದರಿಂದ ಈ ರಾತ್ರಿ ಇಲ್ಲಿ ಮಲಗಿದ್ದು ಬೆಳಿಗ್ಗೆ ಮುಂದಕ್ಕೆ ಹೋಗುವೆನು” ಎಂದು ಹೇಳಲು ಲಲಿತೆಯು ಧೈರ್ಯಗೊಂಡು ಒಳಕ್ಕೆ ಹೋದಳು. ಆ ದಿನ ಮನೆಯಲ್ಲಿ ಲಲಿತೆಯೊಬ್ಬಳೇ ಇದ್ದಳು. ಆಕೆಯ ಪತಿಯು ಪರಸ್ಥಳಕ್ಕೆ ಹೋಗಿದ್ದುದರಿಂದಲೂ ಆತನು ಮಾರನೆ ದಿನ ಬೆಳಿಗ್ಗೆ ಬರುವ ವಾಯಿದೆ ಇದ್ದುದರಿಂದ ಲೂ ಏಕಾಂಗಿಯಾಗಿ ಆ ರಾತ್ರಿ ಲಲಿತೆಯು ಆ ಗುಡಿಸಲಿನಲ್ಲಿರುವುದು ದುಸ್ತರವಾಗಿ ಹೋಯಿತು. ಕಾರ್ಯಾಂತರಗಳಿಂದ ಆಕೆಯ ಪತಿಯು ಅವಳೊಬ್ಬಳನ್ನೇ ಅಲ್ಲಿ ಬಿಟ್ಟು ಹೋಗಬೇಕಾಗಿ ಬಂದಿದ್ದಿತು. ಲಲಿತೆಯು ಆಗ ಏನು ಮಾಡಬಲ್ಲಳು? ತನ್ನ ಪತಿ ಯನ್ನೇ ಧ್ಯಾನಿಸುತ್ತಾ ಊಟವನ್ನು ಮಾಡಿ ಕೈತೊಳೆದುಕೊಂಡು ಒಳಗೆ ಹೋದಳು. ಹೋಗುವಾಗ ಭಿಕ್ಷುಕನು ಜಗಲಿಯ ಮೇಲೆ ಮಲಗಿರಲಿಲ್ಲ. ಲಲಿತೆಯು ಒಳಕ್ಕೆ ಹೋಗಿ ಬಾಗಿಲನ್ನು ಭದ್ರವಾಗಿ ಮುಚ್ಚಿದಳು. ಕೂಡಲೆ ಹಾಸಿಗೆಯನ್ನು ಹಾಸಿ ಮಲಗಲು ಸನ್ನಾಹಮಾಡುತ್ತಿದ್ದಾಗ ಆ ಗುಡಿಸಲಿನ ಮೂಲೆಯೊಂದರಲ್ಲಿ ಯಾರೋ ಕೆಮ್ಮಿದಂತೆ ಕೇಳಿಸಿತು. ದೀಪದಲ್ಲಿ ಎಣ್ಣೆ ಮುಗಿದು ಆರಿಹೋಗುವ ಸ್ಥಿತಿಯಲ್ಲಿ ದ್ದಿತು. ಆ ಸಣ್ಣ ಉರಿಯಲ್ಲೇ ಆ ಮೂಲೆಯನ್ನು ದೃಷ್ಟಿಸಿ ನೋಡಲು ಅಲ್ಲಿ ಒಬ್ಬ ಪುರುಷ ವ್ಯಕ್ತಿಯು ನಿಂತಿದ್ದಂತೆ ಬೋಧೆಯಾಯಿತು. ಮತ್ತು ಆ ವ್ಯಕ್ತಿಯು ತನ್ನ ಕಡೆಗೇ ನಡೆದು ಬರುತ್ತಿರುವುದನ್ನು ಲಲಿತೆಯು ನೋಡಿದಳು. ಆಕೆಯ ದೇಹವು ಗಡಗಡನೆ ನಡುಗ ತೊಡಗಿತು. ಬಾಯಲ್ಲಿ ಮಾತೇ ಹೊರಡದು, ಆಗ ಆ ಕಳ್ಳ ಭಿಕ್ಷುಕನು,“ ನೀನು ಕೂಗಿಕೊಂಡರೆ ನಿನ್ನ ಪ್ರಾಣವನ್ನು ಕಳೆದುಬಿಡುವೆನು.” ಎಂದು ಆಕೆ ಯನ್ನು ಬೆದರಿಸಿದನು. ತನ್ನ ಮನೆಯಲ್ಲಿರುವ ಸರ್ವಸ್ವವನ್ನೂ ನಿನಗೆ ಒಪ್ಪಿಸುವೆನೆಂದು ಲಲಿತೆಯು ಅವನನ್ನು ಪ್ರಾರ್ಥಿಸಿದಳು. ಆಗ ಅವನು,ನಾನು ಹಣದಾಸೆಯಿಂದ ಇಲ್ಲಿಗೆ ಬರಲಿಲ್ಲ. ನಿನ್ನಲ್ಲಿ ಮೋಹಿತನಾಗಿ ಇಲ್ಲಿಗೆ ಬಂದಿರುವೆನೆಂದು ಹೇಳಿದನು. ಈ ಮಾತನ್ನು ಕೇಳಿ ಲಲಿತೆಗೆ ದೇಹದಮೇಲೆ ಸ್ಟೈತಿಯೇ ತಪ್ಪಿತು. ಆದರೂ ಅವಳು ಆಗ ಧೈರ್ಯಮಾಡಿ ಅಯ್ಯ!ನನ್ನ ಮಗುವನ್ನು ಬಹಿರ್ಭೂಮಿಗೆ ಕರೆದುಕೊಂಡು ಹೋಗಿದ್ದು ಬಂದು ನಿನ್ನ ಮಾತನ್ನು ನಡೆಯಿಸುವೆನೆಂದು ಹೇಳಿದಳು. ಆ ಚಂಡಾಲನು ಅದಕ್ಕೊಪ್ಪದೆ ತಾನೇ ಮಗುವನ್ನು ಕರೆದುಕೊಂಡು ಹೋಗಿಬರುವೆನಂದು ಹೇಳಲು ಲಲಿತೆಯು ಉಪಾ ಯೂಂತರವನ್ನು ಕಾಣದೆ ಮಗುವನ್ನು ಮುದ್ದಿಸಿ ಆ ಪಾಪಿಯ ಕೈಗೆ ಕೊಟ್ಟಳು. ಅವನು ಹೊರಗೆ ಕಾಲಿಟ್ಟೂಡನೆಯೇ ಲಲಿತೆಯು ಬಾಗಿಲನ್ನು ಬಂಧಿಸಿ ಬಿಟ್ಟಳು. ಭಿಕ್ಷುಕನು,
ಪುಟ:ನನ್ನ ಸಂಸಾರ.djvu/೬೯
ಗೋಚರ