ಪುಟ:ನನ್ನ ಸಂಸಾರ.djvu/೭೬

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

2 ಕಾದಂಬರೀ ಸಂಗ್ರಹ

ಬ್ಬನು ಆ ಜನಗಳ ಗುಂಪಿನಲ್ಲಿ ನುಗ್ಗಿಬಂದು ವರನ ಕಿವಿಯಲ್ಲಿ ಏನೋ ಹೇಳಿ ತಕ್ಷಣ ಅದೃಶ್ಯನಾದನು. ಮಧುಸೂದನನು ಆತನಮಾತನ್ನು ಕೇಳಿ ವಿಷಣ್ಣತೆಯನ್ನು ಹೊಂದಿ ದನಾದರೂ ಕೂಡಲೇ ಗಾಂಭೀರ್ಯವನ್ನು ಹೊಂದಿ ಪುರೋಹಿತನ ಕಡೆ ತಿರುಗಿ ಮೂರು ನಿಮಿಷ ವಿರಾಮಬೇಕೆಂದು ಕೇಳಿದನು. ಪುರೋಹಿತನು ಒಡಂಬಡಲು ವರನು ತನ್ನ ಚಿಕ್ಕ ಮನೆಗೆ ಪ್ರವೇಶಮಾಡಿದನು.

    ಮೂರು ನಿಮಿಷ ಕಳೆಯಿತು. ಐದು-ಹತ್ತು-ಹದಿನೈದು ನಿಮಿಷಗಳೂ ಕಳೆ ದುವು. ಕಡೆಗೆ ಅರ್ಧಗಂಟೆ ಹೊತ್ತಾಯಿತು. ಮದವಣಿಗನು ಈಚಿಗೆ ಬಾರಲೇ ಇಲ್ಲ. ಕೂಡಲೇ ಎಲ್ಲರೂ ವರನನ್ನು ಹುಡುಕ ತೊಡಗಿದರು. ಮನೆಯಲ್ಲೆಲ್ಲಿಯೂ ವರನಿಲ್ಲ. ಎಲ್ಲರೂ ಭಯಭ್ರಾಂತರಾಗಿ ಮೂಲೆ ಮೂಲೆಯಲ್ಲಿ ಹುಡುಕಿದರು. ಎಲ್ಲಿಯೂ ಇಲ್ಲ. ಬೀದಿಯಕಡೆ ಹೋಗಿರಬಹುದೇ ಎಂದು ವಿಚಾರಿಸಲು ದ್ವಾರಪಾಲಕರು ಈಚೆಗೆ ಬರಲೇ ಇಲ್ಲವೆಂದು ಹೇಳಿಬಿಟ್ಟರು ಈಗ ಮಾಡುವದೇನು? ಸರ್ವತ್ರ ಹಾ-ಹಾ-ಕಾರ! ಇಂತಹ ವೇಳೆಯಲ್ಲಿ ಮದನಣಿಗನು ಮಾಯವಾದರೆ ಹಾಹಾಕಾರವಲ್ಲದೆ ಮತ್ತೇನು? ಸೋಮಸುಂದರನಿಗೆ ಏನೂ ತೋರಲಿಲ್ಲ. ತ್ರಿಯಂಬಕ ಶಾಸ್ತ್ರಿಯು ಲಗ್ನ ಸಮಯ ಕಳೆದುದಕ್ಕಾಗಿ ವೃಸನಪಡುತ್ತಾ ಒಂದು ಮೂಲೆಯಲ್ಲಿ ಕುಳಿತಿದ್ದರನು. ಆದರೆ ಆಗ ಒಂದು ಚಮತ್ಕಾರ ನಡೆದಿದ್ದಿತು. ಮಧುಸೂದನನ ಕಿರುಮನೆಯು ಒಳಗಡೆ ಬಂಧಿತವಾಗಿದ್ದಿತು. ಯಾರೆಷ್ಟು ಕೂಗಿದರೂ ಬಾಗಿಲು ತೆರೆಯಲ್ಪಡಲಿಲ್ಲ. ಎಲ್ಲರೂ ವಿಷಾದದಿಂದ ಕುಳಿತುಬಿಟ್ಟರು. ಸೋಮಸುಂದರನು ಕೆಲವು ಮಂದಿ ಸೇವಕರನ್ನು ಗುದ್ದಲಿ, ಹಾರೆಗಳೊಡನೆ ಕರೆತಂದು ಬಾಗಿಲನ್ನು ಇಡಿರೆತ್ತಿಸಿ ಒಳಹೊಕ್ಕನು. ಒಳಗೆ ಮಧುಸೂದನನಿರಲಿಲ್ಲ. ಆದರೆ ವರನ ಅರಿಶಿನದ ಪಂಚೆಯು ಮಾತ್ರ ಅಲ್ಲಿ ಬಿದ್ದಿದ್ದಿತು. ವರನಾಗಲೀ ವರನು ಹೋದ ದಾರಿಯಾಗಲೀ ಗೊತ್ತಾಗಲಿಲ್ಲ. ಸೋಮಸುಂದರನು ವ್ಯಸನದಿಂದ ಮೂರ್ಛಿತನಾದನು. ತಕ್ಷಣವೇ ಎಲ್ಲೆಲ್ಲಿಯೂ ಮದುವಣಿಗನೆಲ್ಲಿ ? ಎಂಬ ಕೂಗು ಹಬ್ಬುವುದಕ್ಕೆ ಆರಂಭವಾಯಿತು. ಊರಲ್ಲೆಲ್ಲಾ ಹುಡುಕಿದರೂ ವರನು ಸಿಕ್ಕಲಿಲ್ಲ. ಮದುವೆ ಮನೆಗೆ ಬಂದಿದ್ದವರೆಲ್ಲರೂ ವಿಷಾದವನ್ನು ಪ್ರದರ್ಶಿ ಸುತ್ತಾ ಮನೆಗೆ ಹೊರಟು ಹೋದರು. ವಿವಾಹ ಸಂಭ್ರಮಗಳೆಲ್ಲವೂ ಕ್ಷಣಕಾಲದಲ್ಲಿ ತಿರೋಹಿತವಾದುವು. ಸ್ವಲ್ಪ ಹೊತ್ತಿಗೆ ಮುಂಚೆ ಆನಂದ ಕೋಲಾಹಲದಿಂದ ತುಂಬಿದ್ದ ವಿವಾಹ ಮಂಟಪವು ಈಗ ರೋದನಧ್ವನಿಯಿಂದ ಕೂಡಿ ಭಯಂಕರವಾಗಿ ಕಾಣು ತಿತ್ತು.
   ಮೂರ್ಛಿತನಾಗಿ ಬಿದ್ದಿದ್ದ ಸೋಮಸುಂದರನನ್ನು ಆತನ ಪತ್ನಿ ತಾರಾಸುಂದ ರಿಯು ವ್ಯಸನದಿಂದ ಶೈತ್ಯೋಪಚಾರಮಾಡಿಸಿ ತನ್ನ ಶಯನ ಗೃಹಕ್ಕೆ ಕರೆದುಕೊಂಡು