ಪುಟ:ನನ್ನ ಸಂಸಾರ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ


ಮಧುಸೂದನ

5



ಭಾಸ್ಕರನು ಸ್ವಲ್ಪಹೊತ್ತು ಹಾಗೇ ಯೋಚಿಸಿ ಮಧ್ಯಾಹ್ನದಮೇಲೆ ಎಲ್ಲಾ
ವಿಷಯಗಳನ್ನೂ ಪರೀಕ್ಷಿಸುವುದಾಗಿಯೂ ಈಗ ಹೊತ್ತಾದ್ದರಿಂದ ಭೋಜನಾದಿಗಳನ್ನು
ಮುಗಿಸಿಕೊಳ್ಳುವುದು ಒಳ್ಳೆಯದೆಂದೂ ತಿಳಿಸಿದನು. ಸೋಮಸುಂದರನೂ ಒಪ್ಪಿ ಅವ
ನನ್ನು ಸ್ನಾನಾದಿಗಳನ್ನು ಮಾಡುವಂತೆ ಹೇಳಿ ಹೊರಟುಹೋದನು.
ಮೂರನೆಯ ಅಧ್ಯಾಯ.
____________
(ಭಾಸ್ಕರನು ಏನು ಯೋಚಿಸಿದನು?)
ಮಧ್ಯಾಹ್ನ ಸುಮಾರು ಎರಡು ಗಂಟೆಯ ಹೊತ್ತಿಗೆ ಸೋಮಸುಂದರನೂ
ಭಾಸ್ಕರನೂ ಮಧುಸೂದನನ ಕೊಠಡಿಗೆ ಬಂದು ಸೇರಿದರು.
ಭಾಸ್ಕರನು ಸೋಮಸುಂದರನನ್ನು ಕುರಿತು "ನೀವು ಈ ಕೊಠಡಿಯ ಸಮೀಪಕ್ಕೆ ಬಂದಾಗ ಒಳಗೆ ಅಗಣಿ
ಹಾಕಿತ್ತೆಂದು ಹೇಳಿದಿರಲ್ಲವೆ? ಹಾಗಾದರೆ ಒಳಗಿನಿಂದ ಹೋಗಲು ಬೇರೇ ಮಾರ್ಗ
ವಾವುದಾದರೂ ಇರುವುದೊ ? ಇಲ್ಲದಿದ್ದರೆ ಹಾಗೆ ಒಳಗಿನಿಂದ ಅಗಣಿ
ಹಾಕಿರಲು ಅದು ಹೇಗೆ ಸಾಧ್ಯವು ? ಆದ್ದರಿಂದ ನಿಮಗೆ ತಿಳಿಯದ ಯಾವದೋ ಒಂದು ಮಾರ್ಗ
ವು ಇರಲೇಬೇಕು" ಎಂಬದಾಗಿ ಹೇಳಿದನು.
ಸೋಮಸುಂದರ: ಸ್ವಾಮಿಾ, ನನಗೆ ತಿಳಿದಮಟ್ಟಿಗೆ ಇಲ್ಲಿ ಯಾವ ಗುಪ್ತ
ಮಾರ್ಗವೂ ಇಲ್ಲವು. ಇದೇ ಪ್ರಶ್ನೆಯನ್ನು ಪೋಲೀಸ್ ಮುಖ್ಯಾಧಿಕಾರಿಯೂ ನನ್ನ
ನ್ನು ಕೇಳಿದನು. ಈ ಮನೆಯು ನನ್ನ ಪಿತ್ರಾರ್ಜಿತವಾದುದು. ಇದರಲ್ಲಿ ಯಾವ ಗೂಢ
ಮಾರ್ಗವಿದ್ದರೂ ನನಗೆ ತಿಳಿದಿರಬೇಕು. ಆದರೂ ನನ್ನ ಪುತ್ರನನ್ನು ಹ್ಯಾಗೆ ಎತ್ತಿ ಕೊಂ
ಡು ಹೋಗಿರಬೇಕೆಂಬುವುದೂ ಒಳಗೆ ಅಗಣೀಹಾಕಿದ್ರೂ ನನಗೆ ತಿಳಿಯಲಸಾಧ್ಯವಾದ ಒಗಟಾಗಿದೆ.
ಭಾಸ್ಕರನು ತನ್ನ ಪತ್ತೇದಾರೀ ಮಾರ್ಗದ ಹುಡುಕುವಿಕೆಯನ್ನು ಪ್ರಾರಂಭಿಸಿದನು.
ಅವನು ಸೋಮಸುಂದರನನ್ನು ಕುರಿತು ಅಲ್ಲಿ ಎಲ್ಲಾ ಸಾಮಾನುಗಳೂ ಮಧುಸೂದ
ನನು ಕಾಣದೇ ಹೋದ ದಿನ ಇದ್ದ ಹಾಗೆಯೇ ಇದೆಯೋ ಎಂದು ಕೇಳಲು, ಅವನು
ಪೊಲೀಸಿನವರು ತಿರಿಗಿ ಪಾಕಿದ ಪದಾರ್ಥಗಳು ವಿನಹಾ ಉಳಿದವುಗಳೆಲ್ಲಾ ಹಾಗೆಯೇ
ಇರುವುದೆಂದು ತಿಳಿಸಿದನು. ಭಾಸ್ಕರನು ಹಾಗೇ ಸ್ವಲ್ಪ ಹೊತ್ತು ಆ ಕೊಠಡಿಯ
ಆಕಾರ ಮತ್ತು ಅದರ ರಚನೆ ಇವುಗಳನ್ನು ನೋಡುತ್ತಿದ್ದನು. ಅವನಿಗೆ ಯಾವ ವಿಧ